ಧರ್ಮಪತ್ನಿಯನ್ನೇ ಅಪಹರಿಸಲು ಯತ್ನಿಸಿದ ಪತಿ: ಸ್ಥಳೀಯರಿಂದ ಬಿತ್ತು ಧರ್ಮದೇಟು

  • TV9 Web Team
  • Published On - 10:44 AM, 25 Nov 2019
ಧರ್ಮಪತ್ನಿಯನ್ನೇ ಅಪಹರಿಸಲು ಯತ್ನಿಸಿದ ಪತಿ: ಸ್ಥಳೀಯರಿಂದ ಬಿತ್ತು ಧರ್ಮದೇಟು

ನೆಲಮಂಗಲ: ಪತಿರಾಯನೇ ತನ್ನ ಪತ್ನಿಯ ಅಪಹರಣಕ್ಕೆ ಯತ್ನಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನಲ್ಲಿ ನಡೆದಿದೆ. ಆದ್ರೆ ಇದಕ್ಕೆ ಆಸ್ಪದ ಕೊಡದ ಸ್ಥಳೀಯರು ಕಿಡ್ನಾಪ್​ ಅನ್ನು ವಿಫಲಗೊಳಿಸಿ, ಮಹಿಳೆಯನ್ನ ರಕ್ಷಿಸಿದ್ದು, ಆರೋಪಿ ಪರಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ.

17 ವರ್ಷದ ದಾಂಪತ್ಯ..
ದಾಬಸ್‌ಪೇಟೆಯ ರವಿಕುಮಾರ್‌ ಜನರ ಆಕ್ರೋಶಕ್ಕೆ ತುತ್ತಾದವ. ಪತ್ನಿ ರಾಧ, ತುಮಕೂರು ತಾಲೂಕಿನ ಚಿಕ್ಕಕೊರಟಗೆರೆ ಗ್ರಾಮದವರು. 17 ವರ್ಷದ ಹಿಂದೆ ಇವರ ಮದುವೆಯಾಗಿತ್ತು. ಪತಿ ರವಿಕುಮಾರ್‌ ತನ್ನ ಪತ್ನಿ ರಾಧಳ ಶೀಲ ಶಂಕಿಸಿ, ಕಿರುಕುಳ ನೀಡುತ್ತೊದ್ದ ಎನ್ನಲಾಗಿದೆ.

ಪತಿಯ ಕಿರುಕುಳಕ್ಕೆ ಬೇಸತ್ತು ಆಕೆ ತವರು ಮನೆ ಸೇರಿದ್ದರು. ತವರಿನಲ್ಲಿದ್ದ ಪತ್ನಿಯ ಮೇಲೆ ಹಲ್ಲೆ ನಡೆಸಿದ, ಅಪಹರಣಕ್ಕೆ ಯತ್ನಿಸಿದ ಪತಿ ರವಿಕುಮಾರ್‌ಗೆ ಸ್ಥಳೀಯ ಜನರೇ ಥಳಿಸಿದ್ದಾರೆ. ಬಳಿಕ, ರವಿಕುಮಾರ್‌ನನ್ನು ದಾಬಸ್‌ಪೇಟೆ ಪೊಲೀಸರು ವಶಕ್ಕೆ ಪಡೆದು, ತನಿಖೆ ನಡೆಸುತ್ತಿದ್ದಾರೆ.