ಲಾಲು ಪ್ರಸಾದ್ ಯಾದವ್‌ಗೆ ಅನಾರೋಗ್ಯ, ರಾಂಚಿಯ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ

ರಾಷ್ಟ್ರೀಯ ಜನತಾದಳ (RJD) ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಆರೋಗ್ಯ ಕ್ಷೀಣಿಸುತ್ತಿದೆ. ಶ್ವಾಸಕೋಶದಲ್ಲಿ ಸೋಂಕು ಇದೆ. ಚಿಕಿತ್ಸೆ ನಡೆಯುತ್ತಿದೆ. ಇದು ಒಂದು ರೀತಿಯ ನ್ಯುಮೋನಿಯಾ. ಟೆಸ್ಟ್ ರಿಪೋರ್ಟ್ಸ್ ಬಂದ ನಂತರ ಸಂಪೂರ್ಣ ಆರೋಗ್ಯ ಸ್ಥಿತಿಯ ಪೂರ್ಣ ವಿವರ ನೀಡಬಹುದು ಎಂದು ರಿಮ್ಸ್ ನಿರ್ದೇಶಕ ಡಾ.ಕಮೇಶ್ವರ ಪ್ರಸಾದ್ ತಿಳಿಸಿದ್ದಾರೆ.

  • TV9 Web Team
  • Published On - 8:27 AM, 22 Jan 2021
ಲಾಲು ಪ್ರಸಾದ್ ಯಾದವ್‌ಗೆ ಅನಾರೋಗ್ಯ, ರಾಂಚಿಯ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ
ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್‌

ರಾಂಚಿ: ರಾಷ್ಟ್ರೀಯ ಜನತಾದಳ (RJD) ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಆರೋಗ್ಯ ಕ್ಷೀಣಿಸುತ್ತಿದೆ. ಶ್ವಾಸಕೋಶದಲ್ಲಿ ಸೋಂಕು ಇದೆ. ಚಿಕಿತ್ಸೆ ನಡೆಯುತ್ತಿದೆ.

ಇದು ಒಂದು ರೀತಿಯ ನ್ಯುಮೋನಿಯಾ. ನಾವು ಏಮ್ಸ್ ವಿಭಾಗದ ಶ್ವಾಸಕೋಶ ವಿಭಾಗದ ಮುಖ್ಯಸ್ಥ (ಎಚ್ಒಡಿ) ಅವರೊಂದಿಗೆ ಸಮಾಲೋಚಿಸಿದ್ದೇವೆ. ಟೆಸ್ಟ್ ರಿಪೋರ್ಟ್ಸ್ ಬಂದ ನಂತರ ಸಂಪೂರ್ಣ ಆರೋಗ್ಯ ಸ್ಥಿತಿಯ ಪೂರ್ಣ ವಿವರ ನೀಡಬಹುದು ಎಂದು ರಿಮ್ಸ್ ನಿರ್ದೇಶಕ ಡಾ.ಕಮೇಶ್ವರ ಪ್ರಸಾದ್ ತಿಳಿಸಿದ್ದಾರೆ.

ಇನ್ನು ಲಾಲು ಪ್ರಸಾದ್ ಯಾದವ್ ಅವರ ಕೊರೊನಾ ಟೆಸ್ಟ್​ ರಿಪೋರ್ಟ್ ನೆಗೆಟಿವ್ ಬಂದಿದೆ. ಬಹು ಕೋಟಿ ರೂಪಾಯಿ ಹಗರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸುತ್ತಿರುವ ಲಾಲು ಪ್ರಸಾದ್ ಪ್ರಸ್ತುತ ರಾಂಚಿಯ ರಾಜೇಂದ್ರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ರಿಮ್ಸ್) ನಲ್ಲಿ ತಂಗಿದ್ದಾರೆ.

ಲಾಲುಗೆ ಈ ವರ್ಷವೂ ಜೈಲೇ ಗತಿ; ಜಾಮೀನು ಪಡೆಯಲು ಇನ್ನೂ 8 ತಿಂಗಳು ಜೈಲಲ್ಲೇ ಕಳೆಯಬೇಕು!