ನಾರ್ವೆಯಲ್ಲಿ ಫೈಜರ್​ ಲಸಿಕೆ ಪಡೆದ 23 ಮಂದಿ ಸಾವು; ಇನ್ನೂ ಹಲವರಲ್ಲಿ ಗಂಭೀರ ಅಡ್ಡಪರಿಣಾಮ

ಇಲ್ಲಿಯವರೆಗೆ ಫೈಜರ್ ಲಸಿಕೆಯನ್ನು ನಾರ್ವೆಯಲ್ಲಿ ಒಟ್ಟು 30ಸಾವಿರ ಜನರು ಸ್ವೀಕರಿಸಿದ್ದಾರೆ. 23 ಜನರು ಸಾಯುತ್ತಿದ್ದಂತೆ ಅಲರ್ಟ್​ ಆಗಿರುವ ತಜ್ಞರು, ಲಸಿಕೆ ನೀಡುವಾಗ ವೈದ್ಯರು ಎಚ್ಚರಿಕೆ ವಹಿಸಬೇಕು. ಯಾರಿಗೆ ಕೊಡಬೇಕು? ಕೊಡಬಾರದು ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿಕೊಳ್ಳಬೇಕು ಎಂದೂ ಅವರು ಹೇಳಿದ್ದಾರೆ.

  • TV9 Web Team
  • Published On - 16:07 PM, 16 Jan 2021
ನಾರ್ವೆಯಲ್ಲಿ ಫೈಜರ್​ ಲಸಿಕೆ ಪಡೆದ 23 ಮಂದಿ ಸಾವು; ಇನ್ನೂ ಹಲವರಲ್ಲಿ ಗಂಭೀರ ಅಡ್ಡಪರಿಣಾಮ
ಪ್ರಾತಿನಿಧಿಕ ಚಿತ್ರ

ನಾರ್ವೆಯಲ್ಲಿ ಕೊರೊನಾ ಲಸಿಕೆ ಪಡೆದ 23 ಮಂದಿ ಮೃತಪಟ್ಟಿದ್ದು, ಇನ್ನೂ ಹಲವರು ಲಸಿಕೆ ತೆಗೆದುಕೊಂಡ ಕೆಲವೇ ಹೊತ್ತಲ್ಲಿ ತೀವ್ರ ಅಸ್ವಸ್ಥರಾಗಿದ್ದಾರೆ. ಇಷ್ಟು ಜೀವಗಳು ಹೋದ ಬಳಿಕ ಈಗ ಹೇಳಿಕೆ ಬಿಡುಗಡೆ ಮಾಡಿರುವ ನಾರ್ವೆ ಆರೋಗ್ಯ ಇಲಾಖೆ, ವೃದ್ಧರಿಗೆ ಮತ್ತು ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಕೊರೊನಾ ಲಸಿಕೆ ಒಳ್ಳೆಯದಲ್ಲ ಎಂದು ಹೇಳಿದೆ. ಅಷ್ಟೇ ಅಲ್ಲ, ಈ ಸಾವಿನ ಬಗ್ಗೆ ಸೂಕ್ಷ್ಮವಾಗಿ ತನಿಖೆ ನಡೆಸುವಂತೆ ನಾರ್ವೆ ಸರ್ಕಾರ ಆದೇಶ ಹೊರಡಿಸಿದೆ.

80 ವರ್ಷ ದಾಟಿದವರಿಗೆ ಲಸಿಕೆ ಹಾಕಿದಾಗ ಅವರಲ್ಲಿ ರಿಯಾಕ್ಷನ್​ ಆಗುತ್ತಿದೆ. ವಯಸ್ಸಾದವರ ದೇಹ ಮೊದಲೇ ದುರ್ಬಲವಾಗಿರುತ್ತದೆ. ಅಂಥವರಿಗೆ ಲಸಿಕೆಯಿಂದ ಪ್ರತಿಕೂಲ ಆಗುತ್ತಿದೆ ಎಂದು ನಾರ್ವೆ ವೈದ್ಯರು ತಿಳಿಸಿದ್ದಾರೆ. ಹಾಗಂತ, ಲಸಿಕೆ ತೆಗದುಕೊಂಡಿದ್ದಕ್ಕೇ ಇವರು ಮೃತರಾಗಿದ್ದಾರೆಯೇ ಎಂಬುದು ಪರಿಶೀಲನೆಯ ನಂತರವಷ್ಟೇ ತಿಳಿದುಬರಬೇಕು ಎಂದೂ ಹೇಳಿದ್ದಾರೆ. ಈ ಮಧ್ಯೆ ಫೈಜರ್​ ಲಸಿಕೆಯ ಪೂರೈಕೆಯನ್ನು ಅದರ ತಯಾರಿಕಾ ಕಂಪನಿ ತಾತ್ಕಾಲಿಕವಾಗಿ ಕೆಲವು ಕಡೆಗಳಲ್ಲಿ ನಿಲ್ಲಿಸಿದೆ.

ಇಲ್ಲಿಯವರೆಗೆ ಫೈಜರ್ ಲಸಿಕೆಯನ್ನು ನಾರ್ವೆಯಲ್ಲಿ ಒಟ್ಟು 30ಸಾವಿರ ಜನರು ಸ್ವೀಕರಿಸಿದ್ದಾರೆ. 23 ಜನರು ಸಾಯುತ್ತಿದ್ದಂತೆ ಅಲರ್ಟ್​ ಆಗಿರುವ ತಜ್ಞರು, ಲಸಿಕೆ ನೀಡುವಾಗ ವೈದ್ಯರು ಎಚ್ಚರಿಕೆ ವಹಿಸಬೇಕು. ಯಾರಿಗೆ ಕೊಡಬೇಕು? ಕೊಡಬಾರದು ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿಕೊಳ್ಳಬೇಕು ಎಂದೂ ಅವರು ಹೇಳಿದ್ದಾರೆ. ಇನ್ನು 23 ಮಂದಿ ಮೃತಪಟ್ಟಿದ್ದಲ್ಲದೆ, 21 ಮಹಿಳೆಯರು, ಎಂಟು ಮಂದಿ ಮಕ್ಕಳು ಅಸ್ವಸ್ಥರಾಗಿದ್ದಾರೆ. ಅದರಲ್ಲೂ 9ಮಂದಿಗೆ ಗಂಭೀರವಾಗಿ ಅಡ್ಡಪರಿಣಾಮ ಉಂಟಾಗಿದೆ. ಆದರೆ ಮಾರಣಾಂತಿಕವಾಗಿ ಅಲ್ಲ ಎಂದೂ ನಾರ್ವೆ ಆರೋಗ್ಯ ಇಲಾಖೆ ತಿಳಿಸಿದೆ.

ಪಶ್ಚಿಮ ಬಂಗಾಳ ಅಸೆಂಬ್ಲಿ ಚುನಾವಣೆ: ಬಿಜೆಪಿ-ಟಿಎಂಸಿ ಪಕ್ಷಗಳಲ್ಲಿನ ಆಂತರಿಕ ಬೆಳವಣಿಗೆಗಳು ಹೀಗಿವೆ