ಲಕ್ಷ್ಮಿ ಕೃಪಾಕಟಾಕ್ಷ: ದುಬೈ $ 1 ಮಿಲಿಯನ್ USD ಡ್ರಾ ಗೆದ್ದ ಭಾರತೀಯ..

  • Publish Date - 9:07 am, Fri, 6 November 20
ಲಕ್ಷ್ಮಿ ಕೃಪಾಕಟಾಕ್ಷ: ದುಬೈ $ 1 ಮಿಲಿಯನ್ USD ಡ್ರಾ ಗೆದ್ದ ಭಾರತೀಯ..
ಪ್ರಾತಿನಿಧಿಕ ಚಿತ್ರ

ದುಬೈ ಡ್ಯೂಟಿ ಫ್ರೀ ಮಿಲೇನಿಯಮ್ ಮಿಲಿಯನೇರ್ ಡ್ರಾದಲ್ಲಿ ಬಹ್ರೇನ್‌ನಲ್ಲಿರುವ ಭಾರತೀಯ ವಲಸಿಗ 1 ಮಿಲಿಯನ್ ಯುಎಸ್ಡಿ ಡಾಲರ್‌ಗಳನ್ನು ಗೆದ್ದಿದ್ದಾನೆ.

ಮಿಲಿಯನ್ ಡಾಲರ್ ಗೆದ್ದ 342 ನೇ ವ್ಯಕ್ತಿ
ಮನಮಾದ ಖಾಸಗಿ ಕಂಪನಿಯೊಂದರಲ್ಲಿ ಸೇಲ್ಸ್ ಪರ್ಸನ್ ಆಗಿ ಕೆಲಸ ಮಾಡುತ್ತಿರುವ 33 ವರ್ಷದ ಸುನಿಲ್ ಕುಮಾರ್ ಕತುರಿಯಾ ಬುಧವಾರ ಮಿಲಿಯನ್ ಡಾಲರ್ ಗೆದ್ದ 342 ನೇ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮನಮಾದ ನಿವಾಸಿಯಾದ ಇವರು ಅಕ್ಟೋಬರ್ 17 ರಂದು ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸಿದ್ದರು ಸದ್ಯ ಈಗ ಆ ಟಿಕೆಟ್‌ನಿಂದ 1 ಮಿಲಿಯನ್ ಯುಎಸ್ಡಿ (USD 1 million) ಗೆದ್ದಿದ್ದು ಡಿಡಿಎಫ್ ಮಿಲೇನಿಯಮ್ ಮಿಲಿಯನೇರ್ ಡ್ರಾದಲ್ಲಿ 1 ಮಿಲಿಯನ್ ಯುಎಸ್ಡಿ ಗೆದ್ದ 170 ನೇ ಭಾರತೀಯರೂ ಆಗಿದ್ದಾರೆ.

ಗೆದ್ದ ಹಣದಲ್ಲಿ ಸ್ವಲ್ಪ ದಾನ ಮಾಡುವೆ:
ನಾನು ಇಲ್ಲಿ (ಬಹ್ರೇನ್‌ನಲ್ಲಿ) ವಾಸಿಸುವ ಎರಡನೇ ತಲೆಮಾರಿನ ವಲಸಿಗ. ನಾನು ದುಬೈಗೆ ಭೇಟಿ ನೀಡಿ ಸುಮಾರು 10-12 ವರ್ಷಗಳಾಗಿವೆ. ನಾನು ಆಗಾಗ ಇಲ್ಲಿಗೆ ಪ್ರವಾಸ ಮಾಡುತ್ತೇನೆ. ನಾನು ಗೆದ್ದ ಹಣವನ್ನು ಒಳ್ಳಯ ಕಾರ್ಯಕ್ಕೆ ಬಳಸಿಕೊಳ್ಳುತ್ತೇನೆ. ಗೆದ್ದ ಹಣದಲ್ಲಿ ಸ್ವಲ್ಪ ದಾನ ಮಾಡಲು ಬಯಸುತ್ತೇನೆ, ಹಾಗೂ ಸ್ವಂತ ಮನೆ ಖರೀದಿಸುವ ಆಸೆ ಇದೆ. ಈ ಬಗ್ಗೆ ನಾನು ನನ್ನ ಹೆತ್ತವರೊಂದಿಗೆ ಮಾತನಾಡಿ ನಂತರ ಏನು ಮಾಡಬೇಕೆಂದು ನೋಡುತ್ತೇನೆ. ಇದೀಗ ನಾವು ಗೆಲುವಿನೊಂದಿಗೆ ಉತ್ಸುಕರಾಗಿದ್ದೇವೆ ಎಂದು ಸುನಿಲ್ ಕುಮಾರ್ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ. ಡಿಡಿಎಫ್ ಪ್ರಕಾರ, ದುಬೈ ಡ್ಯೂಟಿ ಫ್ರೀ ಮಿಲೇನಿಯಮ್ ಮಿಲಿಯನೇರ್ ಟಿಕೆಟ್ ಖರೀದಿದಾರರಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರಂತೆ.