ಯಾವ ರೇಣುಕಾಚಾರ್ಯ..? ಅದೇ ಆ ನರ್ಸ್ ಕೇಸ್?.. ಅವ್ರೇನಾ..? -ಕೋಡಿಹಳ್ಳಿ ಕೌಂಟರ್

ಕೋಡಿಹಳ್ಳಿ ಒಬ್ಬ ನಾಲಾಯಕ್ ಎಂಬ ರೇಣುಕಾಚಾರ್ಯ ಹೇಳಿಕೆಗೆ ಕೋಡಿಹಳ್ಳಿ ಚಂದ್ರಶೇಖರ್ ತಿರುಗೇಟು ಕೊಟ್ಟಿದ್ದಾರೆ. ಯಾವ ರೇಣುಕಾಚಾರ್ಯ? ಅದೇ ಆ ನರ್ಸ್ ಕೇಸ್? ಅವ್ರೇನಾ? ಕಚ್ಚೆ ಸರಿಯಿಲ್ಲ ಬಾಯಿ ಸರಿಯಿಲ್ಲ ಆ ವಯ್ಯನ ಬಗ್ಗೆ ಏನು ಹೇಳೋದು? ಎಂದು ಹೇಳುವ ಮೂಲಕ ಹೊನ್ನಾಳಿ ಶಾಸಕರಿಗೆ ಮಾತಿನಲ್ಲೇ ಚಾಟಿ ಬೀಸಿದ್ದಾರೆ.

ಯಾವ ರೇಣುಕಾಚಾರ್ಯ..? ಅದೇ ಆ ನರ್ಸ್ ಕೇಸ್?.. ಅವ್ರೇನಾ..? -ಕೋಡಿಹಳ್ಳಿ ಕೌಂಟರ್
ಕೋಡಿಹಳ್ಳಿ ಚಂದ್ರಶೇಖರ್​ ಮತ್ತು ರೇಣುಕಾಚಾರ್ಯ
Skanda

| Edited By: KUSHAL V

Dec 13, 2020 | 5:13 PM

ಬೆಂಗಳೂರು: ಕೋಡಿಹಳ್ಳಿ ಒಬ್ಬ ನಾಲಾಯಕ್ ಎಂಬ ರೇಣುಕಾಚಾರ್ಯ ಹೇಳಿಕೆಗೆ ಕೋಡಿಹಳ್ಳಿ ಚಂದ್ರಶೇಖರ್ ತಿರುಗೇಟು ಕೊಟ್ಟಿದ್ದಾರೆ. ಯಾವ ರೇಣುಕಾಚಾರ್ಯ? ಅದೇ ಆ ನರ್ಸ್ ಕೇಸ್? ಅವ್ರೇನಾ? ಕಚ್ಚೆ ಸರಿಯಿಲ್ಲ ಬಾಯಿ ಸರಿಯಿಲ್ಲ ಆ ವಯ್ಯನ ಬಗ್ಗೆ ಏನು ಹೇಳೋದು? ಎಂದು ಹೇಳುವ ಮೂಲಕ ಹೊನ್ನಾಳಿ ಶಾಸಕರಿಗೆ ಮಾತಿನಲ್ಲೇ ಚಾಟಿ ಬೀಸಿದ್ದಾರೆ.

ಅವರು ಮೂರನೇ ದರ್ಜೆಯ ವ್ಯಕ್ತಿ. ಅವರ ಬಗ್ಗೆ ನಾನು ಮಾತನಾಡೋಕೆ ಹೋಗಲ್ಲ. ಅವರಿಗೆ ವೈಯಕ್ತಿಕ ಶಿಸ್ತು ಇಲ್ಲ. ಮುಖ್ಯಮಂತ್ರಿಗಳು ಸಹ ಅಂಥವರಿಂದ ಹೇಳಿಕೆ ಕೊಡಿಸುವುದು ಸರಿಯಲ್ಲ. ಯಡಿಯೂರಪ್ಪನವರಿಗೆ ಇದು ಶೋಭೆ ತರುವುದಿಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

‘ಬೇಡಿಕೆ ಈಡೇರಿಸಿದರೆ ಮಾತ್ರ ಪ್ರತಿಭಟನೆ ವಾಪಾಸ್’ ಪ್ರತಿಭಟನೆ ಕುರಿತು ಮಾತನಾಡಿರುವ ಕೋಡಿಹಳ್ಳಿ ಚಂದ್ರಶೇಖರ್, ನಮ್ಮ ಬೇಡಿಕೆಗಳ ಬಗ್ಗೆ ಮಾಹಿತಿ ಕಳುಹಿಸಿದ್ದೇವೆ. ಸರ್ಕಾರದ ಅಭಿಪ್ರಾಯ ಬಂದ ಬಳಿಕ ಚರ್ಚಿಸುತ್ತೇವೆ ಎಂದು ಹೇಳಿದ್ದಾರೆ. ನಮ್ಮ ಬೇಡಿಕೆ ಈಡೇರಿಸಿದರೆ ಮಾತ್ರ ಪ್ರತಿಭಟನೆ ವಾಪಾಸ್ ಪಡೆಯುತ್ತೇವೆ. ಇಲ್ಲದಿದ್ದರೆ ಮುಷ್ಕರ ಮುಂದುವರಿಯುತ್ತದೆ ಎಂದು ಹೇಳಿಕೆ ನೀಡಿದ್ದಾರೆ.

ನಮ್ಮ ಮೊದಲ ಬೇಡಿಕೆಯೇ ಸರ್ಕಾರಿ ಸ್ಥಾನಮಾನ ಕೊಡಬೇಕು ಎನ್ನುವುದು. ಅದನ್ನು ಈಡೇರಿಸಿದರೆ ನಮ್ಮ ಬೇಡಿಕೆ ಬಹುತೇಕ ಪೂರೈಸಿದಂತೆ. ಈ ಕೋರಿಕೆಯನ್ನು ಗಂಭೀರವಾಗಿ ಪರಿಗಣಿಸಲೇಬೇಕು. ಒಂದು ವೇಳೆ, ನಮ್ಮ ಕೂಗಿಗೆ ಕಿವಿಗೊಡದಿದ್ದರೆ, ನಮ್ಮ ಬೇಡಿಕೆ ಈಡೇರಿಸದಿದ್ದರೆ ಉಪವಾಸ ಸತ್ಯಾಗ್ರಹ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

ಕೋಡಿಹಳ್ಳಿ ಚಂದ್ರಶೇಖರ್ ಸಂಘಟಿತ ದಲ್ಲಾಳಿಗಳ ಮುಖ್ಯಸ್ಥ, ಆತ ಒಬ್ಬ ನಾಲಾಯಕ್ -ರೇಣುಕಾಚಾರ್ಯ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada