Drinks ಸೇರಿದಂತೆ ಯಾವುದೇ ಮಾದಕ ಪದಾರ್ಥ ಸೇವಿಸೋಲ್ಲ -CCBಗೆ ರಾಗಿಣಿ ಉತ್ತರ

  • Updated On - 5:22 pm, Fri, 4 September 20
Drinks ಸೇರಿದಂತೆ ಯಾವುದೇ ಮಾದಕ ಪದಾರ್ಥ ಸೇವಿಸೋಲ್ಲ -CCBಗೆ ರಾಗಿಣಿ ಉತ್ತರ

ಬೆಂಗಳೂರು:ಚಂದನವನದಲ್ಲಿ ಡ್ರಗ್ಸ್ ಬಳಕೆ ಸಂಬಂಧ ನಟಿ ರಾಗಿಣಿ ಅವರನ್ನು ವಿಚಾರಣೆಗೊಳಪಡಿಸಿರುವ CCB ಅಧಿಕಾರಿಗಳು ಹತ್ತುಹಲವು ಪ್ರಶ್ನೆಗಳನ್ನ ಕೇಳಿದ್ದಾರೆ ಎಂದು ತಿಳಿದುಬಂದಿದೆ.

ರವಿಶಂಕರ್​ ನಿಮಗೆ ಗೊತ್ತಾ ಎಂಬ ಪ್ರಶ್ನೆಗೆ ರಾಗಿಣಿ ಆತ ನನ್ನ ಒಳ್ಳೆಯ ಸ್ನೇಹಿತ ಎಂದು ಉತ್ತರಿಸಿದರೆ ರವಿಶಂಕರ್​ ಜೊತೆಯಲ್ಲಿ ಪಾರ್ಟಿಗೆ ಹೋಗುತ್ತಿದ್ದಿರಾ ಎಂಬ ಪ್ರಶ್ನೆಗೆ ಹೌದು ಎಂದು ಉತ್ತರಿಸಿದ್ದಾರಂತೆ.

ಗಂಭೀರ ಪ್ರಶ್ನೆಗಳಿಗೂ ರಾಗಿಣಿ ಹಾರಿಕೆಯ ಉತ್ತರ ಪಾರ್ಟಿಯಲ್ಲಿ ಡ್ರಿಂಕ್ಸ್​ ಅಥವಾ ಡ್ರಗ್ಸ್ ಸೇವನೆ ಮಾಡುತ್ತಿದ್ರಾ ಎಂಬ ಪ್ರಶ್ನೆಗೆ, ಇಲ್ಲ.. ನಾನು ಡ್ರಿಂಕ್ಸ್​ ಸೇರಿದಂತೆ ಯಾವುದೇ ಮಾದಕ ಪದಾರ್ಥಗಳನ್ನ ತೆಗೆದುಕೊಳ್ಳುವುದಿಲ್ಲ. ಪಾರ್ಟಿಗಳಲ್ಲಿ ಡ್ರಗ್ಸ್​ ಇರುತ್ತಿತ್ತು ಅನ್ನೋ ಬಗ್ಗೆಯೂ ಸಹ ನನಗೆ ಗೊತ್ತಿಲ್ಲ. ನಾನು ಡ್ರಗ್ಸ್​ ವಿರುದ್ಧ ಜಾಗೃತಿ ಮೂಡಿಸುವ NGOದಲ್ಲಿ ಇದ್ದೇನೆ ಎಂಬ ಉತ್ತರ ನೀಡಿದ್ದಾರಂತೆ. ನಾನು ಸೆಲೆಬ್ರಿಟಿ ಆಗಿರುವ ಕಾರಣ ಪಾರ್ಟಿಗಳಿಗೆ ಕರೆದಾಗ ಹೋಗುತ್ತೇನೆ. ಹಾಗಂಥ ಅಲ್ಲಿ ಡ್ರಿಂಕ್ಸ್​ ಮಾಡಬೇಕೆಂದು ಏನು ಇಲ್ಲ ಎಂದು ಹೇಳಿದ್ದಾರಂತೆ.

ಮೊಬೈಲ್​ನಲ್ಲಿ ಕೆಲವೊಂದು ಡೇಟಾಗಳು ಡಿಲೀಟ್​ ಆಗಿದೆ ಯಾಕೆ ? ಎಂದು ಕೇಳಿದ್ದಕ್ಕೆ ವಾರದ ಹಿಂದೆಯಷ್ಟೇ ಹೊಸ ಮೊಬೈಲ್​ ಖರೀದಿ ಮಾಡಿದ್ದೆ. ಅದರಲ್ಲಿ ರಿ-ಇನ್​ಸ್ಟಾಲ್​​ ಆಗುವಾಗ ಕೆಲವೊಂದು ಡಿಲೀಟ್​ ಆಗಿದೆ ಅಂತಾ ಹೇಳಿದ್ದಾರೆ.

ಹೀಗೆ ಹಲವು ಗಂಭೀರ ಪ್ರಶ್ನೆಗಳಿಗೂ ರಾಗಿಣಿ ಹಾರಿಕೆಯ ಉತ್ತರ ನೀಡಿದ್ದಾರೆ ಎಂದು ತಿಳಿದುಬಂದಿದೆ. ರಾಗಿಣಿಯ ಹಳೆಯ ಹಾಗೂ ಹೊಸ ಮೊಬೈಲ್​ಗಳನ್ನ ವಶಕ್ಕೆ ಪಡೆದಿರುವ ಅಧಿಕಾರಿಗಳು ಸದ್ಯ ಲ್ಯಾಪ್​ಟಾಪ್​ ಮತ್ತು ಹಾರ್ಡ್​ಡಿಸ್ಕ್ ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.

ರಾಗಿಣಿ ವಿರುದ್ಧ ಪ್ರತ್ಯೇಕ, ಸ್ವಯಂಪ್ರೇರಿತ FIR‌ ದಾಖಲಿಸಿದ್ದೇವೆ: ಆಯುಕ್ತ​​ ಕಮಲ್‌ಪಂತ್

Published On - 5:16 pm, Fri, 4 September 20

Click on your DTH Provider to Add TV9 Kannada