ಬೆಂಗಳೂರು ಟರ್ಫ್‌ ಕ್ಲಬ್‌ RTI ವ್ಯಾಪ್ತಿಗೆ ಬರುತ್ತದೆ -ಹೈಕೋರ್ಟ್ ಮಹತ್ವದ ತೀರ್ಪು

ನಗರದ ಟರ್ಫ್‌ ಕ್ಲಬ್‌ RTI ವ್ಯಾಪ್ತಿಗೆ ಬರುತ್ತದೆ ಎಂದು ಹೈಕೋರ್ಟ್ ಏಕಸದಸ್ಯ ಪೀಠದಿಂದ ಮಹತ್ವದ ತೀರ್ಪು ಹೊರಬಿದ್ದಿದೆ.

  • TV9 Web Team
  • Published On - 17:32 PM, 16 Jan 2021
ಬೆಂಗಳೂರು ಟರ್ಫ್‌ ಕ್ಲಬ್‌ RTI ವ್ಯಾಪ್ತಿಗೆ ಬರುತ್ತದೆ -ಹೈಕೋರ್ಟ್ ಮಹತ್ವದ ತೀರ್ಪು
ಬೆಂಗಳೂರು ಟರ್ಫ್ ಕ್ಲಬ್

ಬೆಂಗಳೂರು: ನಗರದ ಟರ್ಫ್‌ ಕ್ಲಬ್‌ RTI ವ್ಯಾಪ್ತಿಗೆ ಬರುತ್ತದೆ ಎಂದು ಹೈಕೋರ್ಟ್ ಏಕಸದಸ್ಯ ಪೀಠದಿಂದ ಮಹತ್ವದ ತೀರ್ಪು ಹೊರಬಿದ್ದಿದೆ. ಬೆಂಗಳೂರು ಟರ್ಫ್ ಕ್ಲಬ್, ಲೆಡೀಸ್ ಕ್ಲಬ್, ಮೈಸೂರು ರೇಸ್ ಕ್ಲಬ್ ಹಾಗೂ ಇನ್​​ಸ್ಟಿಟ್ಯೂಟ್‌ ಆಫ್ ಇಂಜಿನಿಯರ್ ಸಂಸ್ಥೆಗಳ ಅರ್ಜಿ ವಜಾಗೊಳಸಿದ ಹೈಕೋರ್ಟ್​ ಮಹತ್ವದ ತೀರ್ಪನ್ನು ನೀಡಿದೆ.

ರಾಜ್ಯ ಸರ್ಕಾರ ರಿಯಾಯಿತಿ ದರದಲ್ಲಿ ಇವುಗಳಿಗೆ ಭೂಮಿ ಗುತ್ತಿಗೆ ನೀಡಿದೆ. ಪರೋಕ್ಷವಾಗಿ ರಾಜ್ಯ ಸರ್ಕಾರ ಆರ್ಥಿಕ ರಿಯಾಯಿತಿ ನೀಡಿದೆ. ಮಾರುಕಟ್ಟೆ ಮೌಲ್ಯಕ್ಕೆ ಹೋಲಿಸಿದ್ರೆ ಕೋಟ್ಯಾಂತರ ರೂಪಾಯಿ ಮೊತ್ತದ ರಿಯಾಯಿತಿ ನೀಡಿದೆ. ಹಾಗಾಗಿ, ರಾಜ್ಯ ಸರ್ಕಾರದ ಭೂಮಿ ಸಾರ್ವಜನಿಕರ ಭೂಮಿ ಇದ್ದಂತೆ. ಭೂಮಿ ಗುತ್ತಿಗೆ ಪಡೆದವ್ರು ಜನರಿಗೆ ಉತ್ತರದಾಯಿ‌ಯಾಗುತ್ತಾರೆ. ಹೀಗಾಗಿ, ಈ ಸಂಸ್ಥೆಗಳು ಸಾರ್ವಜನಿಕ ಪ್ರಾಧಿಕಾರಗಳು. ಈ ಸಂಸ್ಥೆಗಳಿಂದ RTI ಕಾಯ್ದೆಯಡಿ ಮಾಹಿತಿ ಪಡೆಯಬಹುದು ಎಂದು ತನ್ನ ತೀರ್ಪಿನಲ್ಲಿ ಹೈಕೋರ್ಟ್​ ಉಲ್ಲೇಖಿಸಿದೆ.

ಈ ಮೂಲಕ ಹೈಕೋರ್ಟ್ ಮಾಹಿತಿ ಆಯೋಗದ ಆದೇಶ ಎತ್ತಿ ಹಿಡಿದಿದೆ. ನ್ಯಾ.ಪಿ.ಬಿ.ಬಜಂತ್ರಿರವರಿದ್ದ ಪೀಠದಿಂದ ಮಹತ್ವದ ತೀರ್ಪು ಹೊರಬಿದ್ದಿದೆ.

ಇದು ಮಾವು-ಹಲಸು ಅಲ್ಲ.. ಜೋಯಿಡಾದ ಗೆಡ್ಡೆ-ಗೆಣಸು ಮೇಳ: ತರಹೇವಾರಿ ಸಾವಯವ ಗೆಡ್ಡೆಗಳ ನಿಧಿ!