ಟ್ವಿಟರ್​ ಟ್ರೆಂಡ್ ಆದ #ಕನ್ನಡಗಾದೆ: 4 ಸಾವಿರಕ್ಕೂ ಹೆಚ್ಚು ಮಂದಿಯಿಂದ ಟ್ವೀಟ್

ಕನ್ನಡ ಗಾದೆಮಾತುಗಳ ಕುರಿತು ಹೆಚ್ಚೆಚ್ಚು ಜನ ಪೋಸ್ಟ್ ಮಾಡ್ತಿದ್ದ ಹಾಗೆ #ಕನ್ನಡಗಾದೆ ಟ್ರೆಂಡ್ ಆಗಿದೆ. ಬೆಳಿಗ್ಗೆ ನಾಲ್ಕು ಸಾವಿರಕ್ಕೂ ಹೆಚ್ಚು ಜನ ಕನ್ನಡ ಗಾದೆ ಹ್ಯಾಷ್​ ಟ್ಯಾಗ್ ಬಳಸಿದ್ದರು.

ಟ್ವಿಟರ್​ ಟ್ರೆಂಡ್ ಆದ #ಕನ್ನಡಗಾದೆ: 4 ಸಾವಿರಕ್ಕೂ ಹೆಚ್ಚು ಮಂದಿಯಿಂದ ಟ್ವೀಟ್
ಸಾಂಕೇತಿಕ ಚಿತ್ರ
guruganesh bhat

|

Dec 13, 2020 | 11:32 AM

ಸಾಮಾಜಿಕ ಜಾಲತಾಣಗಳಲ್ಲಿ ಜನ ಏನೇನೆಲ್ಲಾ ಮಾತಾಡ್ತಾರೆ ಎಂಬುದರ ಮೇಲೆ ಟ್ರೆಂಡ್ ಸೆಟ್ ಆಗುತ್ತದೆ. ಇದೀಗ ಕನ್ನಡದ ಗಾದೆಗಳು ಟ್ರೆಂಡ್ ಆಗಿವೆ. ಕನ್ನಡ ಗಾದೆಮಾತುಗಳ ಕುರಿತು ಹೆಚ್ಚೆಚ್ಚು ಜನ ಪೋಸ್ಟ್ ಮಾಡ್ತಿದ್ದಂಗೆ #ಕನ್ನಡಗಾದೆ ಟ್ರೆಂಡ್ ಆಗಿದೆ. ಬೆಳಿಗ್ಗೆ ನಾಲ್ಕು ಸಾವಿರಕ್ಕೂ ಹೆಚ್ಚು ಜನ ಕನ್ನಡ ಗಾದೆ ಹ್ಯಾಷ್​ ಟ್ಯಾಗ್ ಬಳಸಿದ್ದರು. ಕನ್ನಡ ಗಾದೆಮಾತುಗಳು ಟ್ರೆಂಡ್ ಆದ ಕುರಿತು ಸಂತಸ ವ್ಯಕ್ತಪಡಿಸಿಯೂ ಹಲವರು ಟ್ವೀಟ್ ಮಾಡಿದ್ದಾರೆ.

ಕನ್ನಡದ ಗಾದೆಮಾತುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಓದುವ ಖುಷಿಯೇ ಬೇರೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಹಳೆಯ ಗಾದೆಮಾತುಗಳನ್ನು ಶೇರ್ ಮಾಡುತ್ತಾ, ತಮ್ಮ ಊರು, ಬಾಲ್ಯಗಳಲ್ಲಿ ಕೇಳಿದ ಗಾದೆಮಾತುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಲ್ಲದೇ, ಇತರ ಭಾಷಿಕರು ಕನ್ನಡ ಗಾದೆಮಾತುಗಳನ್ನು ಹಂಚಿಕೊಂಡು ಅರ್ಥ ವಿವರಿಸುವಂತೆ ಕನ್ನಡದ ನೆಟ್ಟಿಗರಲ್ಲಿ ಕೋರುತ್ತಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada