ಗುವಾಹಟಿ: ಈಶಾನ್ಯ ರಾಜ್ಯಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಅಲ್ಲಿನ ಜನಜೀವನ ಭಾರೀ ಅಸ್ತವ್ಯಸ್ತವಾಗಿದೆ. ಸತತವಾಗಿ ಮಳೆ ಸುರಿಯುತ್ತಿರೋದ್ರಿಂದ ಭಾರೀ ಪ್ರಮಾಣದಲ್ಲಿ ಪ್ರವಾಹ ಬಂದಿದೆ. ಎಲ್ಲಿ ನೋಡಿದರೂ ನೀರೇ ನೀರು ಕಾಣುವಷ್ಟು ಪ್ರವಾಹವಿದೆ. ಕಳೆದ ಕೆಲ ದಿನಗಳಿಂದ ಸುರಿದ ಮಳೆಗೆ ಇನ್ನೂ ಶೇಕಡಾ 80ರಷ್ಟು ಪ್ರವಾಹ ಮುಂದುವರಿದೇ ಇದೆ.
ಅದ್ರಲ್ಲೂ ಪ್ರಖ್ಯಾತ ಕಾಜಿರಂಗ ನ್ಯಾಷನಲ್ ಪಾರ್ಕ್ ಮತ್ತು ಟೈಗರ್ ರೀಸರ್ವ್ ಪ್ರದೇಶ ಸಂಪೂರ್ಣ ಜಲಾವೃತಗೊಂಡಿದೆ. ಹೀಗಾಗಿ ಈ ಪಾರ್ಕ್ನಿಂದ ಹಲವಾರು ಪ್ರಾಣಿಗಳು ಇಲ್ಲಿಂದ ಬೇರೆಡೆ ತೆರಳಿವೆ. ಕೆಲವೊಂದು ಪ್ರಾಣಿಗಳು ಪ್ರವಾಸಕ್ಕೆ ಕೊಚ್ಚಿಕೊಂಡು ಹೊಗಿವೆ.
ನ್ಯಾಷನಲ್ ಪಾರ್ಕ್ ನಿರ್ದೇಶಕ ಶಿವಕುಮಾರ್ ಪ್ರಕಾರ ಇದುವರೆಗೆ ಘೇಂಡಾ ಮೃಗ, ಜಿಂಕೆಗಳು, ಕಾಡು ಕೋನಗಳು ಸೇರಿ 108 ಪ್ರಾಣಿಗಳು ಸಾವನ್ನಪ್ಪಿವೆ, 136 ಪ್ರಾಣಿಗಳನ್ನ ರಕ್ಷಿಸಲಾಗಿದೆ. ಇನ್ನುಳಿದ ಪ್ರಾಣಿಗಳ ರಕ್ಷಣಾಕಾರ್ಯ ಇನ್ನು ನಡೆಯತ್ತಿದೆಯಂತೆ.
Flood situation is improving, 80% of the area is still inundated. 108 animals dead while 136 rescued so far: Kaziranga National Park & Tiger Reserve Director P Sivakumar
9 rhinos, 4 wild buffaloes, 7 wild boars, 2 swamp deers, 82 hog deers have died in flood-related incidents. pic.twitter.com/z28iIkzumW
— ANI (@ANI) July 19, 2020