ಆಸ್ತಿ ವಿವಾದ: ತಾಯಿ ಮತ್ತು ಮಗನ ಬರ್ಬರ ಹತ್ಯೆ..
ಬಾಗಲಕೋಟೆ: ಆಸ್ತಿ ವಿವಾದ ಹಿನ್ನೆಲೆಯಿಂದಾಗಿ ತಾಯಿ ಹಾಗೂ ಮಗನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಜಂಗವಾಡ ಗ್ರಾಮದಲ್ಲಿ ನಡೆದಿದೆ. ಗ್ರಾಮದ ದುರ್ಗಪ್ಪ ಭೀಮಪ್ಪ ಮಾದರ (36) ದೇವಕೆವ್ವ ಭೀಮಪ್ಪ ಮಾದರ (56) ಕೊಲೆಯಾದ ತಾಯಿ, ಮಗನಾಗಿದ್ದಾರೆ. ಆಸ್ತಿ ವಿವಾದ ಹಿನ್ನೆಲೆಯಿಂದಾಗಿ ಈ ಹತ್ಯೆ ನಡೆದಿದ್ದು, ಶಿವಪ್ಪ ಮಾದರ, ಉಮೇಶ್ ಮಾದರ, ಕಾಮಪ್ಪ ಮಾದರ, ಹನುಮಂತ ಮಾದರ, ಪ್ರಕಾಶ್ ಮಾದರ, ರವಿ ಮಾದರ, ರಮೇಶ್ ಮಾದರ, ಬಸವರಾಜ ಮಾದರ ಸೇರಿದಂತೆ ಒಂಬತ್ತು […]
ಬಾಗಲಕೋಟೆ: ಆಸ್ತಿ ವಿವಾದ ಹಿನ್ನೆಲೆಯಿಂದಾಗಿ ತಾಯಿ ಹಾಗೂ ಮಗನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಜಂಗವಾಡ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ದುರ್ಗಪ್ಪ ಭೀಮಪ್ಪ ಮಾದರ (36) ದೇವಕೆವ್ವ ಭೀಮಪ್ಪ ಮಾದರ (56) ಕೊಲೆಯಾದ ತಾಯಿ, ಮಗನಾಗಿದ್ದಾರೆ. ಆಸ್ತಿ ವಿವಾದ ಹಿನ್ನೆಲೆಯಿಂದಾಗಿ ಈ ಹತ್ಯೆ ನಡೆದಿದ್ದು, ಶಿವಪ್ಪ ಮಾದರ, ಉಮೇಶ್ ಮಾದರ, ಕಾಮಪ್ಪ ಮಾದರ, ಹನುಮಂತ ಮಾದರ, ಪ್ರಕಾಶ್ ಮಾದರ, ರವಿ ಮಾದರ, ರಮೇಶ್ ಮಾದರ, ಬಸವರಾಜ ಮಾದರ ಸೇರಿದಂತೆ ಒಂಬತ್ತು ಜನ ಸೇರಿ ಈ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕೆರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಒಟ್ಟು 14 ಜನರ ವಿರುದ್ದ ಕೆರೂರು ಠಾಣೆಯಲ್ಲಿ ದೂರು ದಾಖಲಾಗಿದೆ.