Ibrahim Sutar : ‘ಅಕಸ್ಮಾತ್ ಆ ದಿನ ದಿಂಡಿಯಾತ್ರೆ ಪಂಢರಪುರಕ್ಕೆ ಹೊರಟಿದ್ದರೆ, ನಾನೂ ಅದರ ಬೆನ್ನು ಹತ್ತಿದ್ದರೆ’

Childhood of Ibrahim Sutar : ‘ಬೆಳಗಲಿ ಸಮೀಪ ಹೋದಾಗ 21 ಕಿ.ಮೀ. ದೂರದಲ್ಲಿರುವ ಮುಧೋಳಕ್ಕೆ ಕಾಲ್ನಡಿಗೆಯಲ್ಲಿ ಹೊರಟಾಗ ನನಗೆ ಬಹಳ ಹಸಿವಾಯಿತು. ರಾತ್ರಿಕೂಡ ಊಟ ಮಾಡಿರಲಿಲ್ಲ. ಬೆಳಿಗ್ಗೆಯೂ ಏನೂ ತಿಂದಿರಲಿಲ್ಲ. ಸಿಟ್ಟಿನಿಂದ ತಾಯಿಯ ಜೊತೆಗೆ ಮುನಿಸಿಕೊಂಡು ಹಾಗೇ ಹೋಗಿದ್ದೆ.’ ಇಬ್ರಾಹಿಂ ಸುತಾರ

Ibrahim Sutar : ‘ಅಕಸ್ಮಾತ್ ಆ ದಿನ ದಿಂಡಿಯಾತ್ರೆ ಪಂಢರಪುರಕ್ಕೆ ಹೊರಟಿದ್ದರೆ, ನಾನೂ ಅದರ ಬೆನ್ನು ಹತ್ತಿದ್ದರೆ’
ಪ್ರವಚನಕಾರ ಇಬ್ರಾಹಿಂ ಸುತಾರ
Follow us
ಶ್ರೀದೇವಿ ಕಳಸದ
|

Updated on:Feb 05, 2022 | 12:35 PM

ಇಬ್ರಾಹಿಂ ಸುತಾರ್ | Ibrahim Sutar :  ನಮ್ಮ ತಂದೆ ತಾಯಿಗಳು ಮಹಾಲಿಂಗಪುರದಲ್ಲಿಯೇ ನೆಲೆಸುವ ನಿರ್ಧಾರ ಮಾಡಿ, ಮಾಯಪ್ಪ ಲಾತೂರ (ಉಪ್ಪಾರ) ಇವರ ಮನೆಯ ಬಾಡಿಗೆ ಹಿಡಿದು ಉಳಿದುಕೊಂಡರು. ಮಹಾಲಿಂಗಪುರದಲ್ಲಿ ನಾನು ನೇಕಾರಿಕೆ ಕಲಿತೆ. ಇಲ್ಲಿ ನೇಕಾರಿಕೆ ಕಲಿಸಿದವರು ವೀರಪ್ಪ ನಾವಲಗಿ ಹಾಗೂ ಸಂತರಾದ ಪರಪ್ಪ ಗಲಗಲಿಯವರು. ಗಲಗಲಿಯವರ ಮನೆತನ ಕೂಡ ಆಧ್ಯಾತ್ಮಿಕ ಹಿನ್ನೆಲೆ ಇದ್ದುದರಿಂದ ಅದರ ಸಂಸ್ಕಾರವೂ ನನ್ನ ಮೇಲೆ ಪರಿಣಾಮ ಬೀರಿತು. ಗಲಗಲಿಯವರ ಮನೆಯಲ್ಲಿ ನೇಕಾರಿಕೆ ಕಲಿಯುವಾಗ ಅವರ ಮನೆಯ ಮುಂದಿರುವ ಮಾಳವದೆಯವರ ಮನೆಯಲ್ಲಿ ‘ಪಂಢರಪುರ’ ದಿಂಡಿಯಾತ್ರೆ ಬಂದಿತ್ತು. ಆ ದಿಂಡಿಯಾತ್ರೆಗೆ ಹೋಗಿ ಬರಬೇಕೆಂಬ ಆಸೆ ನನ್ನಲ್ಲಿ ಮೂಡಿ ಯಾರಿಗೂ ಹೇಳದೆ ಕೇಳದೇ ಮನೆಯಲ್ಲಿಯೂ ತಿಳಿಸದೇ ಆ ದಿಂಡಿ ಜೊತೆಗೆ ನಾನು ಹೊರಟೆ. ಆ ದಿಂಡೆಯು ಮಹಾಲಿಂಗಪುರದ ಭಕ್ತರ ಮನೆಗೆ ಸುತ್ತಾಡಿ, ಢವಳೇಶ್ವರಕ್ಕೆ ಹೋಗುವ ದಾರಿಗೆ ಬಂದಿತು. ಆಗ ನಾನು ಈ ದಿಂಡೆಯಾತ್ರೆ ಈ ಕಡೆ ಏಕೆ ಬಂದಿತು? ಎಂದು ಸಂತರೊಬ್ಬರನ್ನು ಕೇಳಿದೆ. ಆಗ ಅವರು ಇದು ಒಂಟಗೋಡಿಗೆ ಹೊರಟಿದೆ ಎಂದರು.

(ಭಾಗ – 2)

ಆಗ ಆ ಸಂತರನ್ನು “ನೀವು ಪಂಢರಪೂರಕ್ಕೆ ಹೋಗುವುದಿಲ್ಲೇನು?’ ಎಂದು ಕೇಳಿದೆ. ಆಗ ಅವರು ಪಂಢರಪುರಕ್ಕೆ ಹೋಗಿ ಬಂದಿದ್ದೇವೆ. ಈಗ ಒಂಟಗೋಡಿಗೆ ಹೋಗಿ ಈ ಯಾತ್ರೆ ಸಮಾಪ್ತಿಗೊಳಿಸುತ್ತೇವೆ ಎಂದರು. ಆವಾಗ ನಾನು ನಿರಾಸೆಯಿಂದ ತಿರುಗಿ ಮನೆಗೆ ಬಂದೆ. ಆಕಸ್ಮಾತ ದಿಂಡೆಯಾತ್ರೆ ಪಂಢರಪುರಕ್ಕೆ ಹೋಗುತ್ತಿದ್ದರೆ ಏನಾಗುತ್ತಿತ್ತೋ ಏನೋ!

ಮುನಿಸಿಕೊಂಡು ಮನೆ ಬಿಟ್ಟು ಹೋದೆ

ಒಂದು ದಿನ ನಾನು ಚಿಕ್ಕವನಿದ್ದಾಗ ನೇಯ್ದೆಯ ಕೆಲಸಕ್ಕೆ ಹೋಗದೆ, ಗೆಳೆಯರ ಜೊತೆ ಆಟವಾಡುತ್ತ ಇಡೀ ದಿನ ಕಾಲ ಕಳೆದಿದ್ದೆ. ಈ ವಿಷಯ ನಮ್ಮ ತಾಯಿಯವರಿಗೆ ಗೊತ್ತಾಗಿ ಸಿಟ್ಟಿಗೆದ್ದು ನನಗೆ ಹೊಡೆದರು. ರಾತ್ರಿ ಊಟ ಮಾಡದೇ ಹಾಗೇ ಮಲಗಿದೆನು. ಬೆಳಿಗ್ಗೆ ಎದ್ದ ತಕ್ಷಣ ಮನೆಯಲ್ಲಿ ಯಾರಿಗೂ ಹೇಳದೆ ನಮ್ಮ ಅಜ್ಜಿ ‘ಜನ್ನತಮಾ’ ಹಾಗೂ ನಮ್ಮ ಚಿಕ್ಕಪ್ಪ ಅಬ್ದುಲಗನಿಯವರ ಮನೆಗೆ, ಮಹಾಲಿಂಗಪುರದಿಂದ  ಹೊರಟೆನು. ಬೆಳಗಲಿ ಸಮೀಪ ಹೋದಾಗ 21 ಕಿ.ಮೀ. ದೂರದಲ್ಲಿರುವ ಮುಧೋಳಕ್ಕೆ ಕಾಲ್ನಡಿಗೆಯಲ್ಲಿ ಹೊರಟಾಗ ನನಗೆ ಬಹಳ ಹಸಿವಾಯಿತು. ರಾತ್ರಿಕೂಡ ಊಟ ಮಾಡಿರಲಿಲ್ಲ. ಬೆಳಿಗ್ಗೆಯೂ ಏನೂ ತಿಂದಿರಲಿಲ್ಲ. ಸಿಟ್ಟಿನಿಂದ ತಾಯಿಯ ಜೊತೆಗೆ ಮುನಿಸಿಕೊಂಡು ಹಾಗೇ ಹೋಗಿದ್ದೆ.

