ಸಿಎಂ ರಾಜಕೀಯ ಕಾರ್ಯದರ್ಶಿಗಳಿಗೆ ಸಚಿವ ಸ್ಥಾನಮಾನ -ರೇಣುಕಾಚಾರ್ಯ ಸೇರಿದಂತೆ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಸಿಎಂ ರಾಜಕೀಯ ಕಾರ್ಯದರ್ಶಿಗಳಿಗೆ ಸಚಿವ ಸ್ಥಾನಮಾನ ನೀಡಿರುವ ವಿಚಾರವಾಗಿ ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠದಿಂದ ನೋಟಿಸ್ ಜಾರಿಯಾಗಿದೆ. ಸಚಿವ ಸ್ಥಾನಮಾನ ಪ್ರಶ್ನಿಸಿ ಸಮಾಜ ಪರಿವರ್ತನಾ ಸಮುದಾಯದಿಂದ ಪಿಐಎಲ್ ಸಲ್ಲಿಸಲಾಗಿತ್ತು.

  • TV9 Web Team
  • Published On - 21:19 PM, 18 Jan 2021
ಸಿಎಂ ರಾಜಕೀಯ ಕಾರ್ಯದರ್ಶಿಗಳಿಗೆ ಸಚಿವ ಸ್ಥಾನಮಾನ -ರೇಣುಕಾಚಾರ್ಯ ಸೇರಿದಂತೆ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಶಾಸಕ ಎಂ.ಪಿ.ರೇಣುಕಾಚಾರ್ಯ

ಬೆಂಗಳೂರು: ಸಿಎಂ ರಾಜಕೀಯ ಕಾರ್ಯದರ್ಶಿಗಳಿಗೆ ಸಚಿವ ಸ್ಥಾನಮಾನ ನೀಡಿರುವ ವಿಚಾರವಾಗಿ ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠದಿಂದ ನೋಟಿಸ್ ಜಾರಿಯಾಗಿದೆ. ಸಚಿವ ಸ್ಥಾನಮಾನ ಪ್ರಶ್ನಿಸಿ ಸಮಾಜ ಪರಿವರ್ತನಾ ಸಮುದಾಯದಿಂದ ಪಿಐಎಲ್ ಸಲ್ಲಿಸಲಾಗಿತ್ತು.

ಸಚಿವ ಸ್ಥಾನಮಾನ ನೀಡಲು ಸಂವಿಧಾನದಲ್ಲಿ ಮಿತಿ ಇದೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಮತ್ತು ಮಾಧ್ಯಮ ಸಲಹೆಗಾರರಿಗೂ ಈ ಸ್ಥಾನಮಾನ ನೀಡಲಾಗಿದೆ. ಹಾಗಾಗಿ, ಕಾನೂನುಬಾಹಿರ ನೇಮಕ ರದ್ದುಪಡಿಸಲು ಅರ್ಜಿದಾರರ ಪರ ವಕೀಲ ಎಸ್.ಬಸವರಾಜ್ ಮನವಿ ಮಾಡಿದ್ದದರು. ಹೀಗಾಗಿ, ರೇಣುಕಾಚಾರ್ಯ ಸೇರಿದಂತೆ ಪ್ರತಿವಾದಿಗಳಿಗೆ ಹೈಕೋರ್ಟ್​ಗೆ ನೋಟಿಸ್ ಜಾರಿಮಾಡಿದೆ.

‘ಜೀವನದಲ್ಲಿ ಒಮ್ಮೆ ತಪ್ಪುಮಾಡಿದೆ, ಇನ್ಮುಂದೆ ಹಾಗೆ ಮಾಡಲ್ಲ.. ಯಾವುದೇ ರೆಸಾರ್ಟ್, 5 ​ಸ್ಟಾರ್​ ಹೋಟೆಲ್​ಗೆ ಹೋಗಲ್ಲ’