ಕೊರೊನಾ ಭೀತಿ ಕ್ಷೀಣ! ನಿರುದ್ಯೋಗಿಗಳಿಗೆ ಸಿಹಿ ಸುದ್ದಿ.. ಐಟಿ ಕ್ಷೇತ್ರದಲ್ಲಿ ನಡೆಯಲಿದೆ ಭಾರೀ ನೇಮಕಾತಿಗಳು

ಕೊರೊನಾ ವೈರಸ್​ ಬಂದ ನಂತರ ಬಹುತೇಕ ಎಲ್ಲಾ ಕ್ಷೇತ್ರಗಳು ಡಿಜಿಟಲೀಕರಣಕ್ಕೆ ಒತ್ತು ನೀಡಲು ಆರಂಭಿಸಿದ್ದವು. ಇದು ಐಟಿ ಕ್ಷೇತ್ರದ ಬೆಳವಣಿಗೆಗೆ ಪ್ರಮುಖ ಕಾರಣ.

  • TV9 Web Team
  • Published On - 16:41 PM, 17 Feb 2021
ಕೊರೊನಾ ಭೀತಿ ಕ್ಷೀಣ! ನಿರುದ್ಯೋಗಿಗಳಿಗೆ ಸಿಹಿ ಸುದ್ದಿ.. ಐಟಿ ಕ್ಷೇತ್ರದಲ್ಲಿ ನಡೆಯಲಿದೆ ಭಾರೀ ನೇಮಕಾತಿಗಳು
ಸಾಂದರ್ಭಿಕ ಚಿತ್ರ

ಮುಂಬೈ: ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಉದ್ಯೋಗ ನಷ್ಟ ಉಂಟಾಗಿತ್ತು. ಈಗ ಆರ್ಥಿಕತೆ ನಿಧಾನವಾಗಿ ಚೇತರಿಕೆ ಕಾಣುತ್ತಿದೆ. ಹೀಗಾಗಿ, ಮಾಹಿತಿ ಮತ್ತು ತಂತ್ರಜ್ಞಾನ (ಐಟಿ) ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ವರದಿಗಳು ಹೇಳಿವೆ.

NASSCOM ಹೆಸರಿನ ಸಂಸ್ಥೆ ಈ ಬಗ್ಗೆ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿದೆ. ಈ ವರದಿ ಹೇಳುವ ಪ್ರಕಾರ 2021ರಲ್ಲಿ ಶೇ. 95 ಐಟಿ ಸಿಇಒಗಳು ನೌಕರರನ್ನು ನೇಮಕ ಮಾಡಿಕೊಳ್ಳಲು ಆಸಕ್ತಿ ತೋರಿದ್ದಾರೆ. ಇದಕ್ಕೆ ಕಾರಣವೂ ಇದೆ. 2019-20ರಲ್ಲಿ ಐಟಿ ಕ್ಷೇತ್ರ 194 ಬಿಲಿಯನ್​ ಡಾಲರ್​ ಆದಾಯ ಗಳಿಸಿತ್ತು. 2020-21 ಅವಧಿಯಲ್ಲಿ ಈ ಆದಾಯ 194 ಬಿಲಿಯನ್​ ಡಾಲರ್​ಗೆ ಏರಿಕೆ ಆಗುವ ನಿರೀಕ್ಷೆ ಇದೆ.

ಕೊರೊನಾ ವೈರಸ್​ ಬಂದ ನಂತರ ಬಹುತೇಕ ಎಲ್ಲಾ ಕ್ಷೇತ್ರಗಳು ಡಿಜಿಟಲೀಕರಣಕ್ಕೆ ಒತ್ತು ನೀಡಲು ಆರಂಭಿಸಿದ್ದವು. ಇದು ಐಟಿ ಕ್ಷೇತ್ರದ ಬೆಳವಣಿಗೆಗೆ ಪ್ರಮುಖ ಕಾರಣ. 2020 ಒಟ್ಟೂ ದೇಶಿಯ ಉತ್ಪಾದನೆಯಲ್ಲಿ ಐಟಿ ಕ್ಷೇತ್ರ ಶೇ. 8 ಕೊಡುಗೆ ನೀಡಿತ್ತು. ಇನ್ನು ಕಳೆದ ವರ್ಷ, ಇ-ಕಾಮರ್ಸ್​ ಕ್ಷೇತ್ರ ಶೇ. 4.8 ಬೆಳವಣಿಗೆ ಕಂಡಿದೆ. ಹಾರ್ಡ್​ವೇರ್​ ಕ್ಷೇತ್ರ ಶೇ.4.1 ಬೆಳವಣಿಗೆ ಕಂಡಿದೆ.

ಇದನ್ನೂ ಓದಿ: Budget 2021: ಉತ್ಪಾದನಾ ವಲಯದಲ್ಲಿ ಉದ್ಯೋಗ ಸೃಷ್ಟಿ ನಿರೀಕ್ಷೆ

ಈ ವರ್ಷ ಐಟಿ ಕ್ಷೇತ್ರದಲ್ಲಿ 1.38 ಲಕ್ಷ ಉದ್ಯೋಗಿ ಸೃಷ್ಟಿ ಸಾಧ್ಯತೆ ಇದೆ. ಇದರಿಂದ ಕೆಲಸ ಕಳೆದುಕೊಂಡವರು ಹಾಗೂ ಈಗತಾನೇ ಪದವಿ ಮುಗಿಸಿ ಉದ್ಯೋಗ ಕ್ಷೇತ್ರಕ್ಕೆ ಕಾಲಿಡ ಬಯಸುವವರಿಗೆ ಕೆಲಸ ಸಿಕ್ಕಂತಾಗಲಿದೆ.