ನೀನು ತಂದ ಅನುದಾನ ಎಲ್ರಿಗೂ ಹಂಚಿಕೆ ಆಗ್ಲಿ -ಅತಿವೃಷ್ಟಿ ಹಣಕ್ಕಾಗಿ ಟೇಬಲ್​ ಕುಟ್ಟಿ ಶಾಸಕ ಆಕ್ರೋಶ

ನೀನು ತಂದ ಅನುದಾನ ಎಲ್ರಿಗೂ ಹಂಚಿಕೆ ಆಗ್ಲಿ -ಅತಿವೃಷ್ಟಿ ಹಣಕ್ಕಾಗಿ ಟೇಬಲ್​ ಕುಟ್ಟಿ ಶಾಸಕ ಆಕ್ರೋಶ
ಅತಿವೃಷ್ಟಿ ಅನುದಾನಕ್ಕಾಗಿ ಶಾಶಕರ ಜಟಾಪಟಿ

ಅತಿವೃಷ್ಟಿಗೆ ಬಿಡುಗಡೆಯಾದ ಅನುದಾನದ ಹಂಚಿಕೆ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವರ ಎದುರೇ ಶಾಸಕರಿಬ್ಬರ ನಡುವೆ ಜಟಾಪಟಿ ಸಂಭವಿಸಿರುವ ಘಟನೆ ನಗರದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಬೆಳಕಿಗೆ ಬಂದಿದೆ.

KUSHAL V

|

Nov 26, 2020 | 6:20 PM

ಹಾಸನ: ಅತಿವೃಷ್ಟಿಗೆ ಬಿಡುಗಡೆಯಾದ ಅನುದಾನದ ಹಂಚಿಕೆ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವರ ಎದುರೇ ಶಾಸಕರಿಬ್ಬರ ನಡುವೆ ಜಟಾಪಟಿ ಸಂಭವಿಸಿರುವ ಘಟನೆ ನಗರದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಬೆಳಕಿಗೆ ಬಂದಿದೆ. ಶಾಸಕರಾದ ಶಿವಲಿಂಗೇಗೌಡ ಹಾಗೂ ಪ್ರೀತಂ ಗೌಡ ನಡುವೆ ವಾಗ್ವಾದ ನಡೆದಿದೆ.

ಕೆಲವು ಕ್ಷೇತ್ರಗಳಿಗೆ ಮಾತ್ರ ಅನುದಾನ ಹಂಚಲಾಗಿದೆ. ಅರಸೀಕೆರೆ, ಚನ್ನರಾಯಪಟ್ಟಣ ಕ್ಷೇತ್ರ ಕಡೆಗಣಿಸಲಾಗಿದೆ. ಜಿಲ್ಲೆಗೆ ಬಂದ 19 ಕೋಟಿ ಹಣ ಎಲ್ಲಾ ಕ್ಷೇತ್ರಗಳಿಗೂ ಹಂಚಿ. ಮಳೆಯಿಂದ ಹಾನಿಯಾದ ಎಲ್ಲ ಪ್ರದೇಶಗಳಿಗೂ ಹಂಚಬೇಕು ಎಂದು ಕೆಡಿಪಿ ಸಭೆಯಲ್ಲಿ ಶಾಸಕ ಶಿವಲಿಂಗೇಗೌಡ ಹಾಗೂ ಬಾಲಕೃಷ್ಣ ಆಗ್ರಹಿಸಿದ್ದಾರೆ.

ನೀನು ತಂದಿರೋದು ಸರ್ಕಾರದ ಅನುದಾನ. ಅದು ಎಲ್ಲಾ ಕ್ಷೇತ್ರಗಳಿಗೆ ಹಂಚಿಕೆಯಾಗಬೇಕು ಎಂದು ಮೇಜು ಕುಟ್ಟಿ ಜೆಡಿಎಸ್​ ಶಾಸಕ ಶಿವಲಿಂಗೇಗೌಡ ತಮ್ಮ ಆಕ್ರೋಶ ಹೊರಹಾಕಿದರು. ಇದಕ್ಕೆ ಕೆರಳಿದ ಶಾಸಕ ಪ್ರೀತಂಗೌಡ ಶಿವಲಿಂಗೇಗೌಡರೊದಿಗೆ ವಾಗ್ವಾದಕ್ಕೆ ಇಳಿದರು. ‘ಇಷ್ಟು ದಿನ ರೇವಣ್ಣ ಕೊಂಡೊಯ್ತಿದ್ರು.. ಈಗ ನೀನು ಅವರಿಗಿಂತ ಜಾಸ್ತಿ ಮಾಡ್ತಿದ್ದೀಯಾ!’