ಅಷ್ಟರೊಳಗೆ ಪವಾಡ ಸದೃಶವಾಗಿ ಒಬ್ಬ ಫಕೀರರ ಭೆಟ್ಟಿಯಾಯಿತು. ಅವರು ನನಗಿಂತಲೂ ಸ್ವಲ್ಪ ಮುಂದೆ ಹೊರಟಿದ್ದರು. ಅವರಿಂದ ನನಗೆ ಏನಾದರೂ ತಿನ್ನಲಿಕ್ಕೆ ಸಿಕ್ಕಿತೆಂಬ ಆಸೆಯಿಂದ ಓಡಿಹೋಗಿ ಮಾತನಾಡಿಸಿದೆ. ಅಜ್ಜಾ, ಅಜ್ಜಾ… ನೀವು ಯಾವ ಊರಿಗೆ ಹೊರಟಿದ್ದೀರಿ? ಎಂದು ಕೇಳಿದೆ. ಆಗ ಅವರು ಮುಧೋಳಕ್ಕೆ ಹೊರಟಿದ್ದೇನೆ ಎಂದರು. ನೀನೆಲ್ಲಿ ಹೊರಟಿರುವೆ? ಎಂದು ನನಗೆ ಕೇಳಿದರು. ಆಗ ‘ನಾನೂ ಮುಧೋಳಕ್ಕೆ ಹೊರಟಿರುವೆ’ ಎಂದು ಹೇಳಿದೆನು. ಹಾಗಾದರೆ ನನ್ನ ಜೊತೆ ನಡೆ ಎಂದರು. ಹಾಗೆ ಮಾತನಾಡುತ್ತ – ಮಾತನಾಡುತ್ತ ಬೆಳಗಲಿ ದಾಟಿ ಮುಗಳಖೋಡ ಸಮೀಪಕ್ಕೆ ಹೋದಾಗ ನನಗೆ ಇನ್ನೂ ಹಸಿವಾಗಿ ಮುಖವೆಲ್ಲ ಬಾಡಿತು. ನನ್ನ ಮುಖ ನೋಡಿ ನನಗೆ ಹಸಿವಾದದ್ದು ತಿಳಿದುಕೊಂಡು, ‘ಮುಗಳಖೋಡದವರೆಗೆ ನಡೆ ಅಲ್ಲಿ ಚಹಾ-ಪಾನಿ ಮಾಡೋಣ ಮತ್ತು ಸ್ವಲ್ಪ ವಿಶ್ರಾಂತಿ ಪಡೆಯೋಣ ಎಂದರು.

ಮುಗಳಖೋಡ ಕ್ರಾಸ್‌ನಲ್ಲಿ ಒಂದೇ ಒಂದು ಗುಡಿಸಿಲಿನ ಚಹಾ ಅಂಗಡಿ ಇತ್ತು. ಅಲ್ಲಿ ತಲುಪಿದಾಗ ನಾನು ಬಳಲಿ ಬೆಂಡಾಗಿದ್ದೆ. ಆ ಫಕೀರರು ನನಗೆ ಮುಖ ತೊಳೆದುಕೊಳ್ಳಲು ನೀರು ಕೊಟ್ಟರು. ಬಳಿಕ ತಮ್ಮ ಜೋಳಿಗೆಯೊಳಗಿನ ಒಂದು ರೊಟ್ಟಿ ಕೊಟ್ಟರು. ಆಮೇಲೆ ಹೋಟೆಲ್​ನಿಂದ ಚುನಮರಿ ಚೂಡಾ ಕೊಡಿಸಿ ಒಂದು ಸಿಂಗಲ್ ಚಹಾ ಕುಡಿಸಿದರು. ಆವಾಗ ನನಗೆ ಹೋದ ಜೀವ ಬಂದಂತಾಯಿತು. ಫಕೀರರು ಮಾತ್ರ ಒಂದು ಸಿಂಗಲ್ ಚಹಾ ಅಷ್ಟೇ ಕುಡಿದರು. ಸ್ವಲ್ಪ ವಿಶ್ರಾಂತಿ ಪಡೆದು ಮುಧೋಳಕ್ಕೆ ತಲುಪಿದೆವು. ಬಳಿಕ ಅವರು, ‘ಸೀದಾ ಮನೆಗೆ ಹೋಗು ಮತ್ತೆಲ್ಲೂ ಹೋಗಬೇಡ’ ಎಂದು ನನ್ನ ತಲೆ ಮೇಲೆ ಕೈಯಾಡಿಸಿ ಹೊರಟು ಹೋದರು.

ಬಳಿಕ ನಮ್ಮ ತಾಯಿಯವರು ಅಜ್ಜಿಯ ಮನೆಗೆ ಹೋಗಿರಬಹುದೆಂಬ ಅನುಮಾನದಿಂದ ಮುಧೋಳಕ್ಕೆ ಬಂದು ಮರಳಿ ಮಹಾಲಿಂಗಪುರಕ್ಕೆ ಕರೆದುಕೊಂಡು ಬಂದರು.

(ಮುಂದಿನ ಭಾಗವನ್ನು ನಿರೀಕ್ಷಿಸಿ)

ಮೊದಲ ಭಾಗ : Ibrahim Sutar : ನನ್ನವ್ವ ನಂಬಿದ ‘ಕಟಕ್​ ರೊಟ್ಟಿ ಖಾರಾ ಎಣ್ಣಿ’ ಎಂಬ ಮೃಷ್ಟಾನ್ನಕ್ಕೆ ಶರಣುಶರಣೆನ್ನುತ್ತಿದ್ದ ಆ ದಿನಗಳು

Published On - 11:15 am, Sat, 5 February 22

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್