ಹುಬ್ಬಳ್ಳಿ: ಹಾಡಹಗಲೇ ಯುವತಿ ಮೇಲೆ ಪಾಗಲ್ ಪ್ರೇಮಿಯೊಬ್ಬ ತಲ್ವಾರ್ನಿಂದ ಮಾರಕವಾಗಿ ದಾಳಿ ಮಾಡಿರುವ ಘಟನೆ ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ನಡೆದಿದೆ.
ದಾಳಿಗೊಳಗಾದ ಯುವತಿ ಧಾರವಾಡ ತಾಲೂಕಿನ ಮೊರಬ ಗ್ರಾಮದ ನಿವಾಸಿಯಾಗಿದ್ದು, ನಡು ರಸ್ತೆಯಲ್ಲಿ ತಲ್ವಾರ್ನಿಂದ ಪಾಗಲ್ ಪ್ರೇಮಿ ದಾಳಿ ಮಾಡಿದ್ದಾನೆ. ಯುವತಿಯನ್ನು ತಲ್ವಾರ್ನಿಂದ ಮನಬಂದಂತೆ ಥಳಿಸಿರುವ ರಣಭೀಕರ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಈ ಯುವಕ ಕುಂದಗೋಳ ತಾಲೂಕಿನ ರಾಮನು ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ.
ಯುವತಿ ಕಿರುಚಾಡಿದ್ದರಿಂದ ಕಿರಾತಕ ಯುವತಿಯನ್ನು ಅಲ್ಲಿಯೆ ಬಿಟ್ಟು ಪರಾರಿಯಾಗಿದ್ದ. ಗಂಭೀರವಾಗಿ ಗಾಯಗೊಂಡಿರುವ ಯುವತಿಯನ್ನ ಸಾರ್ವಜನಿಕರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ವಿಷಯ ತಿಳಿದಕೊಡಲೇ ಸ್ಥಳಕ್ಕೆ ಉಪನಗರ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಸ್ಥಳದಿಂದ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪ್ರೀತ್ಸೆ ಎಂದು ಹಿಂದೆ ಬಿದ್ದಿದ್ದ ಹಲ್ಲೆಗೊಳಗಾದ ಯುವತಿ ಜುವೆಲೆಸ್೯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಈ ಹಿಂದೆ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ನಂತರ ಲವ್ ಬ್ರೇಕಪ್ ಆಗಿತ್ತು. ಹೀಗಾಗಿ ತನ್ನನ್ನುಮತ್ತೆ ಪ್ರೀತಿಸುವಂತೆ ಕಳೆದ ಹಲವು ದಿನಗಳಿಂದ ಯುವಕ ಆಕೆಯ ಬೆನ್ನು ಬಿದ್ದಿದ್ದ. ಯುವಕನ ಈ ಮನವಿಯನ್ನು ಯುವತಿ ತಿರಸ್ಕರಿಸಿದ್ದಳು. ಇದರಿಂದ ಕೋಪಗೊಂಡ ಯುವಕ ಇಂದು ಯುವತಿ ಕೆಲಸಕ್ಕೆ ಹೋಗುವಾಗ ದಾಳಿ ಮಾಡಿದ್ದಾನೆ ಎಂದು ಟಿವಿ9ಗೆ ಪೊಲೀಸ್ ಇಲಾಖೆಯಿಂದ ಮಾಹಿತಿ ದೊರೆತಿದೆ.