India vs Australia 2020 ಬಾಕ್ಸಿಂಗ್​ ಡೇ ಟೆಸ್ಟ್​ನಲ್ಲಿ Man Of The Match ಅಜಿಂಕ್ಯಾ ರಹಾನೆ ಏನೆಲ್ಲ ದಾಖಲೆ ಮಾಡಿದ್ದಾರೆ ನೋಡಿ

ಈ ವರ್ಷದಿಂದ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನಾಗಲಿರುವ ಆಟಗಾರನಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಮುಲ್ಲಾಘ್ ಪದಕ ನೀಡಿ ಗೌರವಿಸಲು ನಿರ್ಧರಿಸಿತ್ತು. ಅದರಂತೆ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ನಾಯಕ ರಹಾನೆ ಮುಲ್ಲಾಘ್ ಪದಕ ಪಡೆದ್ರು.

India vs Australia 2020 ಬಾಕ್ಸಿಂಗ್​ ಡೇ ಟೆಸ್ಟ್​ನಲ್ಲಿ Man Of The Match ಅಜಿಂಕ್ಯಾ ರಹಾನೆ ಏನೆಲ್ಲ ದಾಖಲೆ ಮಾಡಿದ್ದಾರೆ ನೋಡಿ
ಮುಲ್ಲಾಘ್ ಪದಕದೊಂದಿಗೆ ಅಜಿಂಕ್ಯಾ ರಹಾನೆ
pruthvi Shankar

| Edited By: sadhu srinath

Dec 30, 2020 | 1:33 PM

ಮೆಲ್ಬೋರ್ನ್: ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ನಾಯಕನಾಗಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನ ಗೆಲ್ಲಿಸಿಕೊಟ್ಟ ಅಜಿಂಕ್ಯಾ ರಹಾನೆ, ಕಾಂಗರೂಗಳ ನೆಲದಲ್ಲಿ ಬರೆದಿರೋ ದಾಖಲೆ ಏನೇನು? ಬನ್ನಿ ನೋಡೋಣ…

 Man Of The Match ಅಜಿಂಕ್ಯಾ ರಹಾನೆ ಏನೆಲ್ಲ ದಾಖಲೆಗಳನ್ನು ಮಾಡಿದ್ದಾರೆ ನೋಡಿ ಮೆಲ್ಬೋರ್ನ್​ ಅಂಗಳದಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿನ ರಣಕೇಕೆ ಹಾಕಿದ್ದು ನಿಮಗೆ ಗೊತ್ತೇ ಇದೆ. ಆದ್ರೆ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ನಾಯಕತ್ವ ನಿಭಾಯಿಸಿದ, ಅಜಿಂಕ್ಯಾ ರಹಾನೆ ಅಪರೂಪದ ದಾಖಲೆಗಳನ್ನ ತಮ್ಮದಾಗಿಸಿಕೊಂಡಿದ್ದಾರೆ.

ಮೊದಲಿಗೆ ರಹಾನೆ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ದ್ವಿತೀಯ ದಿನದಾಟದಲ್ಲಿ ಭರ್ಜರಿ ಶತಕ ಸಿಡಿಸೋ ಮೂಲಕ, ಸಚಿನ್ ತೆಂಡೂಲ್ಕರ್ ನಾಯಕನಾಗಿ ಮಾಡಿದ ಸಾಧನೆಯನ್ನ ಸರಿಗಟ್ಟಿದ್ದಾರೆ. ಸಚಿನ್ ತೆಂಡೂಲ್ಕರ್ ವಿದೇಶದಲ್ಲಿ ನಾಯಕನಾಗಿ 1999ರಲ್ಲಿ ಇದೇ ಮೆಲ್ಬೋರ್ನ್ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ್ರು.

ಎರಡನೇಯದಾಗಿ ಎಂ.ಸಿ.ಜೆಯಲ್ಲಿ ರಹಾನೆ 2ನೇ ಶತಕ ಸಿಡಿಸಿದ ಸಾಧನೆ ಮಾಡಿದ್ರು. ಈ ಸಾಧನೆ ಮಾಡಿದ ಭಾರತದ ಎರಡನೇ ಆಟಗಾರ ಎನಿಸಿಕೊಂಡ್ರು. 1947-48ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿನೂ ಮಂಕಡ್ ಮೆಲ್ಬೋರ್ನ್​ನಲ್ಲಿ ಎರಡು ಶತಕ ಸಿಡಿಸಿದ್ರು.

