ಅರ್ಬನ್​ ಲ್ಯಾಡರ್​ ಕಂಪನಿ ರಿಲಾಯನ್ಸ್​ ತೆಕ್ಕೆಗೆ.. ಅಮೆಜಾನ್​, ಫ್ಲಿಪ್​ಕಾರ್ಟ್​ಗೆ ಅಂಬಾನಿ ಪೈಪೋಟಿ?

  • TV9 Web Team
  • Published On - 19:19 PM, 16 Nov 2020
ಅರ್ಬನ್​ ಲ್ಯಾಡರ್​ ಕಂಪನಿ ರಿಲಾಯನ್ಸ್​ ತೆಕ್ಕೆಗೆ.. ಅಮೆಜಾನ್​, ಫ್ಲಿಪ್​ಕಾರ್ಟ್​ಗೆ ಅಂಬಾನಿ ಪೈಪೋಟಿ?

ಮುಂಬೈ: ಬೆಂಗಳೂರು ಮೂಲದ ಆನ್​ಲೈನ್​ ಶಾಪಿಂಗ್ ಕಂಪನಿಯಾದ ಅರ್ಬನ್ ಲ್ಯಾಡರ್​ನಲ್ಲಿ ರಿಲಾಯನ್ಸ್ ರಿಟೇಲ್​ ಶೇ. 96ರಷ್ಟು ಪಾಲನ್ನು 182 ಕೋಟಿ ಕೊಟ್ಟು ಖರೀದಿ ಮಾಡಿದೆ. ಈ ಬೆಳವಣಿಗೆಯು, ಇತರೆ ಆನ್​ಲೈನ್​ ಶಾಪಿಂಗ್ ಸಂಸ್ಥೆಗಳಾದ ಅಮೆಜಾನ್, ಫ್ಲಿಪ್​ಕಾರ್ಟ್​ ಮತ್ತು ಭಾರತೀಯ ಮೂಲದ ಆನ್​ಲೈನ್​ ಪೀಠೋಪಕರಣಗಳ ಮಾರುಕಟ್ಟೆಗಳಿಗೆ ಪೈಪೋಟಿ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಭಾರತದಲ್ಲಿ ಐಕಿಯಾ, ಪೆಪ್ಪರ್​ ಫ್ರೈ ನಂಥ ಆನ್​ಲೈನ್​ ಫರ್ನೀಚರ್ ಶಾಪಿಂಗ್ ಸಂಸ್ಥೆಗಳಿದ್ದವು. ಇದೀಗ, ಅರ್ಬನ್ ಲ್ಯಾಡರ್​ ಇವೆಲ್ಲಾ ಕಂಪನಿಗಳಿಗೆ ಸ್ಪರ್ಧೆ ನೀಡುವ ಸಾಮರ್ಥ್ಯ ಪಡೆದಿದೆ.

ಅಷ್ಟೇ ಅಲ್ಲ, ರಿಲಾಯನ್ಸ್ ರಿಟೇಲ್​ ವೆಂಚರ್ಸ್ ಲಿಮಿಟೆಡ್ (RRVL), ಅರ್ಬನ್ ಲ್ಯಾಡರ್​ನ ಉಳಿದ ಪಾಲನ್ನು ಸಹ ಡಿಸೆಂಬರ್ 2023ರ ಒಳಗೆ ಪಡೆದುಕೊಳ್ಳುವ ಗುರಿಯಿಟ್ಟಿದೆ. 75 ಕೋಟಿ ರೂಪಾಯಿ ಹೂಡಿಕೆ ನಡೆಸಿ ಅರ್ಬನ್ ಲ್ಯಾಡರ್​ನ ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಳ್ಳುವ ಸೂಚನೆ ಕಂಡುಬಂದಿದೆ. ಇದರಿಂದ, ಭಾರತದ32ಬಿಲಿಯನ್ ರೂಪಾಯಿ ಮೌಲ್ಯದ ಪೀಠೋಪಕರಣಗಳ ಮಾರುಕಟ್ಟೆಗೆ ರಿಲಾಯನ್ಸ್ ಲಗ್ಗೆ ಇಟ್ಟಂತಾಗಲಿದೆ.