ಬೆಂಗಳೂರು: ನಿದ್ದೆ ಮಾತ್ರೆಗಳನ್ನು ಸೇವಿಸಿ ಸಿಎಂ ಬಿ.ಎಸ್.ಯಡಿಯೂರಪ್ಪರ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಎಂ.ಎಸ್. ರಾಮಯ್ಯ ಆಸ್ಪತ್ರೆ ಸೇರಿದ್ದರು. ಸದ್ಯ ಈಗ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆಯಿಂದ ಹೊರ ಬರುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧಕಿಡಿ ಕಾರಿದ್ದಾರೆ.
ಡಿಕೆಶಿಯ ವಿಡಿಯೋ ಬಾಂಬ್ ಆರೋಪಕ್ಕೆ ಸಂತೋಷ್ ಟಕ್ಕರ್ ಕೊಟ್ಟಿದ್ದಾರೆ. ಬೈ ಎಲೆಕ್ಷನ್ ಸೋಲಿನಿಂದ ಡಿ.ಕೆ.ಶಿವಕುಮಾರ್ಗೆ ಮತಿ ಕೆಟ್ಟಿದೆ ಎಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಸಂತೋಷ್ ಹೇಳಿದ್ದಾರೆ. ನಮ್ಮ ವಿರುದ್ಧ ಆರೋಪ ಮಾಡುವುದು ಡಿಕೆಶಿಗೆ ಚಾಳಿ. ಯಡಿಯೂರಪ್ಪ ಬಗ್ಗೆ ಮಾತನಾಡೋ ಮುನ್ನ ನಾಲಿಗೆ ಮೇಲೆ ಹಿಡಿತ ಇರಲಿ. ಡಿಕೆಶಿಗೆ ಒಂದು ತಿಂಗಳು ರಜೆ ಕೊಟ್ಟು ಆಸ್ಪತ್ರೆಗೆ ಸೇರಿಸಿ ಎಂದು ಸಂತೋಷ್ ಹೇಳಿದರು. ನಾನು ಕರೆ ಕೊಟ್ರೂ ಬಿಎಸ್ವೈ ಪರ 1 ಲಕ್ಷ ಜನ ಸೇರ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಸಂತೋಷ್ ಎಚ್ಚರಿಕೆ ನೀಡಿದ್ದಾರೆ.
ಸಂತೋಷ್ ಹೇಳಿಕೆಗೆ ತಿರುಗೇಟು ಕೊಟ್ಟ ಡಿಕೆಶಿ: ಸಂತೋಷ್ ಹೇಳಿಕೆಗೆ ಡಿಕೆಶಿ ತಿರುಗೇಟು ನೀಡಿದ್ದಾರೆ. ರಾಜಕೀಯ ಕಾರಣಕ್ಕಾಗಿ ಸಂತೋಷ್ ಈ ರೀತಿ ಹೇಳಿಕೆ ಕೊಡ್ತಿದ್ದಾರೆ. ಆಯ್ತು ಬಿಡಿ ರೆಸ್ಟ್ ತಗೊಳ್ತೀನಿ ಎಂದರು. ಸಂತೋಷ್ ಆತ್ಮಹತ್ಯೆ ಯತ್ನದ ಬಗ್ಗೆ ಅವರ ಧರ್ಮಪತ್ನಿಯೇ ಹೇಳಿದ್ದಾರಲ್ಲ. ಸಂತೋಷ್ ಈಗ ಆರ್ಡಿನರಿ ಪಿ.ಎ. ಅಲ್ಲ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯಾದರ್ಶಿ. ಹೀಗಿರುವಾಗ ಪ್ರಕರಣದ ತನಿಖೆ ಆಗೋದು ಬೇಡವಾ? ಎಂದು ಶಿವಕುಮಾರ್ ಪ್ರಶ್ನಿಸಿದ್ರು.
ಇದನ್ನೂ ಓದಿ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಎನ್.ಆರ್.ಸಂತೋಷ್ ಹೇಳಿದ್ದೇನು?