ಎಲ್ರೂ ಡೋಂಗಿಗಳು.. BJP ಮೇಲಿನ ಸಿಟ್ಟಿಗೆ ರೈತ ಮಸೂದೆ ವಿರೋಧಿಸ್ತಿದಾರೆ -ಶೋಭಾ ಕರಂದ್ಲಾಜೆ

ಎಪಿಎಂಸಿ ಮದ್ಯವರ್ತಿಗಳಿಂದ ಪಂಜಾಬ್​ನಲ್ಲಿ ರೈತರ ಶೋಷಣೆ ಆಗ್ತಾ ಇದೆ. ಆದರೆ, ಎಪಿಎಂಸಿ ಲಾಬಿಗೆ ಪಂಜಾಬ್ ಸರ್ಕಾರ ಮಣಿದಿದೆ. ಇವರದ್ದು ಮದ್ಯವರ್ತಿಗಳ ಹಿತಕ್ಜಾಗಿ ಹೋರಾಟವೇ ಹೊರತು, ರೈತರಿಗಾಗಿ ಅಲ್ಲ. ಕರ್ನಾಟಕದಲ್ಲಿ ರೈತ ಹೋರಾಟಗಾರ ಕೋಡಿಹಳ್ಳಿ ಸಾರಿಗೆ ಹೋರಾಟಗಾರ ಆಗಿದ್ಯಾಕೆ? ಕೋಡಿಹಳ್ಳಿ ಚಂದ್ರಶೇಖರ್ ಕಾಂಗ್ರೆಸ್ ಆಣತಿಯಂತೆ ನಡೆದುಕೊಳ್ತಿದ್ದಾರಾ ಎನ್ನುವ ಸಂದೇಹವಿದೆ.

ಎಲ್ರೂ ಡೋಂಗಿಗಳು.. BJP ಮೇಲಿನ ಸಿಟ್ಟಿಗೆ ರೈತ ಮಸೂದೆ ವಿರೋಧಿಸ್ತಿದಾರೆ -ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ (ಸಂಗ್ರಹ ಚಿತ್ರ)
Skanda

| Edited By: sadhu srinath

Dec 18, 2020 | 1:25 PM

ಉಡುಪಿ: ರೈತ ಮಸೂದೆಗೆ ದೊಡ್ಡ ಇತಿಹಾಸವೇ ಇದೆ. ಇದು ಎರಡು ಮೂರು ದಶಕಗಳ ಬೇಡಿಕೆಯಾಗಿದ್ದು, ಕೇವಲ ರಾಜಕೀಯ ಕಾರಣಕ್ಕಾಗಿ ಈಗ ವಿರೋಧ ಹುಟ್ಟಿಕೊಂಡಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಉಡುಪಿಯಲ್ಲಿ ಮಾತನಾಡಿ ಕೇಂದ್ರ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ರೈತ ಮಸೂದೆ ಪಾಸ್ ಆದಾಗ ಎಲ್ಲಾ ಪಕ್ಷಗಳು ಭಾಗವಹಿಸಿದ್ದವು. ಆ ಸಂದರ್ಭದಲ್ಲಿ ಮಸೂದೆಯ ಬಗ್ಗೆ ಸುದೀರ್ಘ ಚರ್ಚೆಯೂ ನಡೆದಿತ್ತು. ಈ ಹಿಂದೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಎಪಿಎಂಸಿ ರದ್ದು ಮಾಡ್ತೇವೆ ಅಂದಿದ್ರು, ಶರದ್​ ಪವಾರ್ ಕೃಷಿ ಸಚಿವರಾಗಿದ್ದಾಗ ಎಲ್ಲರಿಗೂ ಪತ್ರ ಬರೆದಿದ್ರು, ಡಿಎಂಕೆ ಅಧಿಕಾರಕ್ಕೆ ಬಂದ್ರೆ ಎಪಿಎಂಸಿ ರದ್ದು ಮಾಡ್ತೇವೆ ಅಂತಾ ಭರವಸೆ ನೀಡಿದ್ರು.. ಆದರೆ ಈಗ ಎಲ್ಲಾ ಪಕ್ಷಗಳು ಡೋಂಗಿತನ ಪ್ರದರ್ಶಿಸುತ್ತಿವೆ ಎಂದು ಕಿಡಿಕಾರಿದ್ದಾರೆ.

ಎಲ್ಲಾ ರಾಜಕೀಯ ಪಕ್ಷಗಳು ಬಿಜೆಪಿಯನ್ನು ವಿರೋಧಿಸಬೇಕೆಂಬ ಕಾರಣಕ್ಕಾಗಿ ಮಸೂದೆಯನ್ನೂ ವಿರೋಧಿಸುತ್ತಿವೆ. ಕೇರಳದಲ್ಲಿ ಎಪಿಎಂಸಿ ಕಾಯ್ದೆಯೇ ಇಲ್ಲದಿದ್ದರೂ ವಿರೋಧ ಮಾತ್ರ ಇದೆ. ಸಂಸತ್ತಿನಲ್ಲಿ ಕೃಷಿ ಸ್ಥಾಯಿ ಸಮಿತಿ ಇದೆ, ಕೃಷಿ ಬಿಲ್ ಸ್ಥಾಯಿ ಸಮಿತಿಗೂ ಹೋಗಿತ್ತು. ಅಲ್ಲಿ ಕಾಂಗ್ರೆಸ್ ಸಂಸದರು ಸಹ ಇದ್ದಾರೆ ಎನ್ನುವುದು ಗಮನಾರ್ಹ. ಅಂದು ಈ ಮಸೂದೆಯನ್ನು ಒಪ್ಪಿಕೊಂಡಿದ್ದ ಅಮರೇಂದರ್ ಸಿಂಗ್ ಈಗ ವಿರೋಧ ಮಾಡುತ್ತಿರುವುದೇಕೆ? ಇದು ರಾಜಕೀಯ ಪಕ್ಷಗಳ ಇಬ್ಬಗೆಯ ನೀತಿಯಲ್ಲದೇ ಬೇರೇನೂ ಅಲ್ಲ ಎಂದು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಜೆಎನ್​ಯುನಲ್ಲಿ ಭಾರತ ವಿರೋಧಿ ಘೊಷಣೆ ಕೂಗಿದವರಿಗೂ ಕೃಷಿ ಹೋರಾಟಕ್ಕೂ ಏನು ಸಂಬಂಧ? ಈಶಾನ್ಯ ಭಾರತದ ಭಯೋತ್ಪಾದಕ ಚಟುವಟಿಕೆಗೂ ಕೃಷಿ ಬಿಲ್​ಗೂ ಏನು ಸಂಬಂಧ? ಖಾಲಿಸ್ತಾನ ಮೂವ್​ಮೆಂಟ್ ಕೆನಡಾದಲ್ಲಿ ಜೀವಂತವಾಗಿದೆ. ಅಲ್ಲಿನ ಪ್ರಧಾನಿ ವೋಟ್ ಬ್ಯಾಂಕ್​​ಗಾಗಿ ಭಾರತ ವಿರೋಧಿ ಹೇಳಿಕೆ ಕೊಡ್ತಾರೆ. ಇದೆಲ್ಲವೂ ರಾಜಕೀಯ ಪ್ರೇರಿತ ಎಂದು ಹೇಳಿಕೆ ನೀಡಿದ್ದಾರೆ.

ಎಪಿಎಂಸಿ ಮದ್ಯವರ್ತಿಗಳಿಂದ ಪಂಜಾಬ್​ನಲ್ಲಿ ರೈತರ ಶೋಷಣೆ ಆಗ್ತಾ ಇದೆ. ಆದರೆ, ಎಪಿಎಂಸಿ ಲಾಬಿಗೆ ಪಂಜಾಬ್ ಸರ್ಕಾರ ಮಣಿದಿದೆ. ಇವರದ್ದು ಮದ್ಯವರ್ತಿಗಳ ಹಿತಕ್ಜಾಗಿ ಹೋರಾಟವೇ ಹೊರತು, ರೈತರಿಗಾಗಿ ಅಲ್ಲ. ಕರ್ನಾಟಕದಲ್ಲಿ ರೈತ ಹೋರಾಟಗಾರ ಕೋಡಿಹಳ್ಳಿ ಸಾರಿಗೆ ಹೋರಾಟಗಾರ ಆಗಿದ್ಯಾಕೆ? ಕೋಡಿಹಳ್ಳಿ ಚಂದ್ರಶೇಖರ್ ಕಾಂಗ್ರೆಸ್ ಆಣತಿಯಂತೆ ನಡೆದುಕೊಳ್ತಿದ್ದಾರಾ ಎನ್ನುವ ಸಂದೇಹವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ತಿದ್ದುಪಡಿಯಿಂದ ರೈತರಿಗೆ ಲಾಭ ಆಗುತ್ತೆ. ಎಪಿಎಂಸಿ ಮಾರಾಟಕ್ಕೆ ಯಾರೂ ತಡೆ ಒಡ್ಡುವುದಿಲ್ಲ. ಎಪಿಎಂಸಿನೂ ಇರುತ್ತೆ, ಉತ್ತಮ ಬೆಲೆ ಸಿಕ್ರೆ ಖಾಸಗಿ ಮಾರಾಟ ಮಾಡಬಹುದು ಅಷ್ಟೇ. ಅನುಭವದ ಆಧಾದಲ್ಲಿ ಮೋದಿ ಈ ಮಸೂದೆ ತಂದಿದ್ದಾರೆ. ಗುಜರಾತ್​ನಲ್ಲಿ ರೈತರ ಅದಾಯ ಡಬ್ಬಲ್ ಆಗಿದೆ. ಅದೇರೀತಿ ಎಲ್ಲಾ ರೈತರಿಗೂ ಲಾಭ ಆಗಬೇಕು ಎಂದು ಹೇಳಿದ್ದಾರೆ.

ಬೀಜ, ಗೊಬ್ಬರ ಕೊಟ್ಟು ಖಾಸಗಿಯವರು ಬೆಳೆ ಖರೀದಿ ಮಾಡಿದ್ರೆ ತಪ್ಪೇನಿದೆ? ಖಾಸಗಿ ಕಂಪೆನಿ ಮತ್ತು ರೈತರ ನಡುವಿನ ಒಪ್ಪಂದಕ್ಕೆ ಕಾನೂನಿಗೆ ಬೆಂಬಲ ಸಿಗಲಿದ್ದು, ಈ ಮಸೂದೆಯ ಮೂಲಕ 2023ರ ವೇಳೆಗೆ ರೈತರ ಆದಾಯ ಇಮ್ಮಡಿ ಮಾಡುವ ಉದ್ದೇಶ ಇದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಗ್ರಾಮ ಪಂಚಾಯತಿ ಚುನಾವಣಾ ಪ್ರಚಾರಕ್ಕೆ ಹೋದ ಸಂಸದೆ ಶೋಭಾ ಕರಂದ್ಲಾಜೆಗೆ ಗ್ರಾಮಸ್ಥರಿಂದ ಕ್ಲಾಸ್..

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada