2 ಸಾವಿರ ಖಡಕ್​ನಾಥ್ ಕೋಳಿಗಳಿಗೆ ಆರ್ಡರ್ ಕೊಟ್ಟ ಧೋನಿ!

  • Publish Date - 7:06 am, Sat, 14 November 20
2 ಸಾವಿರ ಖಡಕ್​ನಾಥ್ ಕೋಳಿಗಳಿಗೆ ಆರ್ಡರ್ ಕೊಟ್ಟ ಧೋನಿ!

ಅಂತರಾಷ್ಟ್ರೀಯ ಕ್ರಿಕೆಟ್​ನಿಂದ ದೂರವಾದ ಬಳಿಕ ಮಹೇಂದ್ರ ಸಿಂಗ್ ಧೋನಿ, ತಮ್ಮ ಫಾರ್ಮ್ ಹೌಸ್​ನಲ್ಲಿ ಕೃಷಿ ಮಾಡೋದ್ರಲ್ಲಿ ಬ್ಯುಸಿಯಾಗಿರೋದು ನಿಮಗೆ ಗೊತ್ತಿರೋ ಸಂಗತಿ.

2 ಸಾವಿರ ಖಡಕ್​ನಾಥ್ ಕೋಳಿಗಳಿಗೆ ಆರ್ಡರ್ ಕೊಟ್ಟ ಧೋನಿ!
ಐಪಿಎಲ್ ಮುಗಿಸಿ ತವರಿಗೆ ಮರಳುತ್ತಿದ್ದಂತೆ ಧೋನಿ ತಮ್ಮ ಫಾರ್ಮ್ ಹೌಸ್​ನಲ್ಲಿ ಖಡಕ್​ನಾಥ್ ತಳಿಯ ಕೋಳಿ ಸಾಕಾಣಿಕೆಗೆ ಮುಂದಾಗಿದ್ದಾರೆ. ಇದೇ ಕಾರಣಕ್ಕೆ ಧೋನಿ ರಾಂಚಿಯಲ್ಲಿರೋ ತಮ್ಮ ಫಾರ್ಮ್ ಹೌಸ್​ನಲ್ಲಿರೋ ಫಾರಂಗೆ ಬರೊಬ್ಬರಿ 2 ಸಾವಿರ ಖಡಕನಾಥ್ ಕೋಳಿಗಳನ್ನ ಆರ್ಡರ್ ಮಾಡಿದ್ದಾರೆ.

ಖಡಕ್​ನಾಥ್.. ಈ ಕೋಳಿಯ ಹೆಸರಲ್ಲೇ ಏನೋ ಖದರ್ ಇದೆ ಅನ್ನಿಸುತ್ತೆ. ಅದು ನಿಜ ಕೂಡ ಹೌದು. ಈ ಖಡಕ್​ನಾಥ್ ಕೋಳಿಯಲ್ಲಿರೋ ವಿಶೇಷತೆಯೇ, ಮಹೇಂದ್ರ ಸಿಂಗ್ ಧೋನಿ ಮನಸ್ಸು ಸೂರೆಗೊಳ್ಳೊ ಹಾಗೇ ಮಾಡಿದ್ದು. ಇದೇ ಕಾರಣಕ್ಕೆ ಮಾಹಿ, ರಾಂಚಿಯಲ್ಲಿರೋ ತಮ್ಮ ಫಾರ್ಮ್ ಹೌಸ್​ಗೆ ಈ ಕಪ್ಪು ಸುಂದರಿಯನ್ನ ಕರೆ ತರೋದಕ್ಕೆ ಮುಂದಾಗಿದ್ದಾರೆ.

ಕಳೆದ ಕೆಲವು ತಿಂಗಳಿಂದ ಧೋನಿ ಈ ಖಡಕ್​ನಾಥ್ ತಳಿಯ ಕೋಳಿಗಳ ಬಗ್ಗೆ, ತಮ್ಮ ಗೆಳೆಯರ ಬಳಿ ಕೇಳಿ ತಿಳಿದುಕೊಳ್ತಾ ಇದ್ರು. ಈ ಕೋಳಿಯ ವಿಶೇಷತೆಗೆ ಮನಸೋತ ಮಾಹಿ, ತನ್ನ ಫಾರ್ಮ್ ಹೌಸ್​ನಲ್ಲೂ ಖಡಕ್​ನಾಥ್ ಕೋಳಿಗಳನ್ನ ಸಾಕಬೇಕು ಅಂತಾ ಮನಸ್ಸು ಮಾಡಿದ್ದಾರೆ. ಹೀಗೆ ಮನಸ್ಸು ಮಾಡಿದ್ದೇ ತಡ ಮಾಹಿ ಮದ್ಯಪ್ರದೇಶದ ಜಬುವಾದಲ್ಲಿರೋ ಖಡಕನಾಥ್ ತಳಿಯ ಸಾಕಾಣಿಕಾ ಕೇಂದ್ರವನ್ನ ಸಂಪರ್ಕಿಸಿ 2 ಸಾವಿರ ಕೋಳಿಗಳನ್ನ ಆರ್ಡರ್ ಮಾಡಿದ್ದಾರೆ.

ಮುಂದಿನ ತಿಂಗಳೇ ಧೋನಿ ಫಾರ್ಮ್​ಹೌಸ್​ಗೆ ಈ 2 ಸಾವಿರ ಖಡಕ್​ನಾಥ್ ತಳಿಯ ಕೋಳಿಗಳು ತಲುಪಲಿವೆ. ಖಡಕ್​ನಾಥ್ ಕೋಳಿ ಸಾಕಾಣಿಕೆಗೆ ಬೇಕಾದ ಎಲ್ಲ ಸಿದ್ಧತೆಯನ್ನು ಧೋನಿ ತಮ್ಮ ಫಾರ್ಮ್ ಹೌಸ್​ನಲ್ಲಿ ಮಾಡಿಕೊಂಡಿದ್ದಾರೆ.