ವಿಶ್ವ ನಾಯಕರ ಪೈಕಿ ಪ್ರಧಾನಿ ನರೇಂದ್ರ ಮೋದಿ ಅತಿ ಜನಪ್ರಿಯ ನಾಯಕ!

ವಿಶ್ವದ ನಾನಾ ನಾಯಕರ ಜನಪ್ರಿಯತೆಯನ್ನು ಆಧರಿಸಿ ಅವರುಗಳಿಗೆ ರೇಟಿಂಗ್​ ನೀಡಲಾಗಿದೆ. ವಿಶ್ವದ ನಾನಾ ನಾಯಕರನ್ನು ಈ ಸಮೀಕ್ಷೆಯಲ್ಲಿ ಒಳಪಡಿಸಲಾಗಿತ್ತು. ಈ ವೇಳೆ ನರೇಂದ್ರ ಮೋದಿ ಅವರ ಅನುಮೋದನೆ ರೇಟಿಂಗ್​ ಉಳಿದ ನಾಯಕರಿಗಿಂತ ಹೆಚ್ಚಿದೆ.

  • TV9 Web Team
  • Published On - 14:44 PM, 2 Jan 2021
ವಿಶ್ವ ನಾಯಕರ ಪೈಕಿ ಪ್ರಧಾನಿ ನರೇಂದ್ರ ಮೋದಿ ಅತಿ ಜನಪ್ರಿಯ ನಾಯಕ!
ಭಾರತ-ಜಪಾನ್ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್​ ನಿರಂತರವಾಗಿ ಹೆಚ್ಚುತ್ತಿದ್ದು, ಇದನ್ನು ನಿಯಂತ್ರಣ ಮಾಡಲು ಸರ್ಕಾರದ ಬಳಿ ಸಾಧ್ಯವಾಗಿಲ್ಲ. ಇನ್ನು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ವಿರೋಧಿಸಿ ದೇಶದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಈ ಮಧ್ಯೆಯೂ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಕಡಿಮೆ ಆಗಿಲ್ಲ ಎಂದು ಅಮೆರಿಕ ಮೂಲದ ಸಮೀಕ್ಷಾ ಸಂಸ್ಥೆ ಮಾರ್ನಿಂಗ್​ ಕನ್ಸಲ್ಟ್​ ಹೇಳಿದೆ.

ವಿಶ್ವದ ನಾನಾ ನಾಯಕರನ್ನು ಈ ಸಮೀಕ್ಷೆಯಲ್ಲಿ ಒಳಪಡಿಸಲಾಗಿತ್ತು. ಅವರ ಜನಪ್ರಿಯತೆಯನ್ನು ಆಧರಿಸಿ ಅವರುಗಳಿಗೆ ರೇಟಿಂಗ್​ ನೀಡಲಾಗಿದೆ.ಈ ಪೈಕಿ ನರೇಂದ್ರ ಮೋದಿ ಅವರ ಅನುಮೋದನೆ ರೇಟಿಂಗ್​ ಉಳಿದ ನಾಯಕರಿಗಿಂತ ಹೆಚ್ಚಿದೆ. ಮೋದಿ ಕಾರ್ಯಕ್ಕೆ ಶೇ. 55 ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶೇ.20 ಜನರು ಮೋದಿ ಕಾರ್ಯದ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

ಆಸ್ಟ್ರೇಲಿಯಾ, ಬ್ರೆಜಿಲ್​, ಕೆನಡಾ, ಫ್ರಾನ್ಸ್​, ಜರ್ಮನಿ, ಭಾರತ, ಇಟಲಿ, ಜಪಾನ್​, ಮೆಕ್ಸಿಕೋ, ದಕ್ಷಿಣ ಕೊರಿಯಾ, ಸ್ಪೇನ್​, ಇಂಗ್ಲೆಂಡ್​, ಅಮೆರಿಕದ ನಾಯಕರನ್ನು ಸಮೀಕ್ಷೆಯಲ್ಲಿ ಸೇರಿಸಲಾಗಿತ್ತು. 13 ರಾಷ್ಟ್ರದ ನಾಯಕರಲ್ಲಿ ಮೋದಿಗೆ ಅತಿ ಹೆಚ್ಚು ರೇಟಿಂಗ್​ ದೊರೆತಿದೆ.

ಇನ್ನು, ಇಂಗ್ಲೆಡ್ ಪ್ರಧಾನಿ ಬೋರಿಸ್​ ಜಾನ್ಸನ್​ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿರುವುದಕ್ಕಿಂತ ಅಸಮಾಧಾನ ಹೊರ ಹಾಕಿದವರೇ ಹೆಚ್ಚು.

 

ಹೊಸ ವರ್ಷದ ಸ್ವಾಗತಕ್ಕೆ ಪ್ರಧಾನಿ ನರೇಂದ್ರ ಮೋದಿ ಕವಿತೆ ‘ಈಗಷ್ಟೇ ಸೂರ್ಯ ಉದಯಿಸಿದ್ದಾನೆ’