ಐಟಿ ರಿಟರ್ನ್​ ಸಲ್ಲಿಕೆ ದಿನಾಂಕದ ಗಡುವು ವಿಸ್ತರಣೆ

2019-20 ರ ಆದಾಯ ತೆರೆಗಿ ರಿಟರ್ನ್​ ಸಲ್ಲಿಕೆಗೆ ಡಿಸೆಂಬರ್ 31 ಕೊನೆಯ ದಿನವಾಗಿತ್ತು. ಈಗ ಈ ಗಡುವನ್ನು ಕೇಂದ್ರ ಸರ್ಕಾರ ವಿಸ್ತರಣೆ ಮಾಡಿದೆ. ಕಂಪೆನಿಗಳ ರಿಟರ್ನ್​ ಸಲ್ಲಿಕೆ ಅವಧಿಯನ್ನು 45 ದಿನ ವಿಸ್ತರಣೆ ಮಾಡಿದೆ.

ಐಟಿ ರಿಟರ್ನ್​ ಸಲ್ಲಿಕೆ ದಿನಾಂಕದ ಗಡುವು ವಿಸ್ತರಣೆ
ಸಾಂದರ್ಭಿಕ ಚಿತ್ರ
Rajesh Duggumane

|

Dec 30, 2020 | 7:13 PM

ಆದಾಯ ತೆರಿಗೆ ರಿಟರ್ನ್​ ಸಲ್ಲಿಕೆಗೆ ಇದ್ದ ಗಡುವನ್ನು ಕೇಂದ್ರ ಸರ್ಕಾರ ವಿಸ್ತರಣೆ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಮೂಲಕ ಕೊರೊನಾ ಸಮಯದಲ್ಲಿ ಆದಾಯಾ ತೆರಿಗೆ ರಿಟರ್ನ್​ ಸಲ್ಲಿಕೆ ಮಾಡದವರಿಗೆ  ರಿಟರ್ನ್​ ಸಲ್ಲಿಕೆಗೆ ಸರ್ಕಾರ ಮತ್ತೊಂದು ಅವಕಾಶ ನೀಡಿದೆ.

2019-20 ರ ಆದಾಯ ತೆರೆಗಿ ರಿಟರ್ನ್​ ಸಲ್ಲಿಕೆಗೆ ಡಿಸೆಂಬರ್ 31 ಕೊನೆಯ ದಿನವಾಗಿತ್ತು. ಈಗ ಈ ಗಡುವನ್ನು ಕೇಂದ್ರ ಸರ್ಕಾರ ವಿಸ್ತರಣೆ ಮಾಡಿದೆ. ಕಂಪೆನಿಗಳ ರಿಟರ್ನ್​ ಸಲ್ಲಿಕೆ ಅವಧಿಯನ್ನು 45 ದಿನ ವಿಸ್ತರಣೆ ಮಾಡಿದೆ. ಈ ಮೂಲಕ ಫೆ.15ವರೆಗೂ ಕಂಪೆನಿಗಳು ಐಟಿ ರಿಟರ್ನ್​ ಸಲ್ಲಿಕೆ ಮಾಡಲು ಕಾಲಾವಕಾಶ ಇದೆ. ಇನ್ನು, ವೈಯಕ್ತಿಕವಾಗಿ ಆದಾಯ ತೆರಿಗೆ ರಿಟರ್ನ್​ ಸಲ್ಲಿಕೆ ದಿನಾಂಕ 10 ದಿನ ವಿಸ್ತರಣೆಗೊಂಡಿದ್ದು, ಜನವರಿ 10ವರೆಗೆ ಐಟಿ ರಿಟರ್ನ್​ ಸಲ್ಲಿಕೆ ಮಾಡಬಹುದಾಗಿದೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಆದಾಯ ತೆರಿಗೆ ಇಲಾಖೆ, ಕೊರೊನಾ ಕಾರಣದಿಂದ ಸಾಕಷ್ಟು ತೊಂದರೆ ಉಂಟಾಗಿದೆ. ಇದನ್ನು ಗಮನಿಸಿ ನಾವು ರಿಟರ್ನ್​ ಫೈಲಿಂಗ್​ ಗಡುವನ್ನು ವಿಸ್ತರಿಸಿದ್ದೇವೆ ಎಂದಿದೆ.

Email -SMS ಕಡೆಗಣನೆ.. ಏನಿದು ಆದಾಯ ತೆರಿಗೆ ಇಲಾಖೆಯ ಹೊಸ ಎಚ್ಚರಿಕೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada