ಕಾರು ಅಪಘಾತಕ್ಕೆ 38 ಕುರಿಗಳು ಬಲಿ, ಪರಿಹಾರಕ್ಕೆ ಆಗ್ರಹ

  • TV9 Web Team
  • Published On - 16:09 PM, 24 Aug 2020
ಕಾರು ಅಪಘಾತಕ್ಕೆ 38 ಕುರಿಗಳು ಬಲಿ, ಪರಿಹಾರಕ್ಕೆ ಆಗ್ರಹ

ಬೆಳಗಾವಿ: ಅಪರಿಚಿತ ಕಾರು ಹರಿದ ಪರಿಣಾಮ 38ಕ್ಕೂ ಹೆಚ್ಚು ಕುರಿಗಳು ನಡುರಸ್ತೆಯಲ್ಲಿಯೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಿಕ್ಕ ಉಳಿಗೇರಿ ಗ್ರಾಮದಲ್ಲಿ ತಡರಾತ್ರಿ ಈ ಭೀಕರ ಘಟನೆ ಸಂಭವಿಸಿದೆ. ಇನ್ನು ಅಪಘಾತದಲ್ಲಿ ಹೊಳಿ‌ನಾಗಲಾಪುರ ನಿವಾಸಿ ಯಲ್ಲಪ್ಪ ಬಿಜ್ಜನ್ನವರ್ ಎಂಬುವರಿಗೆ ಸೇರಿದ 38ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಹೀಗಾಗಿ ಬದುಕಿಗೆ ಆಸರೆಯಾಗಿದ್ದ ಕುರಿಗಳ ಸಾವಿನಿಂದಾಗಿ ಯಲ್ಲಪ್ಪ ಬಿಜ್ಜನ್ನವರಿಗೆ ದಿಕ್ಕುತೋಚದಂತಾಗಿದೆ.

ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಘಟನೆಯ ಬಳಿಕ ಕಾರು ಚಾಲಕ ಕಾರ್​ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ. ಪರಾರಿಯಾಗಿರುವ ಚಾಲಕನನ್ನು ಪತ್ತೆ ಹಚ್ಚಿ ಸೂಕ್ತ ಪರಿಹಾರ ಕೊಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.