ಸೋಂಕಿನ ಪಟ್ಟಿಯಲ್ಲಿ ಕರ್ನಾಟಕಕ್ಕೆ4ನೇ ಸ್ಥಾನ, 50 ಸಾವಿರದ ಸನಿಹದಲ್ಲಿ ಸೋಂಕಿತರು

  • TV9 Web Team
  • Published On - 7:55 AM, 16 Jul 2020
ಸೋಂಕಿನ ಪಟ್ಟಿಯಲ್ಲಿ ಕರ್ನಾಟಕಕ್ಕೆ4ನೇ ಸ್ಥಾನ, 50 ಸಾವಿರದ ಸನಿಹದಲ್ಲಿ ಸೋಂಕಿತರು

ಬೆಂಗಳೂರು: ಕರುನಾಡಲ್ಲಿ ಕ್ರೂರಿ ಕೊರೊನಾ ಡೆಡ್ಲಿ ಶಾಕ್ ನೀಡ್ತಿದೆ. ಕೊರೊನಾ ಕೇಸ್‌ 3 ಸಾವಿರದ ಗಡಿ ದಾಟಿದೆ. ಬೆಂಗಳೂರಲ್ಲಿ ಮಹಾಮಾರಿ ಎರಡು ಸಾವಿರದ ಗಡಿಗೆ ಬಂದು ನಿಂತಿದ್ರೆ ಕೊರೊನಾ ಸೋಂಕಿನಿಂದ ಇವತ್ತು ರಾಜ್ಯದಲ್ಲಿ 87 ಜನ ಸಾವನ್ನಪ್ಪಿದ್ದಾರೆ. ಅದ್ರಲ್ಲೂ ಸೋಂಕಿನ ಸುಳಿಗಾಳಿ 50 ಸಾವಿರದ ಸನಿಹಕ್ಕೆ ಬಂದು ನಿಂತಿರೋದು ನಿಂತ ನೆಲವೇ ಕುಸಿದಂತಾಗಿದೆ.

ಒಂದೇ ದಿನ 3,176 ಜನರಿಗೆ ಕೊರೊನಾ!
ಅಟ್ಯಾಕ್.. ಇದು ಅಂತಿಂಥ ಅಟ್ಯಾಕ್ ಅಲ್ಲ ಕರುನಾಡಿಗರು ಸುಧಾರಿಸಿಕೊಳ್ಳಲು ಆಗದ.. ಕುಂತ್ರೂ ನಿಂತ್ರೂ ದೇಹವೇ ನಡುಗುವಂಥಾ ಡೆಡ್ಲಿ ಅಟ್ಯಾಕ್. ಜಿಲ್ಲೆ ಜಿಲ್ಲೆಗಳು ಛಿದ್ರವಾಗುವಂಥಾ ರಕ್ಕಸನ ದಾಳಿ. ಸೋಂಕಿನ ಇದೊಂದೇ ಏಟಿಗೆ ರಾಜ್ಯವೇ ಗಢಗಢ ಅಂತಿದೆ. ನಿನ್ನೆ ಒಂದೇ ದಿನ ಕ್ರೂರಿ ಆಬ್ಬರಿಸಿರೋ ಹೊಡೆತಕ್ಕೆ ಕರುನಾಡೇ ಕಂಗೆಟ್ಟು ಕೂತಿದೆ.

ಯೆಸ್.. ಮೊನ್ನೆಯದ್ದೇ ಒಂದು ಲೆಕ್ಕ.. ನಿನ್ನೆಯದ್ದೇ ಒಂದು ಲೆಕ್ಕ.. ದಿನ ದಿನಕ್ಕೂ ದಾಖಲೆಯ ಮಟ್ಟದಲ್ಲಿ ಸೋಂಕಿನ ಸುಳಿಗೆ ಸಿಕ್ಕ ಸಿಕ್ಕವರು ಸಿಕ್ಕಿ ಒದ್ದಾಡ್ತಿದ್ದಾರೆ. ಹಿಂದಿನ ತನ್ನೆಲ್ಲಾ ರೆಕಾರ್ಡ್‌ಗಳನ್ನ ಪುಡಿಗಟ್ಟಿ ಹೆಜ್ಜೆ ಇಡ್ತಿರೋ ಮಾರಿ ನಿನ್ನೆ ಒಂದೇ ದಿನ ದಾಖಲೆಯ 3,176 ಜನರ ಮೇಲೆ ಅಟ್ಯಾಕ್ ಮಾಡಿದೆ.

ಆ ಮೂಲಕ ರಾಜ್ಯದಲ್ಲಿ ಕ್ರೂರಿ ಸೋಂಕಿತರ ಸಂಖ್ಯೆ ಬರೋಬ್ಬರಿ 47,253 ಕ್ಕೆ ಏರಿಕೆಯಾಗಿದೆ. ಅದ್ರಲ್ಲೂ ಎಲ್ರೂ ಬೆಚ್ಚಿ ಬೀಳಿಸೋ ಸಂಗತಿ ಅಂದ್ರೆ ಸೋಂಕಿತರ ಸಂಖ್ಯೆ 50 ಸಾವಿರದ ಸನಿಹದಲ್ಲಿದ್ರೆ, ಇವತ್ತೇನಾದ್ರೂ ಕೊರೊನಾ ವಿಸ್ಫೋಟಗೊಂಡ್ರೆ ಈ ದಾಖಲೆ ಮೀರೋದು ನಿಚ್ಚಳವಾಗಿದೆ. ಹಾಗಿದ್ರೆ ಕಳೆದ 5 ದಿನದಲ್ಲಿ ಕ್ರೂರಿ ದಾಳಿ ನೋಡಿದ್ರೆ ಎದೆ ನಡುಗಿ ಹೋಗ್ತಿದೆ.

ಸೋಂಕಿನ ಜ್ವಾಲಾಮುಖಿ!
ಇನ್ನು ಕರುನಾಡನ್ನ ತನ್ನ ಕಪಿಮುಷ್ಠಿಯಲ್ಲಿ ಇಟ್ಕೊಂಡಿರೋ ಕ್ರೂರಿ ಕಳೆದ 5 ದಿನದಲ್ಲಿ ಆರ್ಭಟಿಸಿದೆ. ಜುಲೈ 11ರಂದು 2798 ಜನರ ಮೇಲೆ ದಾಳಿ ಮಾಡಿದ್ರೆ, ಜುಲೈ 12ರಂದು 2627 ಜನರನ್ನ ತನ್ನ ತೆಕ್ಕೆಗೆ ಬಾಚಿಕೊಂಡಿದೆ. ಇನ್ನು, ಜುಲೈ 13ರಂದು 2738 ಜನರ ದೇಹ ಹೊಕ್ಕಿದ್ರೆ, ಜುಲೈ 14 ರಂದು 2496 ಜನರ ಮೇಲೆ ಅಟ್ಯಾಕ್ ಮಾಡಿದೆ. ಇಷ್ಟೇ ಅಲ್ಲ, ನಿನ್ನೆ ಒಂದೇ ದಿನ3176 ಜನರ ಮೇಲೆ ದಾಳಿ ಮಾಡಿದೆ. ಈ ಮೂಲಕ ಕಳೆದ 5 ದಿನದಲ್ಲಿ 13,835 ಜನರು ಕೊರೊನಾ ಕೂಪಕ್ಕೆ ಬಿದ್ದಿದ್ದಾರೆ.

ನಿನ್ನೆ ಒಂದೇ ದಿನ 87 ಜನರ ಪ್ರಾಣ ತೆಗೆದ ಕ್ರೂರಿ!
ಕ್ರೂರಿ ಕೊರೊನಾ ಕರುನಾಡನ್ನ ಸಾವಿನ ಮನೆ ಮಾಡ್ತಿದೆ.. ಕೊರೊನಾ ಕೊಂದು ಮುಗಿಸ್ತಿರೋ ಏಟಿಗೆ ಕರ್ನಾಟಕ ಭೂತದ ನಾಡಂತಾಗೋ ಭೀತಿ ಎದುರಾಗಿದೆ. ಸಾವಿನ ಸವಾರಿ ಮುಂದುವರಿಸಿರೋ ಹೆಮ್ಮಾರಿ ನಿನ್ನೆ ಒಂದೇ ದಿನ 87 ಜರ ಪ್ರಾಣ ತೆಗೆದಿದೆ. ಹಾಗಿದ್ರೆ, ಕಳೆದ 5 ದಿನದಲ್ಲಿ ಕ್ರೂರಿ ಉರುಳಿಗೆ ಉಸಿರು ಚೆಲ್ಲಿದವರೆಷ್ಟು ಅನ್ನೋದನ್ನೇ ನೋಡೋದಾದ್ರೆ.

ಸಾವಿನ ಸವಾರಿ!
ಇನ್ನು ಕರುನಾಡನ್ನ ತನ್ನ ತೆಕ್ಕೆಗೆ ಬಾಚಿಕೊಂಡಿರೋ ಕ್ರೂರಿ ವೈರಸ್ ಮರಣಮೃದಂಗ ಬಾರಿಸ್ತಿದೆ. ಜುಲೈ 11ರಂದು ಒಟ್ಟು 70 ಜನರನ್ನ ಕೊಂದು ಮುಗಿಸಿದ್ರೆ, ಜುಲೈ 12 ರಂದು 71 ಜನರು ಕೊರೊನಾ ದಾಳಿಗೆ ಮೃತಪಟ್ಟಿದ್ದಾರೆ. ಇನ್ನು, ಜುಲೈ 13ರಂದು ಕ್ರೂರಿ 73 ಜನರ ಮೇಲೆ ಕ್ರೂರ ದೇಹ ಹೊಕ್ಕಿದ್ರೆ, ಜುಲೈ 14ರಂದು 87 ಮಂದಿಯನ್ನ ತನ್ನ ಕೂಪಕ್ಕೆ ಕೆಡವಿಕೊಂಡಿದೆ. ಇತ್ತ ನಿನ್ನೆ ಒಂದೇ ದಿನ ಅಂದ್ರೆ ಜುಲೈ 15ರಂದು 87 ಮಂದಿ ಮೇಲೆ ಕ್ರೂರಿ ದಾಳಿ ಮಾಡಿದೆ. ರಾಜ್ಯದಲ್ಲಿ ಒಟ್ಟು 5 ದಿನದಲ್ಲಿ 388 ಮಂದಿ ಕೊರೊನಾಗೆ ಬಲಿಯಾಗಿರೋದು ಎಲ್ಲರ ಎದೆ ನಡುಗಿಸಿದೆ.

ಸೋಂಕಿನ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಕರ್ನಾಟಕ!
ಕೊರೊನಾ ಕೂಪಕ್ಕೆ ಸಿಲುಕಿ ಇಡೀ ಕರುನಾಡು ಕಂಗೆಟ್ಟು ಕೂತಿದೆ. ಈ ಹೊತ್ತಲ್ಲೇ ಮತ್ತೊಂದು ದೊಡ್ಡ ಬರಸಿಡಿಲೇ ಬಂದಪ್ಪಳಿಸಿದೆ. ಅದೇನಂದ್ರೆ, ಸೋಂಕಿನ ಸುಳಿಯಲ್ಲಿ ಸಿಲುಕಿರೋ ಕರ್ನಾಟಕ ರಾಜ್ಯವಾರು ಸೋಂಕಿನ ಪಟ್ಟಿಯಲ್ಲಿ ಗುಜರಾತ್​ನ್ನೇ ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೆ ಬಂದು ನಿಂತಿದೆ. ಮಹಾರಾಷ್ಟ್ರ, ತಮಿಳುನಾಡು ಹಾಗೂ ದೆಹಲಿ ಮೊದಲ ಮೂರು ಸ್ಥಾನದಲ್ಲಿವೆ. ಆದ್ರೆ, ಕರುನಾಡಲ್ಲಿ ಸೋಂಕಿನ ಸುನಾಮಿ ಈ ರೇಂಜಿಗೆ ಅಪ್ಪಳಿಸ್ತಿರೋದು ನಿಂತ ನೆಲವೇ ಕುಸಿದಂತಾಗಿದೆ.

ಒಟ್ನಲ್ಲಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಒಂದು ಸಾವಿರವೂ ದಾಟೋದಿಲ್ಲ ಅನ್ನೋ ಮಾತಿತ್ತು. ಆದ್ರೆ ಅದೆಲ್ಲಾ ನಿರೀಕ್ಷೆಗಳನ್ನ ಹುಸಿಗೊಳಿಸಿ ಮುನ್ನುಗ್ಗುತ್ತಿರೋ ಸೋಂಕು ಇದೀಗ 50 ಸಾವಿರದ ಸನಿಹಕ್ಕೆ ಬಂದು ನಿಂತಿದೆ. ಈ ವೇಗಕ್ಕೆ ಕಡಿವಾಣ ಬೀಳದಿದ್ರೆ, ಕೆಲವೇ ದಿನಗಳಲ್ಲಿ 1 ಲಕ್ಷ ತಲುಪಿದ್ರೂ ಅಚ್ಚರಿ ಇಲ್ಲ. ಇದೇ ರೀತಿ ಸೋಂಕಿತರ ಸಂಖ್ಯೆ ಏರ್ತಾನೆ ಇದ್ರೆ ಆ ದೇವರು ಬಂದ್ರೂ ನಮ್ಮನ್ನ ಕಾಪಾಡೋದು ಕಷ್ಟ.. ಅದೇನ್ ಕಥೆ ಆಗುತ್ತೋ ಆ ದೇವರೇ ಬಲ್ಲ.