ಬೆಂಗಳೂರು: ಪರಿಷತ್ ಸಭಾಪತಿ ಮೇಲೆ ನಮಗೆ ವಿಶ್ವಾಸವಿಲ್ಲ. ಅವರು ನಿಯಮಾವಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ವಿಧಾನಪರಿಷತ್ ಕಾರ್ಯದರ್ಶಿಗೆ ಜೆಡಿಎಸ್ನಿಂದ ಪತ್ರ ನೀಡಲಾಗಿದೆ.
ಇಂದಿನ ಕಲಾಪದ ವೇಳೆ, ತಮ್ಮ ಪಕ್ಷದವರಾದ ಉಪಸಭಾಪತಿ ಧರ್ಮೇಗೌಡರನ್ನು ಎಳೆದಾಡಿದ ಹಿನ್ನೆಲೆಯಲ್ಲಿ ಪಕ್ಷ ಈ ಪತ್ರ ನೀಡಿದೆ. ಜೊತೆಗೆ, ಇಂದಿನ ನಡಾವಳಿಯನ್ನು ರದ್ದು ಮಾಡಲು ಸಹ ತನ್ನ ಪತ್ರದಲ್ಲಿ ಉಲ್ಲೇಖಿಸಲಾಗಿದೆ.