ಮೂರನೇಯದಾಗಿ ರಹಾನೆ, ಮೆಲ್ಬೋರ್ನ್ ಮೈದಾನದಲ್ಲಿ ವಿರಾಟ್ ಕೊಹ್ಲಿಗಿಂತ ಹೆಚ್ಚು ರನ್​ಗಳಿಸಿದ ಆಟಗಾರನಾಗಿ ಹೊರ ಹೊಮ್ಮಿದ್ರು. ಕೊಹ್ಲಿ ಮೆಲ್ಬೋರ್ನ್ನಲ್ಲಿ 316 ರನ್​ಗಳಿಸಿದ್ರೆ, ರಹಾನೆ 334 ರನ್​ಗಳಿಸಿ ಕೊಹ್ಲಿಯನ್ನ ಹಿಂದಿಕ್ಕಿದ್ದಾರೆ.

ನಾಯಕನಾಗಿ ಮೆಲ್ಬೋರ್ನ್ ಟೆಸ್ಟ್ ಪಂದ್ಯವನ್ನ ಗೆಲ್ಲುವ ಮೂಲಕ ರಹಾನೆ, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ದಾಖಲೆಯನ್ನು ಸರಿಗಟ್ಟಿದ್ದಾರೆ. ಧೋನಿಯಂತೆ ನಾಯಕತ್ವ ನಿಭಾಯಿಸಿದ ಮೊದಲ 3 ಟೆಸ್ಟ್ ಪಂದ್ಯಗಳಲ್ಲೂ ಭಾರತಕ್ಕೆ ಗೆಲುವು ತಂದುಕೊಟ್ಟ ಭಾರತದ 2ನೇ ನಾಯಕ ಅನ್ನೋ ಹಿರಿಮೆಗೆ ಪಾತ್ರರಾಗಿದ್ದಾರೆ.

ಮುಲ್ಲಾಘ್ ಪದಕ ಪಡೆದ ಮೊದಲ ಕ್ರಿಕೆಟಿಗ ರಹಾನೆ.. ಈ ವರ್ಷದಿಂದ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನಾಗಲಿರುವ ಆಟಗಾರನಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಮುಲ್ಲಾಘ್ ಪದಕ ನೀಡಿ ಗೌರವಿಸಲು ನಿರ್ಧರಿಸಿತ್ತು. ಅದರಂತೆ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ನಾಯಕ ರಹಾನೆ ಮುಲ್ಲಾಘ್ ಪದಕ ಪಡೆದ್ರು. ಈ ಪದಕ ಪಡೆದ ಭಾರತದ ಮತ್ತು ವಿಶ್ವದ ಮೊದಲ ಕ್ರಿಕೆಟಿಗ ಅನ್ನೋ ಹಿರಿಮೆಗೆ ಪಾತ್ರರಾದ್ರು.

ಮುಲ್ಲಾಘ್ ಪದಕ ಅಂದ್ರೆ, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಜಾನಿ ಮುಲ್ಲಾಘ್ ಅವರ ನೆನಪಿಗಾಗಿ ನೀಡೋ ಸ್ಮರಣಿಕೆ. ಮುಲ್ಲಾಘ್ ಮೊದಲ ಬಾರಿಗೆ ವಿದೇಶದಲ್ಲಿ ಆಸ್ಟ್ರೇಲಿಯಾ ತಂಡವನ್ನ ಮುನ್ನಡೆಸಿದ ನಾಯಕ. ಹೀಗಾಗಿ 1868ರಲ್ಲಿ ತಂಡದ ಆಟಗಾರರು ಧರಿಸಿರುವ ಮೂಲ ಬೆಲ್ಟ್ ಬಕಲ್‌ನ ವಿನ್ಯಾಸದಂತೆ ಜಾನಿ ಮುಲ್ಲಾಘ್ ಪದಕವನ್ನು ತಯಾರಿಸಲಾಗಿದೆ.

ಒಟ್ನಲ್ಲಿ ಅಜಿಂಕ್ಯಾ ರಹಾನೆ ಕೊಹ್ಲಿ ಅನುಪಸ್ಥಿತಿಯಲ್ಲಿ ಹಂಗಾಮಿ ನಾಯಕನ ಜವಾಬ್ದಾರಿ ನಿಭಾಯಿಸಿದ್ರೂ, ಅದ್ದೂರಿ ಸಾಧನೆ ಮಾಡಿದ್ದಾರೆ. ತಮ್ಮನ್ನ ಪ್ರಶ್ನಿಸಿದ ಆಸಿಸ್ ಮಾಜಿ ನಾಯಕರಿಗೆ ಮಾತಿನ ತಿರುಗೇಟು ನೀಡದೇ, ಪ್ರದರ್ಶನದಿಂದಲೇ ಉತ್ತರ ನೀಡಿದ್ದಾರೆ.

ಬಾಕ್ಸಿಂಗ್​ ಡೇ ಟೆಸ್ಟ್​ನಲ್ಲಿ 3ನೇ​ ಅಂಪೈರ್​ನಿಂದಲೂ ಟೀಂ ಇಂಡಿಯಾಗೆ ಮೋಸ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada