ದಾವಣಗೆರೆಯಾದ್ಯಂತ ಭಾರಿ ಮಳೆ, ನಾಶವಾಯ್ತು ಸಾವಿರಾರು ಎಕರೆ ಪೈರು

ದಾವಣಗೆರೆ: ಈ ಬಾರಿಯ ಮಾನ್ಸೂನ್, ರಾಜ್ಯದಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಸಹ ಉತ್ತರ ಕರ್ನಾಟಕ ಭಾಗದಲ್ಲಿ ರೌದ್ರಾವತಾರ ತಾಳಿದ್ದು, ಮಳೆಯ ಹೊಡೆತಕ್ಕೆ ಉತ್ತರ ಕರ್ನಾಟಕ ಅಕ್ಷರಶಃ ನಲುಗಿಹೋಗಿದೆ. ಉತ್ತರ ಕರ್ನಾಟಕದಲ್ಲಿ ಭಾರಿ ಮಳೆಯಿಂದಾಗಿ ಆ ಭಾಗದ ನದಿಗಳು ಉಕ್ಕಿ ಹರಿಯುತ್ತಿವೆ. ಜೊತೆಗೆ ನದಿಯ ಪ್ರವಾಹದಿಂದ ಆ ಭಾಗದ ಜನರು ಅಪಾರ ಪ್ರಮಾಣದ ಹಾನಿಗೆ ಒಳಗಾಗಿದ್ದಾರೆ. ಹೀಗಾಗಿ ದಾವಣಗೆರೆ ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಯಿಂದಾಗಿ ರೈತರು ಬೆಳೆದ ಫಸಲಿಗೆ ಬಾರಿ ಹೊಡೆತ ಬಿದ್ದಿದೆ. ದಾವಣಗೆರೆ ತಾಲೂಕಿನ ಯರವನಾಗತಿಹಳ್ಳಿ, […]

ದಾವಣಗೆರೆಯಾದ್ಯಂತ ಭಾರಿ ಮಳೆ, ನಾಶವಾಯ್ತು ಸಾವಿರಾರು ಎಕರೆ ಪೈರು
sadhu srinath

|

Sep 03, 2020 | 12:53 PM

ದಾವಣಗೆರೆ: ಈ ಬಾರಿಯ ಮಾನ್ಸೂನ್, ರಾಜ್ಯದಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಸಹ ಉತ್ತರ ಕರ್ನಾಟಕ ಭಾಗದಲ್ಲಿ ರೌದ್ರಾವತಾರ ತಾಳಿದ್ದು, ಮಳೆಯ ಹೊಡೆತಕ್ಕೆ ಉತ್ತರ ಕರ್ನಾಟಕ ಅಕ್ಷರಶಃ ನಲುಗಿಹೋಗಿದೆ.

ಉತ್ತರ ಕರ್ನಾಟಕದಲ್ಲಿ ಭಾರಿ ಮಳೆಯಿಂದಾಗಿ ಆ ಭಾಗದ ನದಿಗಳು ಉಕ್ಕಿ ಹರಿಯುತ್ತಿವೆ. ಜೊತೆಗೆ ನದಿಯ ಪ್ರವಾಹದಿಂದ ಆ ಭಾಗದ ಜನರು ಅಪಾರ ಪ್ರಮಾಣದ ಹಾನಿಗೆ ಒಳಗಾಗಿದ್ದಾರೆ. ಹೀಗಾಗಿ ದಾವಣಗೆರೆ ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಯಿಂದಾಗಿ ರೈತರು ಬೆಳೆದ ಫಸಲಿಗೆ ಬಾರಿ ಹೊಡೆತ ಬಿದ್ದಿದೆ.

ದಾವಣಗೆರೆ ತಾಲೂಕಿನ ಯರವನಾಗತಿಹಳ್ಳಿ, ತುರ್ಚಘಟ್ಟ, ಬೆಳವನೂರು, ಸೇರಿದಂತೆ ಕೆಲ ಗ್ರಾಮಗಳ‌ವ್ಯಾಪ್ತಿಯಲ್ಲಿ ಭರ್ಜರಿ ಮಳೆಯಾಗಿದ್ದು, ರೈತರು ಬೆಳೆದ ಭತ್ತ ಹಾಗೂ ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗೆ ನೀರು ನುಗ್ಗಿದೆ. ಕಟ್ಟಾವಿಗೆ ಬಂದಿದ್ದ ಬೆಳೆ ನಾಶವಾಗಿರುವುದರಿಂದ ಆ ಭಾಗದ ರೈತರಿಗೆ ದಿಕ್ಕು ತೋಚದಂತಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada