ಬೆಂಗಳೂರು: ಅಚ್ಚರಿಯ ಬೆಳವಣಿಗೆಯಲ್ಲಿ ರಮೇಶ್ ಜಾರಕಿಹೊಳಿ ವಿರುದ್ದ ನೀಡಿದ್ದ ದೂರನ್ನು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ವಾಪಾಸ್ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಕಬ್ಬನ್ ಪಾರ್ಕ್ ಠಾಣೆಯಲ್ಲಿ ಮಾರ್ಚ್ 2 ರಂದು ನೀಡಿದ್ದ ದೂರನ್ನು ದಿನೇಶ್ ಕಲ್ಲಹಳ್ಳಿ ಹಿಂಪಡೆಯುವ ಮೂಲಕ ಪ್ರಕರಣ ಉಲ್ಟಾ ಹೊಡೆದಿದೆ. ವಕೀಲ ಕುಮಾರ್ ಪಾಟೀಲ್ ಮೂಲಕ ದೂರು ಹಿಂಪಡೆಯುವ ಪತ್ರವನ್ನು ದಿನೇಶ್ ಕಲ್ಲಹಳ್ಳಿ ರವಾನಿಸಿದ್ದಾರೆ. ‘ದಿನೇಶ್ ಕಲ್ಲಹಳ್ಳಿ ಈಗೇಕೆ ದೂರು ಹಿಂಪಡೆಯಲು ನಿರ್ಧರಿಸಿದ್ದಾರೆ? ಅವರೇ ಏಕೆ ಪೊಲೀಸ್ ಠಾಣೆಗೆ
x‘ಇನ್ನಿಲ್ಲದಂತೆ ನನ್ನನ್ನು ಯಾವುದು ಒಳಗೊಳ್ಳುತ್ತದೆಯೋ ಆ ಅನುಭವದ ಇಡಿಯಾದ ಆಕೃತಿಯ ಜೊತೆ ಸಂವಹಿಸುವುದು ಸಾಧ್ಯವಾಗಬೇಕು. ಆ ಸಾಧ್ಯತೆಯನ್ನು ಸಾಧಿಸುವುದೇ ಇಡೀ ಜೀವಮಾನ ಬರೆಯಬಹುದಾದ ಒಂದೇ ಒಂದು ಕವಿತೆ. ಆ ಕವಿತೆಯನ್ನು ಪೂರ್ಣಗೊಳಿಸಲು ಆರಂಭವಾದ ಸಾಲಿನ ಹಾಗೆ ಪ್ರತಿ ಹೊಸ ಬರಹವೂ ಮೈ ಪಡೆಯುತ್ತದೆ. ಒಂದು ಸ್ಪಷ್ಟತೆಯನ್ನು ಕಂಡುಕೊಳ್ಳಲು ಹಲವು ಅಸ್ಪಷ್ಟತೆಗಳನ್ನು ಹಾಯಬೇಕಾಗುತ್ತದೆ. ಈ ನೀರಿನ ಮೇಲನ ನಡಿಗೆಯನ್ನು ಕಲಿಯುವುದಕ್ಕೆ ನಾನು ಮತ್ತೆ ಮತ್ತೆ ಬರಹದ ಮುಖಾಮುಖಿಯಾಗುತ್ತೇನೆ.‘ ಕೃಷ್ಣ ದೇವಾಂಗಮಠ