ಬೈಕ್​ಗೆ ದಾರಿ ಬಿಡಲಿಲ್ಲ ಅಂತಾ.. KSRTC ಬಸ್ ಚಾಲಕನ ಮೇಲೆ ಭೀಕರ ಹಲ್ಲೆ

ಬೈಕ್​ಗೆ ದಾರಿ ಬಿಡಲಿಲ್ಲವೆಂದು ಬಸ್ ಚಾಲಕನ ಮೇಲೆ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ರಾಮೇನಹಳ್ಳಿಯ ಬೋಳನಹಳ್ಳಿ ಗೇಟ್ ಬಳಿ ನಡೆದಿದೆ. KSRTC ಬಸ್ ಚಾಲಕ ವೆಂಕಟೇಶ್ ಮೇಲೆ ಹಲ್ಲೆ ಮಾಡಲಾಗಿದೆ.

  • TV9 Web Team
  • Published On - 23:12 PM, 21 Jan 2021
KSRTC ಬಸ್ ಚಾಲಕನ ಮೇಲೆ ಭೀಕರ ಹಲ್ಲೆ

ಮೈಸೂರು: ಬೈಕ್​ಗೆ ದಾರಿ ಬಿಡಲಿಲ್ಲವೆಂದು ಬಸ್ ಚಾಲಕನ ಮೇಲೆ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ರಾಮೇನಹಳ್ಳಿಯ ಬೋಳನಹಳ್ಳಿ ಗೇಟ್ ಬಳಿ ನಡೆದಿದೆ. KSRTC ಬಸ್ ಚಾಲಕ ವೆಂಕಟೇಶ್ ಮೇಲೆ ಹಲ್ಲೆ ಮಾಡಲಾಗಿದೆ.

ಪಿರಿಯಾಪಟ್ಟಣ ಡಿಪೋದ ಚಾಲಕರಾಗಿರುವ ವೆಂಕಟೇಶ್ ಮೇಲೆ ಚಾಕು ಮಾದರಿ ವಸ್ತುವಿನಿಂದ ಹಲ್ಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹಲ್ಲೆಯಿಂದಾಗಿ ವೆಂಕಟೇಶ್​ ತಲೆ ಮತ್ತು ಕೈಗೆ ಗಂಭೀರ ಗಾಯಗಳಾಗಿದೆ.

ಸದ್ಯ, ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್​ ಸವಾರ ಹಲ್ಲೆಮಾಡುವ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಶಿಕಲಾ ನಟರಾಜನ್​ಗೆ ಕೊರೊನಾ ಪಾಸಿಟಿವ್: ಶ್ವಾಸಕೋಶದಲ್ಲಿ ಇನ್ಫೆಕ್ಷನ್