ಕೊನೆಗೆ ಅನೌನ್ಸ್​ ಆಯ್ತು ಕನ್ನಡ ಬಿಗ್​ ಬಾಸ್​ ಸೀಸನ್​ 8 ಆರಂಭ ದಿನಾಂಕ

ಕೊರೊನಾ ವೈರಸ್​ ಕಾಣಿಸಿಕೊಳ್ಳದೆ ಇದ್ದಿದ್ದರೆ ಅಕ್ಟೋಬರ್​-ನವೆಂಬರ್​ ತಿಂಗಳಲ್ಲಿ ಕನ್ನಡ ಬಿಗ್​ ಆರಂಭಗೊಳ್ಳುತ್ತಿತ್ತು. ಆದರೆ, ಈಗ ಕೆಲ ತಿಂಗಳು ಬಿಟ್ಟು ಬಿಗ್​ ಬಾಸ್​ ಸೀಸನ್​ 8 ಆರಂಭಗೊಳ್ಳುತ್ತಿದೆ.

  • TV9 Web Team
  • Published On - 21:20 PM, 22 Jan 2021
ಕೊನೆಗೆ ಅನೌನ್ಸ್​ ಆಯ್ತು ಕನ್ನಡ ಬಿಗ್​ ಬಾಸ್​ ಸೀಸನ್​ 8 ಆರಂಭ ದಿನಾಂಕ
ಬಿಗ್​ ಬಾಸ್ ಆರಂಭದಲ್ಲಿ ಹಿರಿತೆರೆ ಹಾಗೂ ಕಿರಿತೆರೆಯಲ್ಲಿ ಗುರುತಿಸಿಕೊಂಡವರನ್ನು ಮಾತ್ರ ಕರೆಸಿಕೊಳ್ಳುತ್ತಿದ್ದರು. ನಂತರ ಸಾಮಾನ್ಯ ವ್ಯಕ್ತಿಗಳಿಗೂ ಬಿಗ್ ಬಾಸ್ ಮನೆಯಲ್ಲಿ ಪ್ರವೇಶ ಸಿಕ್ಕಿತ್ತು. ಆದರೆ, ಕಳೆದ ಬಾರಿಯಿಂದ ಜನಸಾಮಾನ್ಯರಿಗೆ ಬಿಗ್ ಬಾಸ್ ಮನೆ ಪ್ರವೇಶಿಸೋದಕ್ಕೆ ಅವಕಾಶವಿಲ್ಲ. ಹೀಗಾಗಿ, ಈ ಬಾರಿಯೂ ಬಿಗ್ ಬಾಸ್​​ಮನೆಯಲ್ಲಿ ಸೆಲೆಬ್ರಿಟಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

ಕೊರೊನಾ ವೈರಸ್ ಕಾರಣದಿಂದ ಕನ್ನಡ ಬಿಗ್​ ಬಾಸ್​ ಸೀಸನ್​ 8 ಮುಂದೂಡಲ್ಪಟ್ಟಿತ್ತು. ಈಗ ಬಿಗ್​ ಬಾಸ್​ ಆರಂಭಕ್ಕೆ  ಕೊನೆಗೂ ದಿನಾಂಕ ಫಿಕ್ಸ್​ ಆಗಿದೆ. ಈ ಬಗ್ಗೆ ಅಧಿಕೃತ ಘೋಷಣೆ ಕೂಡ ಆಗಿದೆ.

ಕೊರೊನಾ ವೈರಸ್​ ಕಾಣಿಸಿಕೊಳ್ಳದೆ ಇದ್ದಿದ್ದರೆ ಅಕ್ಟೋಬರ್​-ನವೆಂಬರ್​ ತಿಂಗಳಲ್ಲಿ ಕನ್ನಡ ಬಿಗ್​ ಆರಂಭಗೊಳ್ಳುತ್ತಿತ್ತು. ಆದರೆ, ಈಗ ಕೆಲ ತಿಂಗಳು ಬಿಟ್ಟು ಬಿಗ್​ ಬಾಸ್​ ಸೀಸನ್​ 8 ಆರಂಭಗೊಳ್ಳುತ್ತಿದೆ.

ಹೌದು, ಇದೇ ಫೆಬ್ರವರಿಯಿಂದ ಬಿಗ್​ ಬಾಸ್​ ಸೀಸನ್​ 8 ಆರಂಭಗೊಳ್ಳಲಿದೆಯಂತೆ! ಈ ಬಗ್ಗೆ ಇಂದು ಅಧಿಕೃತ ಘೋಷಣೆ ಆಗಿದೆ. ಕಲರ್ಸ್​ ಕನ್ನಡ ಹೆಡ್​ ಪರಮೇಶ್ವರ್​ ಗುಂಡ್ಕಲ್​ ಈ ಬಗ್ಗೆ ಫೇಸ್​ಬುಕ್​ನಲ್ಲಿ ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ, ಸುದೀಪ್​ ಹೊಸ ಪೋಸ್ಟ್​ ಒಂದನ್ನು ಹಾಕಿದ್ದರು. ಈ ಪೋಸ್ಟ್​ನಲ್ಲಿ ಬಿಗ್​ ಬಾಸ್​ ಸೀಸನ್​ 8 ಪ್ರೋಮೋ ಶೂಟ್​ನಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಎಂದಿದ್ದರು. ಅಂದಹಾಗೆ, ಈ ಬಾರಿ ಬಿಗ್​ ಬಾಸ್ ಸೀಸನ್​ 8ರಲ್ಲಿ ಯಾರೆಲ್ಲ ಪಾಲ್ಗೊಳ್ಳಲಿದ್ದಾರೆ ಎನ್ನುವ ಬಗ್ಗೆಯೂ ಚರ್ಚೆ ಜೋರಾಗಿದೆ.

ಅನಿಕಾ ಜೊತೆಗಿನ ಡ್ರಗ್ ಲಿಂಕ್: ಬಿಗ್​ಬಾಸ್ ಸ್ಪರ್ಧಿ ಆ್ಯಡಂ ಪಾಷಾ ಅರೆಸ್ಟ್​