ರಂಭಾಪುರದಲ್ಲಿ ಜೋಳದ ಅಂಬಲಿ: ರೈತರು ಆಂಜನೇಯನಿಗೆ ಅರ್ಪಿಸುವ ಈ ನೈವೇದ್ಯದ ವಿಶೇಷತೆ ಏನು?
Vijayapura Ambali Jatre: ಇನ್ನು ರಂಭಾಪುರ ಗ್ರಾಮದಲ್ಲಿ ಶಿವರಾತ್ರಿ ಕಳೆದರೆ ಸಾಕು, ಅಂಬಲಿ ಜಾತ್ರಾ ಪದ್ದತಿ ತಯಾರಿ ಶುರು ಮಾಡುತ್ತಾರೆ. ಕಾರಣ ಶಿವರಾತ್ರಿಯ ಬಳಿಕ ಬರುವ ಹೋಳಿ ಹುಣ್ಣಿಮೆ ಒಳಗಡೆ ರಂಭಾಪುರ ಶ್ರೀ ಆಂಜನೇಯ ದೇವರಿಗೆ ಅಂಬಲಿ ಹಾಗೂ ಇತರೆ ಖಾದ್ಯಗಳ ನೈವೇದ್ಯ ಮಾಡಲೇಬೇಕು. ಇದು ಹಲವಾರು ತಲೆಮಾರುಗಳಿಂದ ನಡೆದುಕೊಂಡು ಬಂದ ಪದ್ದತಿಯಾಗಿದೆ. ಇಲ್ಲಿನ ರೈತರು ತಮ್ಮ ತಮ್ಮ ಜಮೀನುಗಳಲ್ಲಿ ಎಷ್ಟೇ ಪ್ರಮಾಣದ ದವಸ ಧಾನ್ಯಗಳನ್ನು ಹಾಗೂ ಇತರೆ ಉತ್ಪನ್ನಗಳನ್ನು ಬೆಳದರೂ ಅಂಬಲಿ ನೈವೇದ್ಯ ಮಾಡುವವರೆಗೂ ಅವುಗಳನ್ನು ಮಾರಾಟ ಮಾಡುವುದಿಲ್ಲ.
ನಮ್ಮ ಹಿರಿಯರು ಜಾತ್ರೆ ಹಬ್ಬಗಳನ್ನು ಸಾಮಾಜಿಕ ಮೈತ್ರಿ ಸಾಧನೆಗಾಗಿ ವೇದಿಕೆಯನ್ನಾಗಿಸಿಕೊಳ್ಳುತ್ತಿದ್ದರು. ಜಾತ್ರೆ ಹಬ್ಬಗಳ ನೆಪದಲ್ಲಿ ಎಲ್ಲರೂ ಬೆರೆತು ಒಂದಾಗಿ ಸಾಮರಸ್ಯದಿಂದ ಇರಬೇಕೆಂಬ ಸದುದ್ದೇಶ ಅವರಲ್ಲಿತ್ತು. ಇಂದು ದಿನ ಬೆಳೆಗಾದರೆ ಸಾಕು ಜಾತಿ, ಕೋಮು, ಮೇಲು ಕೀಳು ಎಂದೆಲ್ಲಾ ಬಡಿದಾಡಿಕೊಳ್ಳುವ ನಮಗೆ ನಮ್ಮ ಹಿರಿಯರ ಮಾರ್ಗ ಅನುಕರಣಿಯವಾಗಬೇಕಿದೆ. ಇಂಥದ್ದೇ ಸಾಮರಸ್ಯದ ಪದ್ದತಿಯನ್ನು ಹಲವಾರು ತಲೆಮಾರುಗಳಿಂದ ಈ ಪುಟ್ಟ ಗ್ರಾಮದಲ್ಲಿ ನಡೆಸಿಕೊಂಡು ಬರಲಾಗಿದೆ. ಅದು ಯಾವ ಪದ್ದತಿ (Vijayapura Ambali Jatre) ಎಂದು ತಿಳಿದುಕೊಳ್ಳಬೇಕಾದರೆ ಈ ಸ್ಟೋರಿ ನೋಡಿ.
ವಿಜಯಪುರ ನಗರಕ್ಕೆ ಹೊಂದಿಕೊಂಡಿರೋ ಪುಟ್ಟ ಗ್ರಾಮ ರಂಭಾಪುರ. ಪುರಾತನ ಐತಿಹ್ಯವನ್ನು ಹೊಂದಿರೋ ಈ ಗ್ರಾಮದಲ್ಲಿ ವಿಶೇಷ ಆಚರಣೆ ತಲೆ ತಲೆಮಾರುಗಳಿಂದಲೂ ನಡೆದುಕೊಂಡು ಬಂದಿದೆ. ಈ ಆಚರಣೆ ಕೇವಲ ಆಚರಣೆಯಲ್ಲಾ ಇಡೀ ಗ್ರಾಮದ ಜನರನ್ನು ಒಗ್ಗೂಡಿಸೋ ಆಚರಣೆಯಾಗಿದೆ. ಹಿಂಗಾರು ಹಂಗಾಮಿನ ಬೆಳಗಳ ಕಟಾವು ಮಾಡಿ ರಾಶಿ ಮಾಡಿದ ಬಳಿಕ ನಡೆದೋ ಪದ್ದತಿಯಾಗಿದೆ. ರಂಭಾಪುರ ಗ್ರಾಮದ ಜನರು ಹೆಚ್ಚಾಗಿ ಕೃಷಿಯನ್ನೇ ಅವಲಂಭಿಸಿದ್ದಾರೆ.
ಗ್ರಾಮದ ಕೃಷಿಕರು ಹಿಂಗಾರು ಹಂಗಾಮಿನ ಬೆಳಗಳ ಕಟಾವು ಮಾಡಿ ರಾಶಿ ಮಾಡಿ ಮನೆಗೆ ತರುತ್ತಾರೆ. ಹೀಗೆ ತಂದ ಫಸಲನ್ನು ಯಾರೂ ಉಪಯೋಗಿಸಲ್ಲ. ಇದೇ ರಾಶಿಯ ಜೋಳದಿಂದ ಮಾಡಿದ ಅಂಬಲಿ, ರೊಟ್ಟಿ, ಗೋಧಿ ಚಪಾತಿ ಹಾಗೂ ಇತರೆ ಧವಸ ಧಾನ್ಯಗಳಿಂದ ತರಕಾರಿಗಳಿಂದ ಮಾಡಿದ ವಿವಿಧ ಪಲ್ಯಗಳ ಭಕ್ಷ್ಯ ಭೋಜನ ಮಾಡಿ ಅದನ್ನು ಗ್ರಾಮ ದೇವತೆ ಶ್ರೀ ಆಂಜನೇಯನಿಗೆ ನೈವೇದ್ಯ ಅರ್ಪಿಸಿದ ಬಳಿಕವೇ ಮನೆಯಲ್ಲಿ ಉಪಯೋಗಿಸುತ್ತಾರೆ.
ಸಾಮಾನ್ಯವಾಗಿ ಈ ಪದ್ದತಿಯನ್ನು ಶಿವರಾತ್ರಿ, ಅಮಾವಾಸ್ಯೆ ಹಾಗೂ ಹೋಳಿ ಹುಣ್ಣಿಮೆಯೊಳಗೆ ಮಾಡುತ್ತಾರೆ. ಗ್ರಾಮದ ಪ್ರತಿಯೊಬ್ಬರೂ ಹಿಂಗಾರು ಬೆಳಗಳಿಂದ ದೇವರಿಗೆ ನೇವೈದ್ಯ ಮಾಡುತ್ತಾರೆ. ಈ ಪದ್ದತಿಯ ನೇತೃತ್ವವನ್ನು ಗ್ರಾಮದ ಮೆಂಡೇಗಾರ ಕುಟುಂಬದವರು ವಹಿಸಿಕೊಳ್ಳುತ್ತಾರೆ. ಹೊಸ ಗಡಿಗೆಯಲ್ಲಿ ದೇವಸ್ಥಾನಕ್ಕೆ ಜೋಳದ ಅಂಬಲಿ ತರುತ್ತಾರೆ. ನಂತರ ಗ್ರಾಮದ ಇತರೆ ಮನೆತನದವರು ಅಂಬಲಿ ಹಾಗೂ ಇತರೆ ಖಾದ್ಯಗಳನ್ನು ತರುತ್ತಾರೆ. ಎಲ್ಲರೂ ಗ್ರಾಮದ ದೇವರು ಶ್ರೀ ಅಂಜನೇಯ ದೇವಸ್ಥಾನದಲ್ಲಿ ನೆರೆಯುತ್ತಾರೆ. ಶ್ರೀ ಅಂಜನೇಯನಿಗೆ ಪದ್ದತಿಯಂತೆ ಪೂಜೆ ಪುನಸ್ಕಾರ ಮಾಡಿ ಅಂಬಲಿ ಹಾಗೂ ಇತರೆ ಖಾದ್ಯಗಳನ್ನು ನೇವೈದ್ಯ ಸಮರ್ಪಿಸುತ್ತಾರೆ ಎನ್ನುತ್ತಾರೆ ಭೀಮು ಮೆಂಡೆಗಾರ, ಅಂಬಲಿ ಪದ್ದತಿ ಮಾಡುವ ಮನೆತನದವರು.
ಇನ್ನು ರಂಭಾಪುರ ಗ್ರಾಮದಲ್ಲಿ ಶಿವರಾತ್ರಿ ಕಳೆದರೆ ಸಾಕು, ಅಂಬಲಿ ಜಾತ್ರಾ ಪದ್ದತಿ ತಯಾರಿ ಶುರು ಮಾಡುತ್ತಾರೆ. ಕಾರಣ ಶಿವರಾತ್ರಿಯ ಬಳಿಕ ಬರುವ ಹೋಳಿ ಹುಣ್ಣಿಮೆ ಒಳಗಡೆ ರಂಭಾಪುರ ಶ್ರೀ ಆಂಜನೇಯ ದೇವರಿಗೆ ಅಂಬಲಿ ಹಾಗೂ ಇತರೆ ಖಾದ್ಯಗಳ ನೈವೇದ್ಯ ಮಾಡಲೇಬೇಕು. ಇದು ಹಲವಾರು ತಲೆಮಾರುಗಳಿಂದ ನಡೆದುಕೊಂಡು ಬಂದ ಪದ್ದತಿಯಾಗಿದೆ. ಇಲ್ಲಿನ ರೈತರು ತಮ್ಮ ತಮ್ಮ ಜಮೀನುಗಳಲ್ಲಿ ಎಷ್ಟೇ ಪ್ರಮಾಣದ ದವಸ ಧಾನ್ಯಗಳನ್ನು ಹಾಗೂ ಇತರೆ ಉತ್ಪನ್ನಗಳನ್ನು ಬೆಳದರೂ ಅಂಬಲಿ ನೈವೇದ್ಯ ಮಾಡುವವರೆಗೂ ಅವುಗಳನ್ನು ಮಾರಾಟ ಮಾಡುವುದಿಲ್ಲ.
ಹೀಗೆ ನಡೆಯೋ ಈ ಪದ್ದತಿಗೆ ಮೆಂಡಗಾರ ಕುಟುಂಬದವರು ನೇತೃತ್ವ ವಹಿಸುತ್ತಾರೆ. ವಾರಕ್ಕೂ ಮುನ್ನ ಮನೆಗಳನ್ನು ಸ್ವಚ್ಛ ಮಾಡಿಕೊಂಡು ಕಟ್ಟು ನಿಟ್ಟಿನ ಆಚರಣೆ ಮಾಡುತ್ತಾರೆ. ಗ್ರಾಮದ ಹಿರಿಯರು ಯಾವಾಗ ಅಂಬಲಿ ಜಾತ್ರೆ ಅಂದರೆ ಅಂಬಲಿ ನೈವೇಧ್ಯ ಆಚರಣ ಮಾಡಬೇಕೆಂದು ನಿರ್ಧಾರ ಮಾಡುತ್ತಾರೆ. ಅಂದು ಗ್ರಾಮದ ಜನರೆಲ್ಲ ನಸುಕಿನ ಜಾವದಲ್ಲೇ ವಿವಿಧ ಖಾಧ್ಯಗಳನ್ನು ಮಾಡುತ್ತಾರೆ. ಮೆಂಡೆಗಾರ ಮನೆತನದವರು ಅಂಬಲಿ ಮಾಡುತ್ತಾರೆ. ಬಳಿಕ ಎಲ್ಲರೂ ಸೇರಿ ಗಡಿಗೆಯಲ್ಲಿ ಅಂಬಲಿ ಹಾಕಿಕೊಂಡು ತಲೆಮೇಲೆ ಹೊತ್ತು ದೇವಸ್ಥಾನಕ್ಕೆ ತಂದು ಪೂಜೆ ಸಲ್ಲಿಸಿ ಅಂಬಲಿ ಹಾಗು ಎಲ್ಲಾ ಖಾದ್ಯಗಳನ್ನು ದೇವರಿಗೆ ಸಮರ್ಪನೆ ಮಾಡುತ್ತಾರೆ. ಬಳಿಕ ಗ್ರಾಮದ ಮಹಿಳೆಯರು ಯುವಕ ಯುವತಿಯರು ಪುರುಷರು ಮಕ್ಕಳು ಎಲ್ಲರೂ ಜೊತೆಗೂಡಿ ಸಹ ಭೋಜನ ಮಾಡುತ್ತಾರೆ.
ಹಲವಾರು ತಲೆಮಾರುಗಳಿಂದ ನಡೆದುಕೊಂಡು ಬಂದಿರೋ ಈ ಪದ್ದತಿಯನ್ನು ಇಲ್ಲಿ ಮುಂದಿವರೆಸಿಕೊಂಡು ಬಂದಿದ್ದಾರೆ. ಗ್ರಾಮದ ದೇವರು ಶ್ರೀ ಆಂಜನೇಯನಿಗೆ ನೈವೇದ್ಯ ಅರ್ಪಿಸುವದಕ್ಕೂ ಮುನ್ನ ಯಾರೂ ಹಿಂಗಾರಿನ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲ್ಲ. ಒಂದು ವೇಳೆ ಮಾಡಿದರೆ ಅವರಿಗೆ ಕೇಡುಂಟಾದ ಉದಾಹರಣೆ ಗ್ರಾಮದಲ್ಲಿವೆ. ಇನ್ನು ದೇವರಿಗೆ ಅರ್ಪಿಸಿದ ಅಂಬಲಿಗೆ ವಿಶೇಷ ಶಕ್ತಿಯಿದೆ ಎನ್ನುತ್ತಾರೆ. ಈ ಅಂಬಲಿ ಸೇವನೆಯಿಂದ ಆರೋಗ್ಯ ಭಾಗ್ಯ ಸಿಗುತ್ತದೆ ಹಾಗೂ ಬೇಡಿಕೊಂಡ ಸಂಕಲ್ಪಗಳು ಈಡೇರುತ್ತವೆ ಎಂದು ಗ್ರಾಮದ ಜನರು ಹೇಳುತ್ತಾರೆ. ಇದರ ಜೊತೆಗೆ ಈ ಪದ್ದತಿ ಇಡೀ ಗ್ರಾಮದಲ್ಲಿ ಸಹೋದರತೆಯನ್ನು ಸಹಬಾಳ್ವೆಯನ್ನು ಉಳಿಸಿ ಬೆಳೆಸಲು ಕಾರಣವಾಗಿದೆ. ಜಾತಿ ಮತ ಪಂಥ ಬೇಧವಿಲ್ಲದೇ ಎಲ್ಲರೂ ಸಹಭೋಜನ ಮಾಡಿ ಸಹೋದರರಂತೆ ಇರೋದು ವಿಶಿಷ್ಟವಾಗಿದೆ.
Published On - 3:23 pm, Mon, 25 March 24