ಲೋಹಸ್ತಂಭದ ಖೋಖೋ: ಏನಿದರ ರಹಸ್ಯ?

ಉತಾಹ್ ಮತ್ತು ರೊಮೇನಿಯಾದ ನಿಗೂಢ ಏಲೆಗಳ ಹಿಂದಿನ ರಹಸ್ಯವೇನು?

ಲೋಹಸ್ತಂಭದ ಖೋಖೋ: ಏನಿದರ ರಹಸ್ಯ?
ಯಾರಿಲ್ಲಿ ನೆಟ್ಟವರು ಈ ಲೋಹಸ್ತಂಭವನ್ನು?
guruganesh bhat

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 17, 2020 | 9:19 PM

ಈಗಾಗಲೇ ಜಗತ್ತಿನಾದ್ಯಂತ ಕುತೂಹಲ ಕೆರಳಿಸಿರುವ ರೆಡ್ ರಾಕ್ ಕಂಟ್ರಿಯಲ್ಲಿ ಉದ್ಭವಗೊಂಡ ಲೋಹಸ್ತಂಭ ಮತ್ತೆ ಮತ್ತೆ ಸುದ್ದಿಯಾಗುತ್ತಲೇ ಇದೆ. ಆದರೆ ಈಗ ಉತಾಹ್ ಮತ್ತು ರೊಮೇನಿಯಾದಲ್ಲಿ ನೆಟ್ಟಿದ್ದ ಗುರುತು ಮಾತ್ರ ಉಳಿದಿವೆ!

ಹಾಗಿದ್ದರೆ ಈ ಲೋಹಸ್ತಂಭ ಮತ್ತೆಲ್ಲಿ ಸ್ಥಳಾಂತರಗೊಂಡಿತು? ಇದೀಗ ಕಲಾವಿದರು, ವಿಜ್ಞಾನಿಗಳು, ಬುದ್ಧಿಜೀವಿಗಳು ಈ ಬಗ್ಗೆ ಊಹೆ, ಉಲ್ಲೇಖಗಳನ್ನು ಕೊಡುತ್ತ ಮತ್ತಷ್ಟು ಆಸಕ್ತಿಯನ್ನು ಜನರಲ್ಲಿ ಸೃಷ್ಟಿಸುತ್ತಲೇ ಇದ್ದಾರೆ. ಉತಾಹ್ ಫೆಡರಲ್ ಬ್ಯೂರೋ ಆಫ್ ಲ್ಯಾಂಡ್ ಮ್ಯಾನೇಜ್ಮೆಂಟ್ ಕೂಡ ಇದರ ಮೂಲ ಹಿನ್ನೆಲೆಯನ್ನು ಇನ್ನೂ ಹುಡುಕುತ್ತಲೇ ಇದೆ.

ಹಿನ್ನೆಲೆ: ಕಳೆದ ತಿಂಗಳು ಅಮೆರಿಕದ ವೈಲ್ಡ್​ ಲೈಫ್​ ಏಜನ್ಸಿಯೊಂದು ಉತಾಹ್ ರೆಡ್ ರಾಕ್ ಕಂಟ್ರಿಯಲ್ಲಿ ಕುರಿಗಳ ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಕಣಿವೆಯಾಳದಲ್ಲಿ 10ರಿಂದ 12 ಅಡಿ ಎತ್ತರದ ಲೋಹದ ಲೋಹಸ್ತಂಭವನ್ನು ಹುಡುಕಿತು. ಹೆಲಿಕ್ಯಾಪ್ಟರಿನ ಮೂಲಕ ಬಂದಿಳಿದ ತಂಡವೊಂದು ಪರಿಶೀಲಿಸಿದ ನಂತರವೂ ಇದು ರಹಸ್ಯವಾಗಿಯೇ ಉಳಿಯಿತು. ಕಣಿವೆಗಳ ಮಧ್ಯೆ ಕಲ್ಲುಬಂಡೆಯಲ್ಲಿ ಇದನ್ನು ನೆಟ್ಟು ಹೋಗಿದ್ದಾದರೂ ಯಾಕೆ ಎಂಬುದಕ್ಕೆ ಇನ್ನೂ ಉತ್ತರ ದೊರೆತಿಲ್ಲ.

ನಂತರ ನವೆಂಬರ್ 23ರಂದು ಉತಾಹ್ ಸಾರ್ವಜನಿಕ ಸುರಕ್ಷತಾ ಇಲಾಖೆಯು ಅಧಿಕೃತವಾಗಿ ಹೊರಡಿಸಿದ ಹೇಳಿಕೆಯಲ್ಲಿ, ಬಹುಶಃ ಇದು ಯಾರೋ ಹೊಸ ಅಲೆಯ ಕಲಾವಿದರ ಇನ್ಸ್ಟಾಲ್ಲೇಶನ್ ಕಲೆ ಇರಬಹುದು ಅಥವಾ ‘2001: ಸ್ಪೇಸ್ ಓಡಿಸ್ಸಿ ಫ್ಯಾನ್’ ತಮಾಷೆಗಾಗಿ ಇದನ್ನು ನೆಟ್ಟಿರಬಹುದು ಎಂಬ ಊಹೆ ಇದೆ. ನಂತರ ನವೆಂಬರ್ 27ರಂದು ಇದ್ದಕ್ಕಿದ್ದಂತೆ ಇದು ಮಾಯವಾಗಿದ್ದು ನೆಟ್ಟ ಗುರುತನ್ನು ಮಾತ್ರ ಉಳಿಸಿಕೊಂಡಿದೆ ಎಂದು ಉತಾಹ್ ಫೆಡರ್ ಬ್ಯೂರೋ ಆಫ್ ಲ್ಯಾಂಡ್ ಮ್ಯಾನೇಜ್ಮೆಂಟ್ ಹೇಳಿಕೆ ನೀಡಿ ಮತ್ತಷ್ಟು ಕುತೂಹಲ ಕೆರಳಿಸಿತು.

ನವೆಂಬರ್ 30ರಂದು ರೊಮೇನಿಯಾದ ಬಾಟ್ಕಾ ಡ್ವಾಮ್ನೆ ಗುಡ್ಡದಲ್ಲಿ ಇದೇ ಥರದ ಲೋಹಸ್ತಂಭ ಕಂಡುಬಂದಿತು. 1960-70ರಲ್ಲಿ ನಡೆದ ಭೂಚಳವಳಿ ಸಂದರ್ಭದಲ್ಲಿ ನಿರ್ಮಿಸಿದ ಕಲಾಕೃತಿಗಳನ್ನು ಇದು ನೆನಪಿಸುತ್ತಿದೆ ಎಂದು ಕಲಾಲೋಕದ ದಿಗ್ಗಜರು ಊಹಿಸಿದರು.

ಹೀಗೆ ಇದು ಆಯಾ ಕ್ಷೇತ್ರದ ಪರಿಣತರ ಬುದ್ಧಿಮತ್ತೆ, ಕಲ್ಪನಾಶಕ್ತಿಗೆ ಅನುಗುಣವಾಗಿ ಐತಿಹಾಸಿಕ ದಾಖಲೆಗಳಿಗೆ ಕೊಂಡಿ ಜೋಡಿಸಿಕೊಳ್ಳುತ್ತ ಇನ್ನೂ ಸುದ್ದಿಯಲ್ಲಿದೆ ಅನ್ನುವುದೇ ಇದರ ವಿಶೇಷ!

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada