ಹೊಸ ಅಪಾರ್ಟ್​ಮೆಂಟ್ ಖರೀದಿಸಿದ ಬಾಲಿವುಡ್ ನಟಿ ಕರೀನಾ ಕಪೂರ್

ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ಫೋಟೊದಲ್ಲಿ ಕರೀನಾ ಕಪ್ಪು ಮತ್ತು ಬಳಿ ಮಿಡಿ ಉಡುಪನನ್ನು ಧರಿಸಿದ್ದು, ಮನೆಯ ಸೀಲಿಂಗ್ ನೋಡುತ್ತಿದ್ದಾರೆ. ದರ್ಶಿನಿ ವಿನ್ಯಾಸ ಮಾಡಿರುವ ಡ್ರೀಮ್ ಹೋಮ್​ ಎಂಬ ಒಕ್ಕಣೆ ಬರೆದುಕೊಂಡಿದ್ದಾರೆ.

ಹೊಸ ಅಪಾರ್ಟ್​ಮೆಂಟ್ ಖರೀದಿಸಿದ ಬಾಲಿವುಡ್ ನಟಿ ಕರೀನಾ ಕಪೂರ್
ಕರೀನಾ ಕಪೂರ್ ಖಾನ್
preethi shettigar

| Edited By: Ghanashyam D M | ಡಿ.ಎಂ.ಘನಶ್ಯಾಮ

Jan 03, 2021 | 6:34 PM

ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್ ಶನಿವಾರ ಇನ್​ಸ್ಟಾಗ್ರಾಮ್​ನಲ್ಲಿ ಮುಂಬೈನ ತಮ್ಮ ಹೊಸ ಅಪಾರ್ಟ್​ಮೆಂಟ್ ಫೋಟೊ ಪೊಸ್ಟ್ ಮಾಡಿ ಖುಷಿ ಹಂಚಿಕೊಂಡಿದ್ದು, ಇದು ನನ್ನ ಕನಸಿನ ಮನೆ ಎಂದು ಹೇಳಿಕೊಂಡಿದ್ದಾರೆ.

ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ಫೋಟೊದಲ್ಲಿ ಕರೀನಾ ಕಪ್ಪು ಮತ್ತು ಬಳಿ ಮಿಡಿ ಉಡುಪನನ್ನು ಧರಿಸಿದ್ದು, ಮನೆಯ ಸೀಲಿಂಗ್ ನೋಡುತ್ತಿದ್ದಾರೆ. ದರ್ಶಿನಿ ವಿನ್ಯಾಸ ಮಾಡಿರುವ ಡ್ರೀಮ್ ಹೋಮ್​ ಎಂದು ಬರೆದುಕೊಂಡಿದ್ದಾರೆ. ಈ ಫೋಟೊ ಕರೀನಾ ಮನೆಯ ಚಿತ್ರಣವನ್ನು ನೀಡುತ್ತಿದೆ. ಗಾಜಿನ ಬಾಗಿಲು ಮತ್ತು ಎರಡು ಬದಿಯಲ್ಲಿ ಪುಸ್ತಕಗಳ ಕಪಾಟುಗಳಿದ್ದು, ಅಲಂಕಾರಿಕ ಬೆಳಕು ಮನೆಯ ಚಾವಣಿಯಿಂದ ಬಿಳುವ ಚಿತ್ರಣವನ್ನು ಈ ಪೊಸ್ಟ್ ಮೂಲಕ ನೋಡಬಹುದಾಗಿದೆ.

ಸೈಫ್ ಅಲಿ ಖಾನ್ ಮತ್ತು ಕರೀನಾ ತಮ್ಮ ನೂತನ ಅಪಾರ್ಟ್​ಮೆಂಟ್ ಬಗ್ಗೆ ಹೆಚ್ಚು ಉತ್ಸಾಹಿಗಳಾಗಿದ್ದು, ಕೊರೊನಾ ಸಂದರ್ಭದಲ್ಲಿಯೇ ಹೊಸ ಮನೆಗೆ ಸ್ಥಳಾಂತರಗೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಸೈಫ್ ತನ್ನ ಕುಟುಂಬ ಬೆಳೆದಿರುವ ಕಾರಣಕ್ಕೆ ದೊಡ್ಡ ಅಪಾರ್ಟ್​ಮೆಂಟ್ ಅಗತ್ಯವಾಗಿತ್ತು. ನನ್ನ ಸಹೋದರಿ ಸೋಹಾ ಮತ್ತು ಅವಳ ಪತಿ ಕುನಾಲ್, ನನ್ನ ಮಕ್ಕಳಾದ ಸಾರಾ ಮತ್ತು ಇಬ್ರಾಹಿಂ ಹಾಗೂ ಇನ್ನೊಬ್ಬಳು ಸಹೋದರಿ ಸಬಾ ಕೂಡ ಆಗಾಗ ಮನೆಗೆ ಬರುವುದರಿಂದ ಇದರ ಅಗತ್ಯ ಇತ್ತು ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ. ತಾಯಿ ಶರ್ಮಿಳಾ ಟ್ಯಾಗೋರ್, ಮಾತ್ರ ದೆಹಲಿಯಲ್ಲಿದ್ದಾರೆ ಎಂದಿದ್ದಾರೆ.

ಕರೀನಾ ಗರ್ಭವತಿಯಾದ ನಂತರವೂ ಚಟುವಟಿಕೆಗಳನ್ನು ನಿಲ್ಲಿಸಿರಲಿಲ್ಲ. ಱಂಪ್ ವಾಕ್ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಇತ್ತೀಚೆಗೆ ಮಗ ತೈಮೂರ್ ಅಲಿ ಖಾನ್ ಮತ್ತು ಪತಿ ಸೈಫ್ ಅಲಿ ಖಾನ್ ಜೊತೆಗೆ 10 ದಿನಗಳ ಕಾಲ ಧರ್ಮಶಾಲೆಯಲ್ಲಿ ಕಳೆದಿದ್ದರು. ಸದ್ಯ ಇನ್ನೊಂದು ಮಗುವಿನ ನಿರೀಕ್ಷೆಯಲ್ಲಿರುವ ಕರೀನಾ ಮಗುವಿನ ಆರೈಕೆ ಮತ್ತು ಕೆಲಸ ಎರಡನ್ನು ಸರಿದೂಗಿಸಿಕೊಂಡು ಹೋಗುವುದು ತಾಯಿಯಾಗಿ ನನ್ನ ಕರ್ತವ್ಯ ಈ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ತಿಳಿಸಿದ್ದಾರೆ.

ಗರ್ಭಿಣಿಯಾದವರು ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಗರ್ಭಾವಸ್ಥೆಯಲ್ಲಿರಲಿ ಅಥವಾ ಹೆರಿಗೆಯ ನಂತರದ ದಿನಗಳಲ್ಲಿಯೇ ಆಗಲಿ, ನಾವು ಸಕ್ರಿಯರಾಗಿದ್ದರೆ ಎಲ್ಲವೂ ಸಾಧ್ಯ. ಯೋಗ ಮತ್ತು ವ್ಯಾಯಾಮದ ಜೊತೆ ಸದಾ ಗುರುತಿಸಿಕೊಳ್ಳುವುದರಿಂದ ತಾಯಿ ಮತ್ತು ಮಗು ಇಬ್ಬರೂ ಕೂಡ ಆರೋಗ್ಯವಾಗಿರುತ್ತಾರೆ. ದೇಹರಚನೆ ಮೊದಲಿನಂತೆ ಕಾಪಾಡಿಕೊಳ್ಳಲು ಸದಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅತ್ಯಗತ್ಯ ಎಂದು ಕರೀನಾ ಕಪೂರ್ ಖಾನ್ ತಿಳಿಸಿದ್ದಾರೆ.

ಟ್ರೋಲ್​ಗಳಿಗೆ ತಿರುಗೇಟು: ಉಡುಗೆ ಬಗ್ಗೆ ಕಮೆಂಟ್​ ಮಾಡಿದವರಿಗೆ ಬಿಸಿಮುಟ್ಟಿಸಿದ ನಟಿ ಅನನ್ಯಾ ಪಾಂಡೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada