ಕೇರಳ ಚರ್ಚ್‌ ಮೇಲೆ ಐಟಿ ದಾಳಿ: ಸಿಕ್ಕ ಹಣವೆಷ್ಟು, ಚರ್ಚ್​ ವ್ಯವಹಾರಗಳೇನು?

  • TV9 Web Team
  • Published On - 12:27 PM, 10 Nov 2020
ಕೇರಳ ಚರ್ಚ್‌ ಮೇಲೆ ಐಟಿ ದಾಳಿ: ಸಿಕ್ಕ ಹಣವೆಷ್ಟು, ಚರ್ಚ್​ ವ್ಯವಹಾರಗಳೇನು?

ಕೇರಳ: ಆದಾಯ ತೆರಿಗೆ ಇಲಾಖೆಯು ಮಧ್ಯ ಕೇರಳದ ತಿರುವಳ್ಳದಲ್ಲಿರುವ ಬಿಲೀವರ್ಸ್ ಈಸ್ಟರ್ನ್ ಚರ್ಚ್‌ ಮೇಲೆ ಇತ್ತೀಚೆಗೆ ದಾಳಿ ನಡೆಸಿದೆ. ವರದಿಗಳ ಪ್ರಕಾರ, ಐ-ಟಿ ಇಲಾಖೆಯು ಒಂದು ದೊಡ್ಡ ಆರ್ಥಿಕ ಹಗರಣವನ್ನು ಪತ್ತೆಹಚ್ಚಿದ್ದು, ಸುಮಾರು 8 ಕೋಟಿ ಹಣವನ್ನು ವಶಪಡಿಸಿಕೊಂಡಿದೆ.

ಈ ಚರ್ಚ್ ಅನ್ನು ಸುವಾರ್ತಾಬೋಧಕ ಕೆ.ಪಿ. ಯೋಹನ್ನನ್ (Evangelist KP Yohannan) ಮುನ್ನಡೆಸುತ್ತಿದ್ದಾರೆ. ಮತ್ತು ಧಾರ್ಮಿಕ ಮತಾಂತರಕ್ಕಾಗಿ ದಾನವಾಗಿ ಸಂಗ್ರಹಿಸಿದ ಹಣವನ್ನು ಬೇರೆ ಚಟುವಟಿಕೆಗಳಿಗೆ ಬಳಸುತ್ತಿದ್ದಾರೆ ಎಂಬುದೂ ಪತ್ತೆಯಾಗಿದೆ. ಚಾರಿಟಿ ಫಂಡ್‌ಗಳನ್ನು ಬಳಸಿಕೊಂಡು ಸುವಾರ್ತಾಬೋಧಕ ಚಟುವಟಿಕೆಗಳನ್ನು (Evangelical Activities) ನಡೆಸಿದ್ದಕ್ಕಾಗಿ ಈ ಹಿಂದೆ ಕೇಂದ್ರ ಗೃಹ ಸಚಿವಾಲಯವು ಬಿಲೀವರ್ಸ್ ಈಸ್ಟರ್ನ್ ಚರ್ಚ್‌ನ ಎಫ್‌ಸಿಆರ್‌ಎ ಪರವಾನಗಿಯನ್ನು ರದ್ದುಗೊಳಿಸಿತ್ತು.

7 ವರ್ಷಗಳಲ್ಲಿ 7,000 ಕೋಟಿ ದೇಣಿಗೆ..
ಕೆಲವು ವರದಿಗಳ ಪ್ರಕಾರ, Believers Eastern Church ಕಳೆದ 7 ವರ್ಷಗಳಲ್ಲಿ 7,000 ಕೋಟಿ ಹಣವನ್ನು ದೇಣಿಗೆಯಾಗಿ ಪಡೆದುಕೊಂಡಿರುವುದು ತಿಳಿದುಬಂದಿದೆ. ಚರ್ಚ್ ಈ ಹಣವನ್ನು ರಿಯಲ್ ಎಸ್ಟೇಟ್ ವ್ಯವಹಾರ ಮತ್ತು ಸಂಸ್ಥೆಗಳ ನಿರ್ಮಾಣದಲ್ಲಿ ಬಳಸಿಕೊಂಡಿದೆ ಎಂದು ವರದಿಯಾಗಿದೆ. ವಾಸ್ತವವಾಗಿ, ಬಿಲೀವರ್ಸ್ ಚರ್ಚ್​ನ ಪರವಾನಗಿ ರದ್ದಾದ ನಂತರವೂ ಸಹ ವಿವಿಧ ಟ್ರಸ್ಟ್‌ಗಳಿಂದ ಹಣವನ್ನು ಪಡೆಯುವುದನ್ನು ಮುಂದುವರೆಸಿದೆ ಎಂದು ವರದಿಯಾಗಿದೆ.