ಬಾಕ್ಸಿಂಗ್​ ಡೇ ಟೆಸ್ಟ್​ನಲ್ಲಿ 3ನೇ​ ಅಂಪೈರ್​ನಿಂದಲೂ ಟೀಂ ಇಂಡಿಯಾಗೆ ಮೋಸ

ರನ್​ಔಟ್​ ವಿಚಾರದಲ್ಲಿ ಆಸ್ಟ್ರೇಲಿಯಾದ 3ನೇ​ ಅಂಪೈರ್​ಗಳು ಆಸ್ಟ್ರೇಲಿಯಾಗೆ ಒಂದು ನ್ಯಾಯ ಹಾಗೂ ಭಾರತಕ್ಕೆ ಒಂದು ನ್ಯಾಯ ಮಾಡಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.

  • Publish Date - 4:56 pm, Tue, 29 December 20 Edited By: sadhu srinath
ಬಾಕ್ಸಿಂಗ್​ ಡೇ ಟೆಸ್ಟ್​ನಲ್ಲಿ 3ನೇ​ ಅಂಪೈರ್​ನಿಂದಲೂ ಟೀಂ ಇಂಡಿಯಾಗೆ ಮೋಸ
ರನ್​ಔಟ್​ ಆದ ದೃಶ್ಯಗಳು

ಬಾಕ್ಸಿಂಗ್​ ಡೇ ಟೆಸ್ಟ್​ ಪೂರ್ಣಗೊಂಡಿದೆ. ಭಾರತ 8 ವಿಕೆಟ್​ಗಳ ಜಯ ದಾಖಲಿಸುವ ಮೂಲಕ ಆಸ್ಟ್ರೇಲಿಯಾ ವಿರುದ್ಧ ಸೇಡು ತೀರಿಸಿಕೊಂಡಂತಾಗಿದೆ. ಈ ಮಧ್ಯೆ 3ನೇ​ ಅಂಪೈರ್​ ಮೋಸ ಮಾಡಿರುವ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿವೆ.

ಹೌದು, ರನ್ ​ಔಟ್​ ವಿಚಾರದಲ್ಲಿ ಆಸ್ಟ್ರೇಲಿಯಾದ 3ನೇ​ ಅಂಪೈರ್​ಗಳು ಆಸ್ಟ್ರೇಲಿಯಾಗೆ ಒಂದು ನ್ಯಾಯ ಹಾಗೂ ಭಾರತಕ್ಕೆ ಮತ್ತೊಂದು ನ್ಯಾಯ ಕೊಟ್ಟಿದ್ದಾರೆ. ಮೊದಲ ಇನ್ನಿಂಗ್ಸ್​ನ 55ನೇ ಓವರ್​ನಲ್ಲಿ ಟಿಮ್​ ರನ್​ ಕದಿಯಲು ಹೋಗಿದ್ದರು. ಈ ವೇಳೆ ಭಾರತದ ಫೀಲ್ಡರ್​ಗಳು ರನೌಟ್​ ಮಾಡಲು ಯತ್ನ ನಡೆಸಿದ್ದರು.

ಫೀಲ್ಡರ್​ ಎಸೆದ ಬಾಲ್​ ಸ್ಟಂಪ್​ಗೆ​ ತಾಗುವಾಗ ಟಿಮ್​​ ಬ್ಯಾಟ್​ ಸ್ಕ್ರೀಸ್​​ ದಾಟಿರಲಿಲ್ಲ. ಆದಾಗ್ಯೂ 3ನೇ ಅಂಪೈರ್​ ನಾಟೌಟ್​ ಎಂದು ಘೋಷಣೆ ಮಾಡಿದ್ದರು. ಈ ವಿಚಾರಕ್ಕೆ ಖುದ್ದು ಆಸ್ಟ್ರೇಲಿಯಾ ಮಾಜಿ ಬೌಲರ್ ಶೇನ್​ ವಾರ್ನ್​ ಟ್ವೀಟ್​ ಮಾಡಿ, ಇದು ಔಟ್​ ಆಗಿತ್ತು. ಆದಾಗ್ಯೂ 3ನೇ ಅಂಪೈರ್​ ಇದನ್ನು ನಾಟೌಟ್​ ಕೊಟ್ಟಿದ್ದೇಕೆ ಎನ್ನುವುದು ನನಗೆ ಗೊತ್ತಾಗಿಲ್ಲ ಎಂದಿದ್ದರು.