‘ನೀವು ಟೇಬಲ್‌ ಬಡಿದರೆ ನಮಗೂ ಬಡಿಯೋಕೆ‌ ಬರುತ್ತದೆ’ ನೀವು ಟೇಬಲ್‌ ಬಡಿದರೆ ನಮಗೂ ಬಡಿಯೋಕೆ‌ ಬರುತ್ತದೆ.. ಸುಮ್ಮನಿರಿ ಎಂದು ಬಿಜೆಪಿ ಶಾಸಕ ಪ್ರೀತಂಗೌಡ ತಿರುಗೇಟು ಕೊಟ್ಟರು. ನಮ್ಮ ಕ್ಷೇತ್ರದ ಬಗ್ಗೆ ಮಾತಾಡೋಕೆ ನೀವ್ಯಾರು? ನಮ್ಮ ಸರ್ಕಾರ, ನಮ್ಮ ಸಿಎಂ ನಮಗೆ ಅನುದಾನ ಕೊಟ್ಟಿದ್ದಾರೆ ಎಂದು ಪ್ರೀತಂಗೌಡ ತಿರುಗೇಟು ಕೊಟ್ಟರು. ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಎದುರೇ ಇಬ್ಬರ ನಡುವಿನ ವಾಗ್ವಾದ ತಾರಕಕ್ಕೇರಿತು.

ಕೊನೆಗೆ, ಮಧ್ಯಪ್ರವೇಶಿಸಿದ ಸಚಿವ ಗೋಪಾಲಯ್ಯ ಚನ್ನರಾಯಪಟ್ಟಣ, ಅರಸೀಕೆರೆಗೆ ಅನುದಾನ ಕೊಡಿಸುತ್ತೇನೆ. ತಲಾ 2 ಕೋಟಿ ಅನುದಾನ ಕೊಡಿಸುತ್ತೇನೆ ಎಂದು ಭರವಸೆ ಕೊಟ್ಟರು. ಇದಕ್ಕೆ ಸ್ಪಂದಿಸಿದ ಶಾಸಕ ಶಿವಲಿಂಗೇಗೌಡ ಬಂದಿರೋ ಅನುದಾನದಲ್ಲಿ ನಮ್ಮ ಕ್ಷೇತ್ರಕ್ಕೂ ಅನುದಾನ ಕೊಡಿ. ಇಲ್ಲದಿದ್ದರೇ ಅತಿವೃಷ್ಟಿಯೇ ಇಲ್ಲಾ ಎಂದು ಪತ್ರ ಬರೀತ್ತೀವಿ. ನೀವು ಅದ್ಹೇಗೆ ಟೆಂಡರ್ ಕರೀತೀರೋ ನೋಡೋಣ ಎಂದು ಎಚ್ಚರಿಕೆ ನೀಡಿದರು. ಆಗ, ಶಾಸಕರನ್ನು ಸಮಾಧಾನಪಡಿಸಿದ ಸಚಿವರು ಯಾಕೆ‌ ಇಷ್ಟೊಂದು ಸಿಟ್ಟು ಮಾಡಿಕೊಳ್ತೀರಾ? ಸಮಸ್ಯೆ ಇದ್ದರೆ ಅನುನದಾನ‌ ಕೊಡಿಸೋಣ ಬಿಡಿ ಎಂದು ಶಾಸಕರಿಗೆ ಭರವಸೆ ನೀಡಿದರು.

Follow us on

Related Stories

Most Read Stories

Click on your DTH Provider to Add TV9 Kannada