RBI Recruitment 2021: ಭಾರತೀಯ ರಿಸರ್ವ್​ ಬ್ಯಾಂಕ್​​ ನೀಡುತ್ತಿದೆ ಸುವರ್ಣಾವಕಾಶ; 29 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..

ಒಟ್ಟು ನಾಲ್ಕು ಹುದ್ದೆಗಳಿಂದ 29 ವೆಕೆನ್ಸಿಗಳಿವೆ. ವ್ಯವಸ್ಥಾಪಕ ನಿರ್ದೇಶಕ (ಅಧಿಕೃತ ಭಾಷೆ) ಹುದ್ದೆಯಲ್ಲಿ 12, ವ್ಯವಸ್ಥಾಪಕ ನಿರ್ದೇಶಕ (ಶಿಷ್ಟಾಚಾರ ಮತ್ತು ಭದ್ರತೆ) ಸ್ಥಾನದಲ್ಲಿ 5, ಲೀಗಲ್​ ಆಫೀಸರ್​(ಗ್ರೇಡ್​ ಬಿ) ಹುದ್ದೆಯಲ್ಲಿ 11 ಮತ್ತು ಮ್ಯಾನೇಜರ್​(ಟೆಕ್​-ಸಿವಿಲ್​)ಹುದ್ದೆಯಲ್ಲಿ ಒಬ್ಬರಿಗೆ ಅವಕಾಶ ಇದೆ.

  • TV9 Web Team
  • Published On - 16:31 PM, 9 Mar 2021
RBI Recruitment 2021: ಭಾರತೀಯ ರಿಸರ್ವ್​ ಬ್ಯಾಂಕ್​​ ನೀಡುತ್ತಿದೆ ಸುವರ್ಣಾವಕಾಶ; 29 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಆರ್​ಬಿಐ

ಭಾರತೀಯ ರಿಸರ್ವ್​ ಬ್ಯಾಂಕ್​ (RBI)ನಲ್ಲಿ ಉದ್ಯೋಗ ಮಾಡಲು ಬಯಸುತ್ತಿರುವವರಿಗೆ ಒಂದು ಸುವರ್ಣಾವಕಾಶ ಸಿಕ್ಕಿದೆ. ಗ್ರೇಡ್​ ಬಿ ಮ್ಯಾನೇಜರ್​ ಹುದ್ದೆ (ಟೆಕ್​-ಸಿವಿಲ್​), ವ್ಯವಸ್ಥಾಪ ನಿರ್ದೇಶಕ(ಅಧಿಕೃತ ಭಾಷೆ) ಮತ್ತು ವ್ಯವಸ್ಥಾಪಕ ನಿರ್ದೇಶಕ (ಶಿಷ್ಟಾಚಾರ) ಮತ್ತು ಲೀಗಲ್​ ಆಫೀಸರ್​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಮತ್ತು ಸಾಮರ್ಥ್ಯವುಳ್ಳ ಅಭ್ಯರ್ಥಿಗಳು ಆರ್​ಬಿಐನ ಅಧಿಕೃತ ವೆಬ್​ಸೈಟ್​ rbi.org.inಗೆ ಹೋಗಿ ಅರ್ಜಿ ಸಲ್ಲಿಸಬಹುದು. ನಿಮಗೂ ಆಸಕ್ತಿ ಇದ್ದರೆ ತಡ ಮಾಡಬೇಡಿ. ಯಾಕೆಂದರೆ ಅರ್ಜಿ ಸಲ್ಲಿಸಲು ನಾಳೆ (ಮಾರ್ಚ್​ 10)ಯೇ ಕೊನೇದಿನ.

ಒಟ್ಟು 29 ಖಾಲಿ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, https://ibpsonline.ibps.in/rbisbvpfeb21/ ಈ ಲಿಂಕ್​ ಕ್ಲಿಕ್ ಮಾಡಿಕೂಡ ಅರ್ಜಿ ಸಲ್ಲಿಸಬಹುದು. ಫೆ.23ರಿಂದಲೇ ಅರ್ಜಿ ಸಲ್ಲಿಕೆ ಶುರುವಾಗಿದ್ದು, ಮಾರ್ಚ್​ 10 ಕೊನೇ ದಿನವಾಗಿದೆ. ಹಾಗೇ ಏಪ್ರಿಲ್​ 10ರಂದು ಪರೀಕ್ಷೆ ನಡೆಯಲಿದೆ.

