PPE ಕಿಟ್​ನಲ್ಲಿ ಬೆಂಗಳೂರು ಕೊವಿಡ್​ ವೈದ್ಯನ ಸಖತ್​ Muqabala ಡ್ಯಾನ್ಸ್​!

  • TV9 Web Team
  • Published On - 13:50 PM, 21 Jul 2020
PPE ಕಿಟ್​ನಲ್ಲಿ ಬೆಂಗಳೂರು ಕೊವಿಡ್​ ವೈದ್ಯನ ಸಖತ್​ Muqabala ಡ್ಯಾನ್ಸ್​!

ಬೆಂಗಳೂರು: ಕೊವಿಡ್​ ವಾರ್ಡ್​ನಲ್ಲಿ ಕೆಲಸ ನಿರ್ವಹಿಸುವ ಒತ್ತಡದ ನಡುವೆ ವೈದ್ಯರೊಬ್ಬರು ಕೊಂಚ ವಿಭಿನ್ನವಾಗಿಯೇ ಬ್ರೇಕ್​ ತೆಗೆದುಕೊಂಡಿರೋ ಸ್ವಾರಸ್ಯಕರ ಪ್ರಸಂಗ ನಗರದಲ್ಲಿ ಬೆಳಕಿಗೆ ಬಂದಿದೆ.

KIMS ಆಸ್ಪತ್ರೆಯ ಅಸಿಸ್ಟೆಂಟ್ ಪ್ರೊಫೆಸರ್ ಡಾ. ರಂಗ ದೊರೈ PPE ಕಿಟ್‌ನಲ್ಲೇ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಕೆಲಸದ ನಡುವೆ ವಿರಾಮ ಪಡೆದ ವೈದ್ಯ ಖ್ಯಾತ Muqabala ಹಾಡಿಗೆ ಮಸ್ತ್ ಮಸ್ತ್​ ಡ್ಯಾನ್ಸ್ ​​ಮಾಡಿದ್ದಾರೆ.

PPE ಕಿಟ್​ನಲ್ಲಿ ಓಡಾಡೋದೇ ಕಷ್ಟ. ಅಂಥದ್ರಲ್ಲಿ ಡಾ. ರಂಗ ದೊರೈ ಡ್ಯಾನ್ಸ್​ ಮಾಡಿರೋದಕ್ಕೆ ಜನರು ವಾಹ್​ ವಾಹ್​ ಅಂತಿದ್ದಾರೆ. ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಡ್ಯಾನ್ಸ್​ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಅಗಿದೆ.