ಕದ್ದ ಮಾಲನ್ನು ಕಳ್ಳ ಅಡವಿಟ್ಟಿದ್ದ ಹಿನ್ನೆಲೆ: ಅಟ್ಟಿಕಾ ಬಾಬು ಪೊಲೀಸ್ ವಶ, ಬಿಡುಗಡೆ

ಕದ್ದ ಮಾಲನ್ನು ಕಳ್ಳ ಅಡವಿಟ್ಟಿದ್ದ ಹಿನ್ನೆಲೆ: ಅಟ್ಟಿಕಾ ಬಾಬು ಪೊಲೀಸ್ ವಶ, ಬಿಡುಗಡೆ

ನೆಲಮಂಗಲ: ಕದ್ದ ಮಾಲನ್ನು ಅಟ್ಟಿಕಾ ಗೋಲ್ಡ್‌ನಲ್ಲಿ ಅಡವಿಟ್ಟು ಅಟ್ಟಿಕಾ ಬಾಬು ಪೊಲೀಸರ ಅತಿಥಿಯಾಗಿದ್ದಾನೆ. ಬಾಬುನನ್ನು ಬಂಧಿಸಿ ಮಾದನಾಯಕನಹಳ್ಳಿ ಪೊಲೀಸರು 10 ತಿಂಗಳ ಹಿಂದಿನ ಪ್ರಕರಣಕ್ಕೆ ಮುಕ್ತಿ ಹಾಡಿದ್ದಾರೆ.

ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಿದರಕಲ್ಲು ಬಳಿ 10 ತಿಂಗಳ ಹಿಂದೆ ಚೇತನ್ ಎಂಬುವವರ ಮನೆಯಲ್ಲಿ 1 ಕೆ.ಜಿ.ಗೂ ಹೆಚ್ಚು ಚಿನ್ನ ಕಳವಾಗಿತ್ತು. ಕದ್ದ ಮಾಲನ್ನು ಕಳ್ಳ ಮಂಜ ಅಟ್ಟಿಕಾ ಗೋಲ್ಡ್‌ನಲ್ಲಿ ಅಡವಿಟ್ಟಿದ್ದ. ನಂತರ ಪೊಲೀಸರು ಮಂಜನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.

ಈ ಹಿನ್ನೆಲೆಯಲ್ಲಿ ಅಟ್ಟಿಕಾ ಬಾಬುನನ್ನು ಮಾದನಾಯಕನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿದರು. ಬಳಿಕ, ಮಾದನಾಯಕನಹಳ್ಳಿ ಪೊಲೀಸ್ ಇನ್ಸ್​ಪೆಕ್ಟರ್​ K S ಸತ್ಯನಾರಾಯಣ್ ಅವರು ಖಡಕ್ ವಾರ್ನಿಂಗ್ ಕೊಟ್ಟು ಬಾಬುನನ್ನು ಬಿಟ್ಟು ಕಳಿಸಿದ್ದಾರೆ.

Click on your DTH Provider to Add TV9 Kannada