ಉಳ್ಳವರು.. ಆಪಲ್ ಏರ್‌ಪಾಡ್ಸ್​ಗಾಗಿ ಚಿನ್ನದ ಕಿವಿಯೋಲೆ ಮಾಡಿಸುವರಯ್ಯಾ!

  • TV9 Web Team
  • Published On - 12:47 PM, 18 Sep 2020
ಉಳ್ಳವರು.. ಆಪಲ್ ಏರ್‌ಪಾಡ್ಸ್​ಗಾಗಿ ಚಿನ್ನದ ಕಿವಿಯೋಲೆ ಮಾಡಿಸುವರಯ್ಯಾ!

ಮಿಶೋ ಡಿಸೈನ್ಸ್‌ ಎಂಬ ಜ್ಯುವೆಲ್ಲರಿ ಕಂಪನಿಯ ಸೃಜನಶೀಲ ನಿರ್ದೇಶಕಿ ಸುಹಾನಿ ಪರೇಖ್ ಅವರು ತಮ್ಮ ಆಪಲ್ ಏರ್‌ಪಾಡ್ಸ್​ಗಾಗಿ ಚಿನ್ನದ ಕಿವಿಯೋಲೆಗಳನ್ನು ತಯಾರಿಸಿ ಈಗ ಎಲ್ಲೆಡೆ ಸುದ್ದಿಯಾಗಿದ್ದಾರೆ.

ಉಳ್ಳವರು ಚಿನ್ನದಲ್ಲೇ ಮಾಡುವರಯ್ಯಾ
ಲಂಡನ್ ಮೂಲದ ಆಭರಣ ಕಂಪನಿಯಾಗಿರುವ ಮಿಶೋ ಡಿಸೈನ್ಸ್‌ ಕಂಪನಿಯ ಸೃಜನಶೀಲ ನಿರ್ದೇಶಕರಾಗಿರುವ ಪರೇಖ್ ಅವರು ತಮ್ಮ ವೈರ್‌ಲೆಸ್ ಹೆಡ್‌ಫೋನ್‌ಗಳು ಕಿವಿಯಿಂದ ಪದೇ ಪದೇ ಜಾರಿಬೀಳುವುದನ್ನು ಗಮನಿಸಿದ ಅವರು ತಮ್ಮ ವೈರ್‌ಲೆಸ್ ಹೆಡ್‌ಫೋನ್‌ಗಳು ಜಾರಿಬೀಳುವುದನ್ನು ತಪ್ಪಿಸಲು, ಹೆಡ್‌ಫೋನ್​ನನ್ನು ಹಿಡಿದಿಟ್ಟುಕೊಳ್ಳುವ ಹಾಗೆ ಕಿವಿಯೋಲೆಗಳನ್ನು ತಯಾರಿಸಿಕೊಂಡಿದ್ದಾರೆ.

ತಮ್ಮ ಈ ವಿಭಿನ್ನ ಕಿವಿಯೋಲೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪರೇಖ್, ನನ್ನ ಆಪಲ್ ಏರ್‌ಪಾಡ್​ಗಳು ನನ್ನ ಕಿವಿಯಿಂದ ಜಾರಿಬೀಳುತ್ತಿದ್ದವು. ಜೊತೆಗೆ ಏರ್ ಪಾಡ್​ಗಳು ಸುಲಭವಾಗಿ ಪಾಪ್ ಔಟ್ ಆಗುತ್ತವೆ. ಹಾಗಾಗಿ ನಾನು ಅವುಗಳನ್ನು ಕಳೆದುಕೊಳ್ಳುತ್ತೇನೆ ಎಂದು ಆಗಾಗ್ಗೆ ಹೆದರುತ್ತಿದ್ದೆ. ಈ ಭಯದಿಂದ ನಾನು ಈ ವಿಭಿನ್ನ ಕಿವಿಯೋಲೆಗಳನ್ನು ತಯಾರಿಸಿದೆ ಎಂದಿದ್ದಾರೆ.