ಮೊದಲೇ ಈ ಕೆಲಸ ಮಾಡಿದ್ರೆ ಕೊರೊನಾ ಹರಡ್ತಿರಲಿಲ್ಲ -ಮಾಧುಸ್ವಾಮಿ ಹೀಗ್ಯಾಕೆ ಅಂದ್ರು?

ಮೊದಲೇ ಈ ಕೆಲಸ ಮಾಡಿದ್ರೆ ಕೊರೊನಾ ಹರಡ್ತಿರಲಿಲ್ಲ -ಮಾಧುಸ್ವಾಮಿ ಹೀಗ್ಯಾಕೆ ಅಂದ್ರು?

ತುಮಕೂರು: ಹೊರಗಿನಿಂದ ಊರಿಗೆ ಬಂದವರನ್ನು ಹೊರಗಡೆಯೇ ಇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಖಡಕ್​ ಸೂಚನೆ ನೀಡಿದ್ದಾರೆ. ಅಂಥವರಿಗೆ ನಾವು ಕೊವಿಡ್ ಟೆಸ್ಟ್ ಮಾಡುತ್ತೇವೆ. ಒಂದು ವೇಳೆ ಕೊವಿಡ್ ಟೆಸ್ಟ್ ನೆಗೆಟಿವ್ ಬಂದರೆ ಮಾತ್ರ ಗ್ರಾಮಕ್ಕೆ ಸೇರಿಸಿಕೊಳ್ಳಿ. ಪಾಸಿಟಿವ್ ಬಂದರೆ ನಾವು ಆಸ್ಪತ್ರೆಗೆ ದಾಖಲಿಸುತ್ತೇವೆ ಎಂಬ ಆಶ್ವಾಸನೆ ನೀಡಿದ್ದಾರೆ. ಜೊತೆಗೆ, ನಾವು ಮೊದಲೇ ಈ ಕೆಲಸ ಮಾಡಿದ್ರೆ ಜಿಲ್ಲೆಯಲ್ಲಿ ಕೊರೊನಾ ಹರಡುತ್ತಿರಲಿಲ್ಲ ಎಂದಿದ್ದಾರೆ. ಮಾಹಿತಿ ನೀಡದವರ ವಿರುದ್ಧ ಶಿಸ್ತಿನ ಕ್ರಮ ಜಿಲ್ಲೆಯ ಎಸ್ಪಿ ಕಚೇರಿಯಲ್ಕಿ PPE […]

KUSHAL V

| Edited By: sadhu srinath

Jul 21, 2020 | 12:38 PM

ತುಮಕೂರು: ಹೊರಗಿನಿಂದ ಊರಿಗೆ ಬಂದವರನ್ನು ಹೊರಗಡೆಯೇ ಇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಖಡಕ್​ ಸೂಚನೆ ನೀಡಿದ್ದಾರೆ. ಅಂಥವರಿಗೆ ನಾವು ಕೊವಿಡ್ ಟೆಸ್ಟ್ ಮಾಡುತ್ತೇವೆ. ಒಂದು ವೇಳೆ ಕೊವಿಡ್ ಟೆಸ್ಟ್ ನೆಗೆಟಿವ್ ಬಂದರೆ ಮಾತ್ರ ಗ್ರಾಮಕ್ಕೆ ಸೇರಿಸಿಕೊಳ್ಳಿ. ಪಾಸಿಟಿವ್ ಬಂದರೆ ನಾವು ಆಸ್ಪತ್ರೆಗೆ ದಾಖಲಿಸುತ್ತೇವೆ ಎಂಬ ಆಶ್ವಾಸನೆ ನೀಡಿದ್ದಾರೆ. ಜೊತೆಗೆ, ನಾವು ಮೊದಲೇ ಈ ಕೆಲಸ ಮಾಡಿದ್ರೆ ಜಿಲ್ಲೆಯಲ್ಲಿ ಕೊರೊನಾ ಹರಡುತ್ತಿರಲಿಲ್ಲ ಎಂದಿದ್ದಾರೆ.

ಮಾಹಿತಿ ನೀಡದವರ ವಿರುದ್ಧ ಶಿಸ್ತಿನ ಕ್ರಮ ಜಿಲ್ಲೆಯ ಎಸ್ಪಿ ಕಚೇರಿಯಲ್ಕಿ PPE ಕಿಟ್ ವಿತರಿಸುವ ವೇಳೆ ಮಾತನಾಡಿರುವ ಸಚಿವ ಮಾಧುಸ್ವಾಮಿ ಬೆಂಗಳೂರಿನಿಂದ ‌ಬಂದವರನ್ನ ಹಳ್ಳಿಗಳಿಗೆ ಬಿಟ್ಟುಕೊಳ್ಳದಿದ್ದರೆ ಇವತ್ತು ಇಷ್ಟೊಂದು ಕೇಸ್​ಗಳು ಇರುತ್ತಿರಲಿಲ್ಲ. ಹೀಗಾಗಿ, ಬೆಂಗಳೂರಿನಿಂದ‌ ಬಂದವರನ್ನು ಹಳ್ಳಿಗೆ ಸೇರಿಸಿಕೊಳ್ಳಬೇಡಿ. ಜೊತೆಗೆ, ಬೆಂಗಳೂರಿನಿಂದ ಬಂದವರ ಬಗ್ಗೆ ನಮಗೆ ಮಾಹಿತಿ ನೀಡದಿದ್ದರೆ ಅಂಥವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಇದಲ್ಲದೆ, ಕಂಟೇನ್​ಮೆಂಟ್​ ಜೋನ್​ಗಳನ್ನು ತುಂಬಾ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇವೆ. ಹಾಗೆಯೇ, ಈ ಬಗ್ಗೆ ಸ್ಥಳೀಯರಿಗೆ ಸರಿಯಾದ ರೀತಿಯಲ್ಲಿ ಮಾಹಿತಿ ನೀಡಿದ ನಂತರವೇ ಬಡಾವಣೆಯನ್ನ ಸೀಲ್​ಡೌನ್ ಮಾಡ್ತೀವಿ ಅಂತಾ ಸಹ ಹೇಳಿದ್ದಾರೆ. ಕಂಟೇನ್​ಮೆಂಟ್​ ಜೋನ್​ನಿಂದ ಹೊರಬಂದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತೇವೆ ಎಂದು ವಾರ್ನಿಂಗ್​ ನೀಡಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada