H. ವಿಶ್ವನಾಥ್ಗೆ ಬಿಗ್ ಶಾಕ್! R. ಶಂಕರ್, MTB ನಾಗರಾಜ್ಗೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್
ಹೆಚ್.ವಿಶ್ವನಾಥ್ ಸಚಿವರಾಗಲು ಅನರ್ಹರಾಗಿದ್ದಾರೆ ಎಂದು ಹೈಕೋರ್ಟ್ ವಿಭಾಗೀಯ ಪೀಠ ಮಧ್ಯಂತರ ಆದೇಶ ಹೊರಡಿಸಿದೆ. ಈ ಮೂಲಕ ಸಚಿವರಾಗುವ ಹಂಬಲದಲ್ಲಿದ್ದ H.ವಿಶ್ವನಾಥ್ಗೆ ಬಿಗ್ ಶಾಕ್ ನೀಡಿದೆ.

ಬೆಂಗಳೂರು: ಹೆಚ್.ವಿಶ್ವನಾಥ್ ಸಚಿವರಾಗಲು ಅನರ್ಹರಾಗಿದ್ದಾರೆ ಎಂದು ಹೈಕೋರ್ಟ್ ವಿಭಾಗೀಯ ಪೀಠ ಮಧ್ಯಂತರ ಆದೇಶ ಹೊರಡಿಸಿದೆ. ಈ ಮೂಲಕ ಸಚಿವರಾಗುವ ಹಂಬಲದಲ್ಲಿದ್ದ H.ವಿಶ್ವನಾಥ್ಗೆ ಬಿಗ್ ಶಾಕ್ ನೀಡಿದೆ. ಆದರೆ ಆರ್.ಶಂಕರ್, ಎಂಟಿಬಿ ನಾಗರಾಜ್ಗೆ ಹೈಕೋರ್ಟ್ ಬಿಗ್ ರಿಲೀಫ್ ಕೊಟ್ಟಿದೆ.
ಅವರಿಬ್ಬರೂ ಮರು ಆಯ್ಕೆಯಾಗಿದ್ದಾರೆ, ಹಾಗಾಗಿ ಅನರ್ಹತೆಯಿಲ್ಲ ಪರಿಷತ್ ಸದಸ್ಯ H. ವಿಶ್ವನಾಥ್ ಸಚಿವರಾಗಲು ಅನರ್ಹ. ಸಂವಿಧಾನದ ಆರ್ಟಿಕಲ್ 164(1B), 361B ಅಡಿ ಅನರ್ಹ. ಆದರೆ, ಆರ್. ಶಂಕರ್, ಎಂಟಿಬಿ ನಾಗರಾಜ್ಗೆ ಬಿಗ್ ರಿಲೀಫ್ ಕೊಟ್ಟ ಹೈಕೋರ್ಟ್ ವಿಭಾಗೀಯ ಪೀಠ ತನ್ನ ಮಧ್ಯಂತರ ಆದೇಶದಲ್ಲಿ ಸಂವಿಧಾನದಡಿ ಮರು ಆಯ್ಕೆ ಹಿನ್ನೆಲೆ ಅನರ್ಹತೆಯಿಲ್ಲ. ಸಚಿವರಾಗಲು ಇಬ್ಬರಿಗೂ ಅನರ್ಹತೆಯಿಲ್ಲ ಎಂದು ಆದೇಶ ಹೊರಡಿಸಿದೆ.
ರಾಜ್ಯಪಾಲರಲ್ಲ; ಅನರ್ಹತೆಯನ್ನು ಮುಖ್ಯಮಂತ್ರಿಯೇ ಪರಿಗಣಿಸಬೇಕು- ಕೋರ್ಟ್ ಕಿವಿಮಾತು ಪ್ರಕರಣದಲ್ಲಿ ರಾಜ್ಯಪಾಲರಿಗೆ ನಿರ್ದೇಶನ ನೀಡಲು ಕೋರ್ಟ್ ನಿರಾಕರಿಸಿದೆ. ರಾಜ್ಯಪಾಲರು ಸಂವಿಧಾನಬದ್ಧವಾಗಿ ಅವರು ಸಚಿವರನ್ನು ನೇಮಿಸಬೇಕು. ಮುಖ್ಯಮಂತ್ರಿ ಸಂವಿಧಾನದಡಿ ನೇಮಕಗೊಂಡಿದ್ದಾರೆ. ಹಾಗಾಗಿ, ವಿಶ್ವನಾಥ್ ಅವರನ್ನು ಶಿಫಾರಸು ಮಾಡುವ ಮುನ್ನ ಅವರ ಅನರ್ಹತೆಯನ್ನು Disqualification ಮುಖ್ಯಮಂತ್ರಿ ಪರಿಗಣಿಸಬೇಕು ಎಂದು ಸಿಜೆ A.S. ಒಕಾ, ನ್ಯಾ. S. ವಿಶ್ವಜಿತ್ ಶೆಟ್ಟಿ ಅವರ ಪೀಠ ಕಿವಿಮಾತು ಹೇಳಿದೆ. ಆದರೆ, H.ವಿಶ್ವನಾಥ್ MLCಯಾಗಿ ನಾಮನಿರ್ದೇಶನಗೊಂಡಿದ್ದರು. ಹಾಗಾಗಿ, ಸಂವಿಧಾನದಡಿ ಅವರ ಮರು ಆಯ್ಕೆಗೆ ಅವಕಾಶವಿದೆ ಎಂದು ವಿಭಾಗೀಯ ಪೀಠ ಮಧ್ಯಂತರ ಆದೇಶದಲ್ಲಿ ತಿಳಿಸಿದೆ.
Published On - 3:48 pm, Mon, 30 November 20