ರೆಡ್ಡಿ ಮೊಮ್ಮಗುವಿಗೂ ಸಿದ್ಧವಾಗಿದೆ ಕಲಘಟಗಿಯ ಬಣ್ಣದ ತೊಟ್ಟಿಲು!

  • TV9 Web Team
  • Published On - 12:41 PM, 7 Aug 2020
ರೆಡ್ಡಿ ಮೊಮ್ಮಗುವಿಗೂ ಸಿದ್ಧವಾಗಿದೆ ಕಲಘಟಗಿಯ ಬಣ್ಣದ ತೊಟ್ಟಿಲು!

ಧಾರವಾಡ ಜಿಲ್ಲೆಯ ಕಲಘಟಗಿಯ ಬಣ್ಣದ ತೊಟ್ಟಿಲು ದೇಶದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲಿಯೂ ಹೆಸರುವಾಸಿಯಾಗಿದೆ.‌ ಕಲಘಟಗಿ ಬಣ್ಣದ ತೊಟ್ಟಿಲು ತನ್ನದೇ ಆದ ಮಹತ್ವವನ್ನು ಹೊಂದಿದೆ. ಕಲಘಟಗಿ ತೊಟ್ಟಿಲು ಕಲಾವಿದನ ಕೈ ಚಳಕದಿಂದ ನೋಡುಗರ ಕಣ್ಮನ ಸೆಳೆಯುತ್ತದೆ.
ಹೌದು.. ಇಂತಹ ಪ್ರಧಾನ್ಯತೆ ಹೊಂದಿರುವ ಬಣ್ಣದ ತೊಟ್ಟಿಲು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಪುತ್ರಿ ಬ್ರಹ್ಮಣಿ ಮಗುವಿಗೆ ಸಿದ್ಧವಾಗುತ್ತಿದೆ. ಕಲಘಟಗಿ ಕಲಾವಿದ ಮಾರುತಿ ಅವರು ಸುಮಾರು ಮೂರು ತಿಂಗಳಿನಿಂದ ತೊಟ್ಟಿಲು ತಯಾರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ತೊಟ್ಟಿಲಿನಲ್ಲಿ ಕೃಷ್ಣನ ಬಾಲಲೀಲೆ ಮೂಡಿಬಂದಿರುವುದು ತೊಟ್ಟಿಲಿನ ಮೆರಗನ್ನು ಮತ್ತಷ್ಟು ಹೆಚ್ಚಿಸಿದೆ. ಹಾವೇರಿ ಜಿಲ್ಲೆಯ ವನಿತಾ ಗುತ್ತಲ ಎಂಬುವವರು ಜನಾರ್ದನ ರೆಡ್ಡಿ ಮೊಮ್ಮಗುವಿಗೆ ಈ ತೊಟ್ಟಿಲನ್ನು ಉಡುಗರೆಯಾಗಿ ನೀಡುತ್ತಿದ್ದಾರೆ. ಈಗಾಗಲೇ 40,000 ಮುಂಗಡ ಹಣವನ್ನು ನೀಡಲಾಗಿದ್ದು, ಉಳಿದ 50,000 ಹಣವನ್ನು ಇಂದು ಕೊಟ್ಟು ಬೆಂಗಳೂರಿಗೆ ತೆಗೆದುಕೊಂಡು ಹೋಗಲಿದ್ದಾರೆ.

ಕಲಘಟಗಿಯ ಬಣ್ಣದ ತೊಟ್ಟಿಲಿಗೆ ಸಿನಿಮಾ ನಟರು ಕೂಡ ಮಾರು ಹೋಗಿದ್ದಾರೆ. ಯಶ್-ರಾಧಿಕಾ ಪಂಡಿತ್ ಮಗುವಿಗೆ ಅಂಬರೀಷ್ ಅಭಿಮಾನಿಯೊಬ್ಬರು ಇದೇ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದ್ದರು. ಮತ್ತು ರಾಜಕುಮಾರ್ ಕುಟುಂಬಕ್ಕೆ ಸಹ ಈ ತೊಟ್ಟಿಲು ತಲುಪಿದೆ!
-ದತ್ತಾತ್ರೇಯ ಪಾಟೀಲ್