ಕೇರಳ ಬಜೆಟ್​ ಹೈಲೈಟ್​ ಏನು? ಇಲ್ಲಿದೆ ವಿವರ..

ಕೊರೊನಾ ಸಂದರ್ಭದಲ್ಲಿ ಆಶಾ ಕಾರ್ಯಾಕರ್ತೆಯರ ಪಾತ್ರ ತುಂಬಾನೇ ಮುಖ್ಯವಾಗಿದೆ. ಹೀಗಾಗಿ, ಆಶಾ ಕಾರ್ಯಕರ್ತೆಯರಿಗೆ ನೀಡುವ ಭತ್ಯೆಯನ್ನು ಒಂದು ಸಾವಿರ ರೂಪಾಯಿ ಹೆಚ್ಚಿಸಲಾಗಿದೆ.

  • TV9 Web Team
  • Published On - 21:12 PM, 15 Jan 2021
ಕೇರಳ ಬಜೆಟ್​ ಹೈಲೈಟ್​ ಏನು? ಇಲ್ಲಿದೆ ವಿವರ..
ಕೇರಳಾ ಬಜೆಟ್​ ಮಂಡನೆ ಮಾಡಿದ ಥಾಮಸ್​

ತಿರುವನಂತಪುರಂ: ಕೇರಳ ಹಣಕಾಸು ಸಚಿವ ಟಿ.ಎಂ. ಥಾಮಸ್​ ಇಸಾಕ್ ಇಂದು 2021-22ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಿದರು. ಈ ವೇಳೆ ರಾಜ್ಯದ ಜನತೆಗೆ ಉಪಯೋಗ ಆಗುವ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.

ಕೊರೊನಾ ಸಂದರ್ಭದಲ್ಲಿ ಆಶಾ ಕಾರ್ಯಾಕರ್ತೆಯರ ತುಂಬಾನೇ ಮುಖ್ಯ ಪಾತ್ರ ವಹಿಸಿದ್ದಾರೆ. ಹೀಗಾಗಿ, ಆಶಾ ಕಾರ್ಯಕರ್ತೆಯರಿಗೆ ನೀಡುವ ಭತ್ಯೆಯನ್ನು ಒಂದು ಸಾವಿರ ರೂಪಾಯಿ ಹೆಚ್ಚಿಸಲಾಗಿದೆ. ಮೂರು ಕೈಗಾರಿಕಾ ಕಾರಿಡಾರ್‌ಗಳು, ಕಲ್ಯಾಣ ಪಿಂಚಣಿ ಹೆಚ್ಚಳ, ಉಚಿತ ಪಡಿತರ, ಸಂಕಷ್ಟದಲ್ಲಿರುವ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹಲವಾರು ಕಾರ್ಯಕ್ರಮಗಳನ್ನು ಘೋಷಣೆ ಮಾಡಲಾಗಿದೆ.

5,000 ಕೋಟಿ ಮೌಲ್ಯದ ಮೂರು ಕೈಗಾರಿಕಾ ಕಾರಿಡಾರ್‌ಗಳನ್ನು ಥಾಮಸ್​ ಘೋಷಿಸಿದ್ದಾರೆ. ಎಲ್ಲಾ ಕಲ್ಯಾಣ ಪಿಂಚಣಿಗಳನ್ನು ₹1,500 ಇಂದ  ₹1,600 ಕ್ಕೆ ಏರಿಸಲಾಗಿದೆ. ವೃದ್ಧರು ಯಾವುದೇ ತೊಂದರೆಗಳಿಲ್ಲದೆ ತಮ್ಮ ಮನೆ ಬಾಗಿಲಿಗೆ ಉಚಿತ ಔಷಧಗಳನ್ನು ಪಡೆಯುವ ಯೋಜನೆ ಜಾರಿಗೆ ತರಲಾಗಿದೆ.

‘ಸ್ಮಾರ್ಟ್ ಕಿಚನ್’ ಯೋಜನೆ ಪರಿಚಯಿಸುತ್ತಿದ್ದೇವೆ. ಈ ಯೋಜನೆ ಅಡಿ ಮಹಿಳೆಯರಿಗೆ ಅಡುಗೆಮನೆ ನವೀಕರಿಸಲು ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗಲಿದೆ. ಬ್ಯಾಂಕ್ ಸೇರಿ ಸಾಕಷ್ಟು ಸರ್ಕಾರಿ ಸಂಸ್ಥೆಗಳು ಇದಕ್ಕಾಗಿ ಸಾಲವನ್ನು ವಿತರಿಸಲಿವೆ ಎಂದು ಥಾಮಸ್​ ತಿಳಿಸಿದ್ದಾರೆ.

ಕೇಂದ್ರ ಬಜೆಟ್‌ನಲ್ಲಿ ಕೊರೊನಾ ಸೆಸ್‌ ಅಥವಾ ಸರ್‌ ಚಾರ್ಜ್‌ ವಿಧಿಸುವ ಸಾಧ್ಯತೆ