ಐದು ಬಾರಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಮುಂಬೈ ಇಂಡಿಯನ್ಸ್ ಹಾದಿ ಹೀಗಿದೆ ನೋಡಿ..

  • TV9 Web Team
  • Published On - 10:17 AM, 11 Nov 2020
ಐದು ಬಾರಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಮುಂಬೈ ಇಂಡಿಯನ್ಸ್ ಹಾದಿ ಹೀಗಿದೆ ನೋಡಿ..

ಮರಳುಗಾಡಿನ ಮಹಾಯುದ್ಧದಲ್ಲಿ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಈ ಮೂಲಕ ಮುಂಬೈ, ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನೋ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಲ್ಲಿ, ಅತೀ ಹೆಚ್ಚು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಹಿರಿಮೆಯನ್ನ ತನ್ನದಾಗಿಸಿಕೊಂಡಿದೆ.

ನಿಜ.. ಈ ಬಾರಿಯೂ ಐಪಿಎಲ್ ಕಿರೀಟ ಮುಡಿಗೇರಿಸಿಕೊಳ್ಳೋ ಮೂಲಕ ಮುಂಬೈ ಇಂಡಿಯನ್ಸ್ ತಂಡ, ಐಪಿಎಲ್​ನಲ್ಲಿ ಒಟ್ಟು ಐದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಸಾಧನೆ ಮಾಡಿದೆ.
2013, ಮೇ 26, ಭಾನುವಾರ
ಚೆನ್ನೈ ಮಣಿಸಿ ಚಾಂಪಿಯನ್
2013ರ ಐಪಿಎಲ್ ಫೈನಲ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡ, ಚೆನ್ನೈ ತಂಡವನ್ನ ಮಣಿಸಿ ಚೊಚ್ಚಲ ಚಾಂಪಿಯನ್ ಪಟ್ಟವನ್ನ ಅಲಂಕರಿಸಿತು.

2015, ಮೇ 24, ಭಾನುವಾರ
ಚೆನ್ನೈ ಮಣಿಸಿ ಚಾಂಪಿಯನ್
2014ರ ಸಮ ಸಂಖ್ಯೆಯ ವರ್ಷದಲ್ಲಿ ಪ್ಲೇ ಆಫ್​ನಲ್ಲೇ ಹೊರ ನಡೆದ ಮುಂಬೈ ಇಂಡಿಯನ್ಸ್ ತಂಡ 2015ರಲ್ಲಿ ಮತ್ತೊಮ್ಮೆ ಚೆನ್ನೈ ತಂಡವನ್ನ ಮಣಿಸಿ 2ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ್ರು.

2017, ಮೇ 21, ಭಾನುವಾರ
ಪುಣೆ ಮಣಿಸಿ ಚಾಂಪಿಯನ್
2016ರ ಲೀಗ್ ಸ್ಟೇಜ್​ನಲ್ಲೇ ಹೊರ ನಡೆದ ಮುಂಬೈ ಇಂಡಿಯನ್ಸ್ 107ರ ಬೆಸ ಸಂಖ್ಯೆಯ ವರ್ಷದಲ್ಲಿ ಪುಣೆ ಸೂಪರ್ ಜೈಂಟ್ಸ್ ತಂಡವನ್ನ ಮಣಿಸಿ 3ನೇ ಬಾರಿಗೆ ಚಾಂಪಿಯನ್ ಆಯ್ತು.

2019 ಮೇ 12 ಭಾನುವಾರ
ಚೆನ್ನೈ ಮಣಿಸಿ ಚಾಂಪಿಯನ್
ಹಾಗೇ 2018ರಲ್ಲಿ ನಡೆದ ಐಪಿಎಲ್​ನಲ್ಲೂ ಲೀಗ್ ಸ್ಟೇಜ್​ನಲ್ಲೇ ಸುಸ್ತಾದ ಮುಂಬೈ 2019ರಲ್ಲಿ 3ನೇ ಬಾರಿ ಫೈನಲ್​ನಲ್ಲಿ ಚೆನ್ನೈ ತಂಡವನ್ನ ಮಣಿಸಿ 4ನೇ ಬಾರಿ ಐಪಿಎಲ್ ಕಿರೀಟವನ್ನ ಮುಡಿಗೇರಿಸಿಕೊಳ್ತು.

2020 ನವೆಂಬರ್ 10 ಮಂಗಳವಾರ
ಡೆಲ್ಲಿ ಮಣಿಸಿ ಚಾಂಪಿಯನ್
ಕಳೆದ ವರ್ಷ ಚೆನ್ನೈ ಮಣಿಸಿ ನಾಲ್ಕನೇ ಬಾರಿ ಟ್ರೋಫಿ ಎತ್ತಿ ಹಿಡಿದಿದ್ದ ಮುಂಬೈ ಈ ಬಾರಿ ಡೆಲ್ಲಿ ತಂಡವನ್ನ ಮಣಿಸಿ 5ನೇ ಬಾರಿ ಚಾಂಪಿಯನ್ ಪಟ್ಟವನ್ನ ಅಲಂಕರಿಸಿತು.

ಇನ್ನೊಂದು ಇಂಟ್ರಸ್ಟಿಂಗ್ ವಿಷ್ಯ ಏನಂದ್ರೆ, ಪ್ರತಿ ಸೀಸನ್​ನಲ್ಲೂ ಮುಂಬೈ ತಂಡ ಬೆಸ ಸಂಖ್ಯೆಯ ವರ್ಷದಲ್ಲೇ ಚಾಂಪಿಯನ್ ಆಗ್ತಿತ್ತು. ಆದ್ರೆ ಈ ಬಾರಿ ಮುಂಬೈ 2020ರ ಸಮಸಂಖ್ಯೆಯ ವರ್ಷದಲ್ಲಿ ಗೆದ್ದು ಇತಿಹಾಸವನ್ನ ಉಲ್ಟಾ ಮಾಡಿದೆ.