ಇನ್ನು, ಎರಡನೇ ಇನ್ನಿಂಗ್ಸ್​ನಲ್ಲಿ ಇದೇ ರೀತಿಯ ಘಟನೆ ಮರುಕಳಿಸಿತ್ತು. ನಾಯಕ ಅಜಿಂಕ್ಯ ರಹಾನೆ ರನ್​ ಕದಿಯುವ ಭರದಲ್ಲಿ ರನೌಟ್​ ಆಗಿದ್ದರು. 3ನೇ ಅಂಪೈರ್​ಗೆ ರಿವ್ಯೂ ನೀಡಲಾಗಿತ್ತು. ಫೀಲ್ಡರ್​ ಎಸೆದ ಬಾಲ್​ ಸ್ಟಂಪ್​ಗೆ ತಾಗುವಾಗ ಟಿಮ್​ ಪೈನ್​ ಬ್ಯಾಟ್​ ಎಲ್ಲಿತ್ತೋ ಅಲ್ಲಿಯೇ.. ರಹಾನೆ ಬ್ಯಾಟ್​ ಕೂಡ ಇತ್ತು. ಆದಾಗ್ಯೂ 3ನೇ ಅಂಪೈರ್​ ನಿರ್ಧಾರದಲ್ಲಿ ಔಟ್​ ಎಂದು ಘೋಷಣೆ ಆಗಿತ್ತು! ಇದೇ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.

ಅಂಪೈರ್​ ಕಾಲ್​ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ಸಚಿನ್ 

ಅಂಪೈರ್​ ಕಾಲ್​ ವಿಚಾರದಲ್ಲಿ ಸಚಿನ್​ ಬೇಸರ ಹೊರ ಹಾಕಿದ್ದರು.  ಆನ್-ಫೀಲ್ಡ್ ಅಂಪೈರ್ ತೆಗೆದುಕೊಂಡ ನಿರ್ಧಾರದ ಬಗ್ಗೆ ಅಸಮಾಧಾನ ಇರುವುದಕ್ಕೆ ಆಟಗಾರರು DRS ಆರಿಸಿಕೊಂಡಿರುತ್ತಾರೆ. ಹೀಗಾಗಿ ಡಿಆರ್​ಎಸ್ ವ್ಯವಸ್ಥೆಯನ್ನು, ಐಸಿಸಿ ಕೂಲಂಕಷವಾಗಿ ಪರಿಶೀಲಿಸಬೇಕಾಗಿದೆ. ವಿಶೇಷವಾಗಿ ‘ಅಂಪೈರ್ಸ್ ಕರೆ’ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಬೇಕೆಂದು ಕೇಳಿಕೊಂಡಿದ್ದರು.

ಸಚಿನ್​ ಈ ರೀತಿ ಹೇಳುವುದಕ್ಕೂ ಒಂದು ಕಾರಣವಿದೆ. ಕೆಲವೊಮ್ಮೆ ಲೆಗ್​ ಬಿಫೋರ್​ ವಿಕೆಟ್​ ಆದಾಗ ಅಂಪೈರ್​ ಔಟ್​ ಕೊಟ್ಟಿದ್ದರು ಎಂದಿಟ್ಟುಕೊಳ್ಳಿ. ಈ ವೇಳೆ ಬ್ಯಾಟ್ಸಮನ್​ ಡಿಆರ್​ಎಸ್​ ತೆಗೆದುಕೊಳ್ಳುತ್ತಾನೆ. 3ನೇ ಅಂಪೈರ್​ ರಿವ್ಯೂ ವೇಳೆ, ಬಾಲ್​ ಸ್ಟಂಪ್​ನ ಹೊರ ಭಾಗದಲ್ಲಿ ತಾಗುತ್ತಿದ್ದರೂ 3ನೇ ಅಂಪೈರ್​, ಅಂಪೈರ್ಸ್ ಕರೆಯನ್ನೇ ಮುಂದುವರಿಸಿ ಎಂದು ಹೇಳುತ್ತಾರೆ. ಹೀಗಾಗಿ ಸಚಿನ್​ ಈ ಬಗ್ಗೆ ಗಮನಿಸಿ ಎಂದು ಕೋರಿದ್ದರು.