ಆಸ್ಟ್ರೇಲಿಯಾ ನೆಲದಲ್ಲಿ ಟೀಂ ಇಂಡಿಯಾ ಕಾಂಗರೂಗಳ ಹುಟ್ಟಡಗಿಸಿದ ಬೆನ್ನಲ್ಲೇ, ಕಾಂಗರೂಗಳಿಗೆ ಭಾರತೀಯರ ಶಕ್ತಿ ಸಾಮರ್ಥ್ಯ ಏನು ಅನ್ನೋದು ಗೊತ್ತಾಗಿದೆ. ಹೀಗಾಗಿ ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಟಿ-ಟ್ವೆಂಟಿ ಸರಣಿಗೆ ಭಾರತ ಮೂಲದ ಯುವ ಕ್ರಿಕೆಟಿಗನಿಗೆ ಆಸ್ಟ್ರೇಲಿಯಾ ಮಣೆ ಹಾಕಿದೆ.
ಮುಂಬರುವ ನ್ಯೂಜಿಲೆಂಡ್ ಪ್ರವಾಸಕ್ಕೆ ಆಸ್ಟ್ರೇಲಿಯಾ ತಂಡವನ್ನ ಪ್ರಕಟಿಸಲಾಗಿದೆ. ಕಿವೀಸ್ ವಿರುದ್ಧದ ಟಿ-ಟ್ವೆಂಟಿ ಸರಣಿಗೆ ಆಯ್ಕೆಯಾದ ಆಸ್ಟ್ರೇಲಿಯಾ ತಂಡದಲ್ಲಿ, ಭಾರತೀಯ ಮೂಲದ ಆಟಗಾರನೊಬ್ಬ ಅವಕಾಶ ಗಿಟ್ಟಿಸಿಕೊಂಡಿದ್ದಾನೆ.
ಲೆಗ್ ಸ್ಪಿನ್ನರ್ ಆಗಿ ಮಿಂಚುತ್ತಿರೋ ತನ್ವೀರ್ ಹೆಸರು ತನ್ವೀರ್ ಸಂಘಾ.. ಈಗಿನ್ನೂ ತನ್ವೀರ್ಗೆ 19ರ ಪ್ರಾಯ.. ಆದ್ರೆ ಆಗಲೇ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆದ ಪ್ರತಿಭಾವಂತ ಕ್ರಿಕೆಟಿಗ. ಲೆಗ್ ಸ್ಪಿನ್ನರ್ ಆಗಿ ಮಿಂಚುತ್ತಿರೋ ತನ್ವೀರ್, ಈಗಾಗಲೇ ಆಸ್ಟ್ರೇಲಿಯಾ ಪರ ಅಂಡರ್ ನೈಂಟೀನ್ ತಂಡವನ್ನ ಪ್ರತಿನಿಧಿಸಿದ್ದಾನೆ.
ಭಾರತೀಯ ಮೂಲದ ಟ್ಯಾಕ್ಸಿ ಡ್ರೈವರ್ ಮಗ ತನ್ವೀರ್ ಸಂಘಾ! ತನ್ವೀರ್ ಸಂಘಾ ತಂದೆ ಜೋಗಾ ಸಿಂಗ್ ಸಂಘಾ ಮೂಲತಃ ಕೃಷಿಕರು. ತಂದೆ ಜೋಗಾ ಸಿಂಗ್ ಅವರು ವಿದ್ಯಾರ್ಥಿ ವೀಸಾದ ಮೇಲೆ 1997ರಲ್ಲಿ ಜಲಂಧರ್ನಿಂದ ಸಿಡ್ನಿಗೆ ಬಂದು ನೆಲೆಸಿದ್ರು. ಆರಂಭದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಜೋಗಾ ಸಿಂಗ್, ಈಗ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡ್ತಿದ್ದಾರೆ. ಆದ್ರೀಗ ತನ್ವೀರ್ ಕ್ಯಾಬ್ ಡ್ರೈವರ್ ಅಪ್ಪನ ಪಾಲಿಗೆ ಹೆಮ್ಮೆಯ ಮಗನಾಗಿ ಗುರುತಿಸಿಕೊಂಡಿದ್ದಾನೆ. ತಾಯಿ ಉಪನೀತ್ ಅವರು ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ.
ನನಗೆ ನಂಬಲು ಸಾಧ್ಯವಾಗಲಿಲ್ಲ.. ನನಗೆ ಕರೆ ಬರುತ್ತಿದ್ದಂತೆ ಚಂದ್ರನ ಮೇಲೆ ತೇಲಾಡಿದಂತಹ ಅನುಭವ ಉಂಟಾಯಿತು. ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದೇನೆ ಎಂಬ ಸುದ್ದಿ ನಂಬಲು ನನಗೆ ಸ್ವಲ್ಪ ಸಮಯ ಬೇಕಾಯಿತು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಆಸ್ಟ್ರೇಲಿಯಾ ಪ್ರತಿನಿಧಿಸುತ್ತೇನೆಂದು ಅಂದುಕೊಂಡಿರಲಿಲ್ಲ. -ತನ್ವೀರ್ ಸಂಘಾ, ಆಸ್ಟ್ರೇಲಿಯಾ ತಂಡಕ್ಕೆ ಆಯ್ಕೆಯಾದ ಕ್ರಿಕೆಟಿಗ
ಆಸ್ಟ್ರೇಲಿಯಾ ಪರ ಅಂಡರ್ ನೈಂಟೀನ್ ತಂಡದಲ್ಲಿ, ಆರು ಪಂದ್ಯಗಳಲ್ಲಿ ಸಂಘಾ 15 ವಿಕೆಟ್ ಪಡೆದು ಮಿಂಚಿದ್ದ. ಇದೇ ಪ್ರದರ್ಶನವನ್ನ ಪರಿಗಣಿಸಿ ಬಿಗ್ಬ್ಯಾಷ್ ಲೀಗ್ನಲ್ಲಿ, ಸಿಡ್ನಿ ಥಂಡರ್ ಫ್ರಾಂಚೈಸಿ ಅವಕಾಶ ನೀಡಿತ್ತು. ಬಿಗ್ಬ್ಯಾಷ್ ಲೀಗ್ನಲ್ಲೂ ಕೈಚಳಕ ತೋರಿದ ಸಂಘಾ, ಆಡಿದ 11 ಪಂದ್ಯಗಳಲ್ಲಿ 21 ವಿಕೆಟ್ ಕಬಳಿಸಿದ್ದಾನೆ.
ನ್ಯೂಜಿಲೆಂಡ್ ವಿರುದ್ಧದ ಟಿ-ಟ್ವೆಂಟಿ ಸರಣಿಗೆ ಆಯ್ಕೆಯಾದ ತನ್ವೀರ್ ಸಂಘಾ, ಆಸ್ಟ್ರೇಲಿಯಾ ತಂಡಕ್ಕೆ ಆಯ್ಕೆಯಾದ ಭಾರತೀಯ ಮೂಲದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಪಂಜಾಬ್ ಮೂಲದವರೇ ಆಗ ಗುರಿಂದರ್ ಸಂಧು, ಆಸ್ಟ್ರೇಲಿಯಾ ತಂಡವನ್ನ ಪ್ರತಿನಿಧಿಸಿದ್ರು!
ಆಸಿಸ್ ತಂಡಕ್ಕೆ ಸಿಕ್ಕನಾ ಮತ್ತೊಬ್ಬ ಶೇನ್ ವಾರ್ನ್? ಕ್ರಿಕೆಟ್ ಜಗತ್ತಿನಲ್ಲಿ ಕಾಂಗರೂಗಳೇ ಸಾಮ್ರಾಟರು. ಇದುವರೆಗು ಅತಿ ಹೆಚ್ಚು ವಿಶ್ವಕಪ್ ಗೆದ್ದ ಕೀರ್ತಿ ಆಸಿಸ್ ತಂಡಕ್ಕೆ ಸಲ್ಲುತ್ತದೆ. ಇಂತಹ ತಂಡದ ಬೌಲಿಂಗ್ ಬ್ರಹ್ಮಾಸ್ತ್ರವಾಗಿದಿದ್ದು, ಆಸಿಸ್ ಲೆಗ್ ಸ್ಪಿನರ್ ಶೇನ್ ವಾರ್ನೆ. ತಮ್ಮ ಮಾಂತ್ರಿಕ ಎಸೆತದಿಂದ ದಿಗ್ಗಜ ಬ್ಯಾಟ್ಸ್ಮನ್ಗಳನ್ನು ಕಟ್ಟಿ ಹಾಕುವ ಸಾಮಥ್ರ್ಯ ಶೇನ್ ವಾರ್ನ್ ಅವರಿಗಿತ್ತು. ಆಸಿಸ್ ತಂಡಕ್ಕೆ ತಮ್ಮ ಬೌಲಿಂಗ್ನಿಂದಲ್ಲೇ ಎಷ್ಟೋ ಪಂದ್ಯಗಳನ್ನ ಗೆಲ್ಲಿಸಿಕೊಟ್ಟವರು ಶೇನ್ ವಾರ್ನ್. ಹೀಗಾಗಿ ಆಸಿಸ್ ತಂಡಕ್ಕೆ ಲೆಗ್ ಸ್ಪಿನ್ನರ್ ತನ್ವೀರ್ ಸಂಘಾ ಸಿಕ್ಕಿರುವುದು ಮತ್ತೊಬ್ಬ ಶೇನ್ ವಾರ್ನ್ ಸಿಕ್ಕಷ್ಟೇ ಖುಷಿಯಲ್ಲಿದ್ದಾರೆ ಕಾಂಗರೂಗಳು.
ಕೊನೆಗೂ ಮಂಡಿಯೂರಿದ ಕ್ರಿಕೆಟ್ ಆಸ್ಟ್ರೇಲಿಯಾ..! ಸಿಡ್ನಿಯಲ್ಲಿ ಭಾರತೀಯ ಆಟಗಾರರು ಜನಾಂಗೀಯ ನಿಂದನೆಗೊಳಗಾಗಿದ್ದು ನಿಜ