ಯಾವ ಹುದ್ದೆಯಲ್ಲಿ ಎಷ್ಟು ವೆಕೆನ್ಸಿ ಇದೆ?
ಒಟ್ಟು ನಾಲ್ಕು ಹುದ್ದೆಗಳಿಂದ 29 ವೆಕೆನ್ಸಿಗಳಿವೆ. ವ್ಯವಸ್ಥಾಪಕ ನಿರ್ದೇಶಕ (ಅಧಿಕೃತ ಭಾಷೆ) ಹುದ್ದೆಯಲ್ಲಿ 12, ವ್ಯವಸ್ಥಾಪಕ ನಿರ್ದೇಶಕ (ಶಿಷ್ಟಾಚಾರ ಮತ್ತು ಭದ್ರತೆ) ಸ್ಥಾನದಲ್ಲಿ 5, ಲೀಗಲ್​ ಆಫೀಸರ್​(ಗ್ರೇಡ್​ ಬಿ) ಹುದ್ದೆಯಲ್ಲಿ 11 ಮತ್ತು ಮ್ಯಾನೇಜರ್​(ಟೆಕ್​-ಸಿವಿಲ್​)ಹುದ್ದೆಯಲ್ಲಿ ಒಬ್ಬರಿಗೆ ಅವಕಾಶ ಇದೆ. ಹಾಗೇ, ವ್ಯವಸ್ಥಾಪಕ ನಿರ್ದೇಶಕ (ಅಧಿಕೃತ ಭಾಷೆ) ಮತ್ತು ವ್ಯವಸ್ಥಾಪಕ ನಿರ್ದೇಶಕ (ಶಿಷ್ಟಾಚಾರ ಮತ್ತು ಭದ್ರತೆ) ಹುದ್ದೆಗಳಿಗೆ ತಿಂಗಳಿಗೆ 63172 ರೂ., ಲೀಗಲ್​ ಆಫೀಸರ್​(ಗ್ರೇಡ್-ಬಿ) ಮತ್ತು ಮ್ಯಾನೇಜರ್​ (ಟೆಕ್​-ಸಿವಿಲ್​) ಹುದ್ದೆಗಳಿಗೆ ತಿಂಗಳಿಗೆ 77208 ರೂ. ವೇತನ ನಿಗದಿಪಡಿಸಲಾಗಿದೆ.

ಅರ್ಹತೆ ಏನಿರಬೇಕು?
ಇನ್ನು ಆರ್​ಬಿಐನ ಖಾಲಿ ಹುದ್ದೆಗಳಿಗೆ ಯಾರು ಅರ್ಜಿ ಹಾಕಬಹುದು ಎಂಬುದರ ಬಗ್ಗೆ ವಿವರ ಇಲ್ಲಿದೆ. ವ್ಯವಸ್ಥಾಪಕ ನಿರ್ದೇಶಕ (ಅಧಿಕೃತ ಭಾಷೆ) ಹುದ್ದೆಗೆ ಅರ್ಜಿ ಸಲ್ಲಿಸುವವರು ಸ್ನಾತಕೋತ್ತರ ಪದವಿಯ್ನು ಎರಡನೇ ದರ್ಜೆಯಲ್ಲಾದರೂ ಪಾಸಾಗಿರಬೇಕು. ಹಿಂದಿ ಸರಿಯಾಗಿ ಗೊತ್ತಿರಬೇಕು. ಹಾಗೇ 2ವರ್ಷ ಅನುಭವ ಇರಬೇಕು.

ಲೀಗಲ್ ಆಫೀಸರ್​ (ಗ್ರೇಡ್​ ಬಿ)- ಯುಜಿಸಿ ಮತ್ತು ಬಾರ್​ ಕೌನ್ಸಿಲ್​ನಡಿ ಬರುವ ಯಾವುದೇ ವಿಶ್ವವಿದ್ಯಾಲಯ ಅಥವಾ ಕಾಲೇಜಿನಲ್ಲಿ ಎಲ್​ಎಲ್​ಬಿ (ಕಾನೂನು ಪದವಿಯಲ್ಲಿ ಬ್ಯಾಚುಲರ್​) ಓದಿರಬೇಕು. ಹಾಗೇ ಎಲ್ಲ ಸೆಮಿಷ್ಟರ್​/ವಾರ್ಷಿಕ ಪರೀಕ್ಷೆಗಳ ಒಟ್ಟು ಅಂಕ ಶೇ.50ರಷ್ಟಾದರೂ ಇರಬೇಕು. ಹಾಗೇ 2 ವರ್ಷ ಅನುಭವ ಇರಬೇಕು.

ಮ್ಯಾನೇಜರ್​(ಟೆಕ್ನಿಕಲ್ ಸಿವಿಲ್​)- ಸಿವಿಲ್ ಇಂಜಿನಿಯರಿಂಗ್​ನಲ್ಲಿ ಬ್ಯಾಚುಲರ್ ಪದವಿ ಪಡೆದಿರಬೇಕು. ಎಲ್ಲ ಸೆಮಿಷ್ಟರ್​/ವಾರ್ಷಿಕ ಪರೀಕ್ಷೆಗಳ ಒಟ್ಟು ಅಂಕ ಕನಿಷ್ಠ ಶೇ.60 ಇರಬೇಕು. ಮೂರು ವರ್ಷಗಳ ಅನುಭವ ಕಡ್ಡಾಯ.

ವ್ಯವಸ್ಥಾಪಕ ನಿರ್ದೇಶಕ (ಶಿಷ್ಟಾಚಾರ ಮತ್ತು ಭದ್ರತೆ): ಯಾವುದೇ ಸಶಸ್ತ್ರಪಡೆಯಲ್ಲಿ ಅಧಿಕಾರಿ ಶ್ರೇಣಿಯಲ್ಲಿ 5ವರ್ಷ ಕೆಲಸ ಮಾಡಿ ಅನುಭವ ಇರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: RBI new rules: ಆನ್​ಲೈನ್ ವಹಿವಾಟಿಗೆ ಆರ್​ಬಿಐ ಹೊಸ ನಿಯಮ; ಇಲ್ಲಿದೆ ನೀವು ತಿಳಿಯಬೇಕಾದ ಸಂಗತಿಗಳು