ಕೋಟೆನಾಡಿನಲ್ಲಿ ರಾಜಕೀಯ ದ್ವೇಷ: ಹೋಟೆಲ್​ಗೆ ಬೆಂಕಿ ಇಟ್ಟು ಪ್ರತೀಕಾರ

ಗ್ರಾಮ ಪಂಚಾಯತಿ ಚುನಾವಣೆಗೆ ಅಂಜುಮಯ್ಯ, ಕ್ಷಿತಿಜಾ ಸ್ಪರ್ಶಿಸಿದ್ದು, ಈ ಚುನಾವಣೆಯಲ್ಲಿ ಅಭ್ಯರ್ಥಿಗಳಿಬ್ಬರು 376 ಮತಗಳನ್ನು ಪಡೆದು ಸಮಬಲ ಸಾಧಿಸಿದ್ದರು. ಈ ಹಿನ್ನೆಲೆಯಲ್ಲಿ ಟಾಸ್ ಮೂಲಕ ಅಂಜುಮಯ್ಯನನ್ನು ಸಾಣೀಕೆರೆ ಗ್ರಾಮ ಸದಸ್ಯನನ್ನಾಗಿ ಅಯ್ಕೆ ಮಾಡಿದ್ದರು.

ಕೋಟೆನಾಡಿನಲ್ಲಿ ರಾಜಕೀಯ ದ್ವೇಷ: ಹೋಟೆಲ್​ಗೆ ಬೆಂಕಿ ಇಟ್ಟು ಪ್ರತೀಕಾರ
ಹೋಟೆಲ್​ಗೆ ಬೆಂಕಿ ಇಟ್ಟ ದೃಶ್ಯ
preethi shettigar

| Edited By: sadhu srinath

Jan 01, 2021 | 11:45 AM

ಚಿತ್ರದುರ್ಗ: ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆ ರಾಜಕೀಯ ದ್ವೇಷದಿಂದ ಹೋಟೆಲ್​ಗೆ ಬೆಂಕಿ ಇಟ್ಟ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಸಾಣೀಕೆರೆಯಲ್ಲಿ ನಡೆದಿದೆ.

ಟಾಸ್​ ಮೂಲಕ ವಿಜೇತ ಎಂದು ಸಾರಿದ್ದಕ್ಕೆ ಹೀಗಾ ಮಾಡೋದು.. ಗ್ರಾಮ ಪಂಚಾಯತಿ ಚುನಾವಣೆಗೆ ಅಂಜುಮಯ್ಯ, ಕ್ಷಿತಿಜಾ ಸ್ಪರ್ಶಿಸಿದ್ದು, ಈ ಚುನಾವಣೆಯಲ್ಲಿ ಅಭ್ಯರ್ಥಿಗಳಿಬ್ಬರು 376 ಮತಗಳನ್ನು ಪಡೆದು ಸಮಬಲ ಸಾಧಿಸಿದ್ದರು. ಈ ಹಿನ್ನೆಲೆಯಲ್ಲಿ ಟಾಸ್ ಮೂಲಕ ಅಂಜುಮಯ್ಯನನ್ನು ಸಾಣೀಕೆರೆ ಗ್ರಾಮ ಸದಸ್ಯನನ್ನಾಗಿ ಅಯ್ಕೆ ಮಾಡಿದ್ದರು.

ಈ ನಿಟ್ಟಿನಲ್ಲಿ ಅಂಜುಮಯ್ಯ ಮೇಲಿನ ಕೋಪದಿಂದ ಪರಾಜಿತ ಅಭ್ಯರ್ಥಿಯಾದ ಕ್ಷತಿಜಾ ಬೆಂಬಲಿಗರು ಬಸವರಾಜ್ ಹೋಟೆಲ್ ಮೇಲೆ ತಡರಾತ್ರಿ ಬೆಂಕಿ ಹಚ್ಚಿದ್ದಾರೆ. ಬಸವರಾಜ್ ವಿಜೇತ ಅಂಜುಮಯ್ಯನ ಬೆಂಬಲಿಗನಾಗಿದ್ದ ಎನ್ನುವುದೇ ಈ ಕೃತ್ಯಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದ್ದು, ಸದ್ಯ ಈ ಸಂಬಂಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

₹ 26 ಲಕ್ಷಕ್ಕೆ ನಾಲ್ಕು ಗ್ರಾ.ಪಂ. ಕ್ಷೇತ್ರಗಳು ಸೇಲ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada