Tv9 Facebook Live | ಕೋವಿಡ್-19 ಲಸಿಕೆ ಎಷ್ಟು ಉಪಯುಕ್ತ?

ಟಿವಿ9 ಫೇಸ್​ಬುಕ್​ ಲೈವ್​ನಲ್ಲಿ ಕೊರೊನಾ ನಿರೋಧಕ ಲಸಿಕೆಗಳ ಕಾರ್ಯಕ್ಷಮತೆಗಳ ಬಗ್ಗೆ ಮಂಗಳೂರಿನ ವೈದ್ಯ ಡಾ.ಬಿ.ಶ್ರೀನಿವಾಸ ಕಕ್ಕಿಲಾಯ, ಬೆಂಗಳೂರಿನ ಸಾಂಕ್ರಾಮಿಕ ರೋಗ ತಜ್ಞ ಡಾ. ಸುನಿಲ್ ಕುಮಾರ್ ಮತ್ತು ಮೈಸೂರಿನ ಗೃಹಿಣಿ ರಶ್ಮಿ ಪ್ರೀತಮ್ ಚರ್ಚಿಸಿದರು.

Tv9 Facebook Live | ಕೋವಿಡ್-19 ಲಸಿಕೆ ಎಷ್ಟು ಉಪಯುಕ್ತ?
ಸಾಂದರ್ಭಿಕ ಚಿತ್ರ
preethi shettigar

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 09, 2020 | 8:41 PM


ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಿಸುವ ಲಸಿಕೆ ಭಾರತಕ್ಕೆ ಎಂದು ಬರಲಿದೆ ಎಂಬುದು ಈಗ ಜನರ ನಡುವೆ ವ್ಯಾಪಕವಾಗಿ ಚರ್ಚೆಯಾಗುತ್ತಿರುವ ವಿಷಯ. ಟಿವಿ9 ಫೇಸ್​ಬುಕ್​ ಲೈವ್​ನಲ್ಲಿ ಬುಧವಾರ ಇದೇ ವಿಷಯದ ಬಗ್ಗೆ ಮಂಗಳೂರಿನ ವೈದ್ಯ ಡಾ.ಬಿ.ಶ್ರೀನಿವಾಸ ಕಕ್ಕಿಲಾಯ, ಬೆಂಗಳೂರಿನ ಸಾಂಕ್ರಾಮಿಕ ರೋಗ ತಜ್ಞ ಡಾ. ಸುನಿಲ್ ಕುಮಾರ್ ಮತ್ತು ಮೈಸೂರಿನ ಗೃಹಿಣಿ ರಶ್ಮಿ ಪ್ರೀತಮ್ ಚರ್ಚಿಸಿದರು. ಸುಮಾರು 75 ಸಾವಿರ ಮಂದಿ ಈ ಫೇಸ್​ಬುಕ್ ಲೈವ್ ವೀಕ್ಷಿಸಿದರು. ಟಿವಿ9 ಫೇಸ್​ಬುಕ್ ಲೈವ್ ಪ್ರತಿದಿನ ಮಧ್ಯಾಹ್ನ 3.30ಕ್ಕೆ ನಡೆಯುತ್ತದೆ.

ಕೋವಿಡ್-19 ಲಸಿಕೆ ಬಳಕೆಯ ಔಚಿತ್ಯವನ್ನೇ ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಪ್ರಶ್ನಿಸಿದರು. ‘ಮಾರ್ಚ್​ನಿಂದಲೇ ಈ ವಿಚಾರವಾಗಿ ಜನರಲ್ಲಿ ಅನಗತ್ಯ ಭೀತಿ ಹುಟ್ಟಿಸಲಾಗಿದೆ. ಕರ್ನಾಟಕ ಸರ್ಕಾರದ ಆರೋಗ್ಯ ಸಚಿವಾಲಯದ ವರದಿ ಪ್ರಕಾರ ಸೆ.16ರ ವೇಳೆಗೆ ಸುಮಾರು 2 ಕೋಟಿ ಜನರಿಗೆ ಕೊರೊನಾ ಬಂದಾಗಿದೆ. ಇನ್ನು ಮುಂದಿನ ಎರಡು ತಿಂಗಳಲ್ಲಿ ಈ ವರದಿಯ ಪ್ರಕಾರ 3 ಕೋಟಿ ಜನರಿಗೆ ಕೊರೊನಾ ಸೋಂಕು ತಗುಲಿರುತ್ತದೆ. ಈ ಪ್ರಕಾರ, ಲಸಿಕೆ ಬರುವ ಹೊತ್ತಿಗೆ ಇಷ್ಟೂ ಜನರು ಇವರೆಲ್ಲರೂ ಕೊರೊನಾ ಸೋಂಕಿನಿಂದ ಮುಕ್ತರಾಗಿರುತ್ತಾರೆ. ಅವರಲ್ಲಿ ರೋಗನಿರೋಧಕ ಶಕ್ತಿಯೂ ಬೆಳೆದಿರುತ್ತದೆ’ ಎಂದು ಅವರು ವಿಶ್ಲೇಷಿಸಿದರು.

ಯಾವುದೇ ಸೋಂಕು ಶೇ 60ರಷ್ಟು ಜನರನ್ನು ತಲುಪಿದಾಗ ಸಾಮೂದಾಯಿಕ ರೋಗ ನಿರೋಧಕ ಶಕ್ತಿ ಬೆಳೆದಿರುತ್ತದೆ. ಹೀಗಾಗಿ ಲಸಿಕೆ ಬರುತ್ತದೆ ಎಂದು ಖುಷಿಪಡುವುದರಲ್ಲಿ ಯಾವುದೇ ಅರ್ಥವಿಲ್ಲ. ಹಲವು ವಿಶ್ವವಿದ್ಯಾಲಯಗಳು ಮತ್ತು ಔಷಧ ತಯಾರಕಾ ಸಂಸ್ಥೆಗಳು ಕೊರೊನಾ ಸೋಂಕು ನಿವಾರಕ ಲಸಿಕೆಯನ್ನು ಕಂಡುಹಿಡಿಯುವಲ್ಲಿ ಪ್ರಯತ್ನ ನಡೆಸುತ್ತಿವೆ. ಈ ಪೈಕಿ ಫೈಝರ್ ಲಸಿಕೆ ಮುಂಚುಣಿಯಲ್ಲಿದೆ. ಈ ಲಸಿಕೆಯ ಸಾಧಕಬಾಧಕ ಪರಿಶೀಲಿಸುವುದು ಮತ್ತು ಅವು ಎಷ್ಟು ಪರಿಣಾಮಕಾರಿ ಗಮನ ಹರಿಸುವುದು ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.

ಯಾವುದೇ ಲಸಿಕೆ ತಕ್ಷಣಕ್ಕೆ ಜನರಿಗೆ ಸಿಗುವುದಿಲ್ಲ. ಲಸಿಕೆಗಳ ಪೂರ್ಣ ಬಳಕೆಗೆ ಕನಿಷ್ಠ 4 ವರ್ಷ ಕಾಲಾವಕಾಶ ಬೇಕಾಗುತ್ತದೆ. ಲಸಿಕೆಯನ್ನು ನಂಬಿ ಕುಳಿತುಕೊಳ್ಳಬೇಡಿ ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಈಗಿನ ಸಂದರ್ಭಕ್ಕೆ ಲಸಿಕೆಯ ಬೇಗ ಬರುವುದು ಅಗತ್ಯ ಎನ್ನುವುದು ಬೆಂಗಳೂರಿನ ಸಾಂಕ್ರಾಮಿಕ ರೋಗ ತಜ್ಞ ಡಾ. ಸುನಿಲ್ ಕುಮಾರ್ ಅವರ ಅಭಿಪ್ರಾಯ. ‘ಲಸಿಕೆಗಳ ಅಡ್ಡ ಪರಿಣಾಮಗಳ ಬಗ್ಗೆ ಗಮನ ಹರಿಸಲೇಬೇಕು. ಈಗ ಲಭ್ಯವಿರುವ ಲಸಿಕೆಗಳು ಕಡಿಮೆ ಅಡ್ಡ ಪರಿಣಾಮಗಳು ಹೊಂದಿದೆ’ ಎಂದು ಅವರು ಮಾಹಿತಿ ನೀಡಿದರು.

‘ಲಸಿಕೆ ಬಳಕೆಗೆ ಬರುತ್ತಿದೆ ಎನ್ನುವುದು ಸಂತೊಷದ ವಿಚಾರ’ ಎಂದು ಮೈಸೂರಿನ ಗೃಹಿಣಿ ರಶ್ಮಿ ಪ್ರೀತಮ್ ಹೇಳಿದರು.

ಈ ಲಸಿಕೆ ಎಷ್ಟರಮಟ್ಟಿಗೆ ಉಪಯುಕ್ತವಾಗಿದೆ, ಲಸಿಕೆಗಳ ತೊಂದರೆ ಬಗ್ಗೆ ಸರ್ಕಾರ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುವುದು ಅಗತ್ಯ. ಒಬ್ಬೊಬ್ಬರು ಒಂದೊಂದು ವಿಚಾರ ಹೇಳುವ ಬದಲು ಸ್ಪಷ್ಟ ಮಾಹಿತಿ ನೀಡಬೇಕು ಎಂದು ಅವರು ನುಡಿದರು.

Follow us on

Related Stories

Most Read Stories

Click on your DTH Provider to Add TV9 Kannada