ಭಾರೀ ವರ್ಷಧಾರೆಗೆ ರಾಜಧಾನಿ ಬೆಂಗಳೂರು ಕಂಗಾಲು, ಹಲವೆಡೆ ಟ್ರಾಫಿಕ್‌ ಜಾಮ್‌

  • Publish Date - 11:29 pm, Wed, 9 September 20
ಭಾರೀ ವರ್ಷಧಾರೆಗೆ ರಾಜಧಾನಿ ಬೆಂಗಳೂರು ಕಂಗಾಲು, ಹಲವೆಡೆ ಟ್ರಾಫಿಕ್‌ ಜಾಮ್‌

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬಹತೇಕ ರಸ್ತೆಗಳು ಜಲಾವೃತಗೊಂಡಿದ್ದು ಜನಜೀವನಕ್ಕೆ ಭಾರೀ ತೊಂದರೆಯಾಗಿದೆ.

ನಗರದ ಓಕಳೀಪುರಂ ಅಂಡರ್ ಪಾಸ್‌ಗೆ ನೀರು ನುಗ್ಗಿದ್ದು ವಾಹನ ಸವಾರರು ಅಂಡರ್ ಪಾಸ್ ದಾಟಿ ಹೋಗಲು ಪರದಾಟ ಪಡುತ್ತಿದ್ದಾರೆ. ಕೆರೆಯಂತಾಗಿರುವ ಅಂಡರ್ ಪಾಸ್ ನಿಂದ ಫುಲ್ ಟ್ರಾಫಿಕ್ ಜಾಮ್ ಕೂಡಾ ಆಗಿದೆ.

ಪ್ರತಿಬಾರಿಯೂ ಓಕಳೀಪುರಂ ಅಂಡರ್ ಪಾಸ್ ಬಳಿ ಇದೇ ಪರಿಸ್ಥಿತಿ ಇರುತ್ತದೆ. ಆದ್ರೂ ಬಿಬಿಎಂಪಿ ನಿರ್ಲಕ್ಷ್ಯದಿಂದ ಅಂಡರ್ ಪಾಸ್‌ನಲ್ಲಿ ನೀರು ನಿಲ್ಲುತ್ತಿದ್ದು, ಇದರಿಂದಾಗಿ ಮೆಜೆಸ್ಟಿಕ್ ನಿಂದ ರಾಜಾಜಿನಗರ ಮಾಗಡಿ ರಸ್ತೆ ಕೂಡ ಸಿಕ್ಕಾಪಟ್ಟೆ ಪರದಾಡಬೇಕಾಗಿದೆ.

ಇಷ್ಟೇ ಅಲ್ಲ ಬೆಂಗಳೂರಿನ ಇತರ ಪ್ರಮಖ ಭಾಗಗಳಲ್ಲೂ ಮಳೆಯಿಂದಾಗಿ ಸಾಕಷ್ಟು ತೊಂದರೆಯಾಗಿದ್ದು, ಟ್ರಾಫಿಕ್‌ ಸಮಸ್ಯೆ ಎದುರಾಗಿದೆ. ರಾಜಾಜಿನಗರ, ವಿಜಯನಗರ, ನಾಯಂಡಹಳ್ಳಿ, ಕೊಡಿಗೇಹಳ್ಳಿ ಮೈಸೂರು ರಸ್ತೆ ಸೇರಿದಂತೆ ಜನರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.

Click on your DTH Provider to Add TV9 Kannada