’ನನ್ನ ತಂದೆಯ ವಿರುದ್ಧ ಖಂಡಿತ ಕಾನೂನು ಕ್ರಮ ಕೈಗೊಳ್ಳಲಾಗುವುದು‘-ಬ್ರಾಹ್ಮಣ ಸಮುದಾಯಕ್ಕೆ ಭರವಸೆ ನೀಡಿದ ಚತ್ತೀಸ್​ಗಡ​ ಸಿಎಂ

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಭೂಪೇಶ್​ ಬಾಘೇಲ್​, ವಿವಿಧ ಸಮುದಾಯಗಳ ನಡುವಿನ ಸಾಮರಸ್ಯ ಕಾಪಾಡುವ ಹೊಣೆ ನನ್ನ ಮೇಲಿದೆ.

’ನನ್ನ ತಂದೆಯ ವಿರುದ್ಧ ಖಂಡಿತ ಕಾನೂನು ಕ್ರಮ ಕೈಗೊಳ್ಳಲಾಗುವುದು‘-ಬ್ರಾಹ್ಮಣ ಸಮುದಾಯಕ್ಕೆ ಭರವಸೆ ನೀಡಿದ ಚತ್ತೀಸ್​ಗಡ​ ಸಿಎಂ
ಸಿಎಂ ಭೂಪೇಶ್ ಬಾಘೇಲ್​

ರಾಯಪುರ: ಬ್ರಾಹ್ಮಣರ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ ನನ್ನ ತಂದೆ ನಂದಕುಮಾರ್ ಬಾಘೇಲ್​ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಚತ್ತೀಸ್​ಗಡ್​ ಮುಖ್ಯಮಂತ್ರಿ ಭೂಪೇಶ್​ ಬಾಘೇಲ್ (Chhattisgarh CM Bhupesh Baghel)​ ತಿಳಿಸಿದ್ದಾರೆ. ಸಿಎಂ ಭೂಪೇಶ್​ ತಂದೆ ನಂದಕುಮಾರ್ ವಿರುದ್ಧ ಸರ್ವ ಬ್ರಾಹ್ಮಿಣ್​ ಸಮಾಜ ದೂರು ದಾಖಲು ಮಾಡಿದ್ದು, ಕ್ರಮಕ್ಕೆ ಆಗ್ರಹಿಸಿದೆ.

ಇತ್ತೀಚೆಗೆ ನಂದಕುಮಾರ್ ಬಾಘೇಲ್​ ಉತ್ತರಪ್ರದೇಶದಲ್ಲಿ ಸಮಾರಂಭವೊಂದರಲ್ಲಿ ಮಾತನಾಡುವಾಗ ಬ್ರಾಹ್ಮಣರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದರು. ಬ್ರಾಹ್ಮಣರು ವಿದೇಶಿಗರು..ಅವರನ್ನು ಭಾರತದಿಂದ ಹೊರಗೆ ಕಳಿಸಬೇಕು. ಈಗಿರುವ ಬ್ರಾಹ್ಮಣರು ನಿಮ್ಮ ಹಳ್ಳಿಗಳನ್ನು ಪ್ರವೇಶಿಸಲು ಅವಕಾಶ ಕೊಡಬೇಡಿ. ಅವರನ್ನು ಬಹಿಷ್ಕರಿಸಿ ಎಂದು ಜನರಿಗೆ ಕರೆ ಕೊಟ್ಟಿದ್ದರು ಎಂದು ಅವರ ವಿರುದ್ಧ ದಾಖಲಾದ ದೂರಿನಲ್ಲಿ ಉಲ್ಲೇಖವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ದೂರುದಾರ, ದೀನ ದಯಾಳ್​ ವಿಪ್ರ ಸಮಾಜದ ಸದಸ್ಯ ನವೀನ್​ ಶರ್ಮಾ, ನಂದಕುಮಾರ್ ಬಾಘೇಲ್​ ಬ್ರಾಹ್ಮಣರ ವಿರುದ್ಧ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಅವರು ಬ್ರಾಹ್ಮಣರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಲ್ಲದೆ, ಸಮಾಜವನ್ನು ಒಡೆಯಲು ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾನೂನು ಕ್ರಮ
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಭೂಪೇಶ್​ ಬಾಘೇಲ್​, ವಿವಿಧ ಸಮುದಾಯಗಳ ನಡುವಿನ ಸಾಮರಸ್ಯ ಕಾಪಾಡುವ ಹೊಣೆ ನನ್ನ ಮೇಲಿದೆ. ನನ್ನ ತಂದೆ ಯಾವುದೇ ಸಮಾಜದ ವಿರುದ್ಧ ಹೀಗೆ ಅವಹೇಳನ ಮಾಡಿದ್ದೇ ಹೌದಾದರೆ ನಿಜಕ್ಕೂ ನಾನು ಕ್ಷಮೆ ಕೇಳುತ್ತೇನೆ. ಅವರ ವಿರುದ್ಧ ಖಂಡಿತ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಇದನ್ನೂ ಓದಿ: ‘ಉತ್ತರ ಪ್ರದೇಶದ ಆಸ್ಪತ್ರೆಗಳಲ್ಲಿದ್ದಾರೆ ವೈರಲ್ ಜ್ವರ, ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿರುವ 171 ಮಕ್ಕಳು’

ಬಾಗಲಕೋಟೆಯಲ್ಲಿ ಎಗ್​ರೈಸ್​ ತಿಂದು ಹಣ ಕೊಡಲಿಲ್ಲವೆಂದು ಯುವಕನಿಗೆ ಥಳಿತ; ಅಂಗಡಿ ಮಾಲೀಕ ಪೊಲೀಸರ ವಶಕ್ಕೆ

Click on your DTH Provider to Add TV9 Kannada