ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಬಂತು JSS ಇಮ್ಯೂನ್ ಬೂಸ್ಟರ್ ಕಿಟ್!

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಬಂತು JSS ಇಮ್ಯೂನ್ ಬೂಸ್ಟರ್ ಕಿಟ್!

ಮೈಸೂರು: ಜಿಲ್ಲೆಯ ಪ್ರತಿಷ್ಠಿತ JSS ಆಯುರ್ವೇದ ಆಸ್ಪತ್ರೆಯಿಂದ ಇಂದು ಇಮ್ಯೂನ್ ಬೂಸ್ಟರ್ ಕಿಟ್ ಬಿಡುಗಡೆ ಮಾಡಲಾಯಿತು. ಸುತ್ತೂರು ಮಠಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯಿಂದ ಇಮ್ಯೂನ್ ಬೂಸ್ಟರ್ ಕಿಟ್ ಬಿಡುಗಡೆ ಮಾಡಲಾಯಿತು. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕಿಟ್​ ಬಿಡುಗಡೆ ಮಾಡಲಾಯಿತು.

ಜನರಲ್ಲಿ ರೋಗ ನಿರೊಧಕ ಶಕ್ತಿ ಹೆಚ್ಚಿಸುವ ಆಯುರ್ವೇದದ ಔಷಧಿಯನ್ನು ಒಳಗೊಂಡಿರುವ ಕಿಟ್​ನಲ್ಲಿ ಚವನಪ್ರಾಶ, ಹರಿದ್ರಾರಸ, ಕಷಾಯ ಚೂರ್ಣ, ರಕ್ಷೋಘ್ನ ಧೂಪ, ಅಣುತೈಲ ಮೊದಲಾದ ಔಷಧಿಗಳಿವೆ.

ಇತ್ತೀಚೆಗೆ ಸೋಂಕಿತರ ಪ್ರಮಾಣ ಹೆಚ್ಚುತ್ತಿರುವುದರಿಂದ, ಜನರು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಈ ಇಮ್ಯೂನ್ ಬೂಸ್ಟರ್ ಕಿಟ್ ಸಹಕಾರಿಯಾಗಲಿದೆ.

600 ರೂಪಾಯಿ ಹಾಗೂ 990 ರೂಪಾಯಿಗಳ ಎರಡು ವಿಧದ ಇಮ್ಯೂನ್ ಬೂಸ್ಟರ್ ಕಿಟ್​ಗಳು JSS ಆಯುರ್ವೇದ ಆಸ್ಪತ್ರೆ ಮತ್ತು ಎಂ. ಜಿ‌. ರಸ್ತೆಯಲ್ಲಿರುವ JSS ಜನೌಷಧ ಕೇಂದ್ರಗಳಲ್ಲಿ ಲಭ್ಯವಿರಲಿದೆ.

Click on your DTH Provider to Add TV9 Kannada