‘ಯತ್ನಾಳ್​ ಸುಮ್ಮನೆ ಬುರುಡೆ ಬಿಡ್ತಾರೆ.. ಅವರ ಮಾತು ತೋಳ ಬಂತು ತೊಳ, ನಾಳೆ ಬಾ ಅಂತಾರಲ್ಲ ಹಾಗೆ ಆಗಿದೆ’

ಬಿಜೆಪಿ ಶಾಸಕ ಯತ್ನಾಳ್​ ಮಾತಿಗೆ ಬೆಲೆ ಕೊಡುವ ಅಗತ್ಯವಿಲ್ಲ. ಅವರ ಮಾತು ತೋಳ ಬಂತು ತೊಳ ಮತ್ತು ನಾಳೆ ಬಾ ಅಂತಾರಲ್ಲ ಹಾಗೆ ಆಗಿದೆ ಎಂದು ಜಿಲ್ಲೆಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಲೇವಡಿ ಮಾಡಿದ್ದಾರೆ.

‘ಯತ್ನಾಳ್​ ಸುಮ್ಮನೆ ಬುರುಡೆ ಬಿಡ್ತಾರೆ.. ಅವರ ಮಾತು ತೋಳ ಬಂತು ತೊಳ, ನಾಳೆ ಬಾ ಅಂತಾರಲ್ಲ ಹಾಗೆ ಆಗಿದೆ’
ಬಸನಗೌಡ ಪಾಟೀಲ್ ಯತ್ನಾಳ್ (ಸಂಗ್ರಹ ಚಿತ್ರ)
KUSHAL V

|

Jan 31, 2021 | 7:25 PM

ದಾವಣಗೆರೆ: ಬಿಜೆಪಿ ಶಾಸಕ ಯತ್ನಾಳ್​ ಮಾತಿಗೆ ಬೆಲೆ ಕೊಡುವ ಅಗತ್ಯವಿಲ್ಲ. ಅವರ ಮಾತು ತೋಳ ಬಂತು ತೊಳ ಮತ್ತು ನಾಳೆ ಬಾ ಅಂತಾರಲ್ಲ ಹಾಗೆ ಆಗಿದೆ ಎಂದು ಜಿಲ್ಲೆಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಲೇವಡಿ ಮಾಡಿದ್ದಾರೆ.

ಬಸನಗೌಡ ಪಾಟೀಲ್​ ಯತ್ನಾಳ್​ ಸುಮ್ಮನೆ ಬುರುಡೆ ಬಿಡ್ತಾರೆ. ಯಡಿಯೂರಪ್ಪ ಎರಡೂವರೆ ವರ್ಷ ಸಿಎಂ ಆಗಿರುತ್ತಾರೆ. ಬಿಎಸ್​ವೈ ಸಿಎಂ ಆಗಿರ್ತಾರೆಂದು ಅಮಿತ್ ಶಾ ಹೇಳಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್​ ಸುಮ್ಮನೆ ಹೇಳುತ್ತಿರುತ್ತಾರೆ ಎಂದು ಪಾಟೀಲ್​ ಹೇಳಿದರು.

ರಾಜ್ಯ ಬಿಜೆಪಿಯಲ್ಲಿ ಅಂತಹ ಯಾವುದೇ ಬೆಳವಣಿಗೆ ಆಗಿಲ್ಲ. ತೋಳ ಬಂತು ತೋಳ ಅಂತಾರಲ್ಲ ಹಾಗಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ವ್ಯಂಗ್ಯವಾಡಿದರು.

ಕೇಂದ್ರ ಸರ್ಕಾರ ಒಳ್ಳೆಯ ಬಜೆಟ್ ನೀಡುವ ನಿರೀಕ್ಷೆಯಿದೆ. ಡಬಲ್​ ಇಂಜಿನ್ ಸರ್ಕಾರವೆಂದು ಅಮಿತ್ ಶಾ ಹೇಳಿದ್ದಾರೆ. ಕೃಷಿ ಕ್ಷೇತ್ರಕ್ಕೆ ಒತ್ತು ನೀಡುವ ಸಾಧ್ಯತೆಯಿದೆ ಎಂದು ಬಿ.ಸಿ.ಪಾಟೀಲ್​ ಹೇಳಿದರು. ಕೃಷಿ ಕ್ಷೇತ್ರದ ಬೇಡಿಕೆ ಬಗ್ಗೆ ಈಗಾಗಲೇ ವರದಿ ಸಲ್ಲಿಸಿದ್ದೇವೆ. ಈ ಬಾರಿ ರಾಜ್ಯದಲ್ಲಿ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಲ್ಲ ಎಂದು ಹೇಳಿದರು.

‘JDSಗೂ ಒಮ್ಮೆ ಆಶೀರ್ವಾದ ಮಾಡಿ; ನಾನು ಯಶಸ್ವಿಯಾಗದಿದ್ರೆ ಪಕ್ಷ ಡಿಸಾಲ್ವ್ ಮಾಡಿ ಮತ್ತೆ ನಿಮಗ್ಯಾರಿಗೂ ಮುಖ ತೋರಿಸಲ್ಲ’

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada